ಡಾ. ರಜನಿ
ಚಳಿ ಅಳಿದು
ರಣ ಬಿಸಿಲು
ಹುಲ್ಲು ಚಿಗುರಿ
ಹಸಿರು ಹರಡಿ
ಕೂಗಿ ಕೋಗಿಲೆ
ಮರ ಮರದಲಿ ದುಂಬಿ,ಜೇನು
ಉದುರಿ ಹೂವು ..
ಹಾದಿಯೆಲ್ಲಾ….
ನವಿರು ಮೆತ್ತೆ
ಅನೂಹ್ಯ ಬಣ್ಣಗಳ
ಭೂರಮೆಯ ಚಿತ್ರ ಪಟ
ಯಾವಾವುದೋ ಪುಷ್ಪಗಳ
ಸುವಾಸನೆ
ಅಡರಿ ನಾಸಿಕಕ್ಕೆ
ಹೃದಯದಲಿ ನೆನಪುಗಳ
ಲಗ್ಗೆ…
ನೀ ಅರಳೀ
ನಾ ಮುದುಡಿ….
ಕಾಮನ ಸುಡಲೀ ಹೇಗೆ?
ಹೂಮರಗಳ ಅಡಿಯಲೀ
ಕೈ ಕೈ ಜೋಡಿಸಿ
ಸಂಜೆಗೆಂಪಲೀ
ಹೂಚಾಮರದಡಿಯಲೀ
ಕಲ್ಲು ಬೆಂಚ ಮೇಲೆ
ಕಣ್ಣು ಮುಚ್ಚಿ
ಕದ್ದು ತುಟಿ ಕೆಂಪು ….
ಮತ್ತೆ ನಡೆದು…
ಹಿಡಿದು ನಡು
ನೋಡುವವರಿಲ್ಲ ನಮ್ಮನು..
ವಸಂತನ ಮತ್ತು..
ಭೂರಮೆಯೇ
ತೆಗೆದುಕೊ
ಕಾಮನಬ್ಬಕ್ಕೆ
ಬೇರೇಯದೇ
ಮಾಸ
ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ರಜನಿ ಅವರ ಕವನ ಪರಿಸರದ ನೇಯ್ಗೆಯಾಗಿದೆ. ಅವರದು ಗಾಢ, ನಿಗೂಢಗಳನ್ನು ಒಳಗೊಳ್ಳುವ. ಎರಡು ವಿಭಿನ್ನ ನೆಲೆಗಳನ್ನು, ನೋವು,ನಲಿವುಗಳನ್ನು ತುಲನಾತ್ಮಕವಾಗಿ ಒರೆಗೆ ಹಚ್ಚುವ ಅವರ ಕವನಗಳ ಸಶಕ್ತತೆಯಿಂದ ಕೂಡಿರುತ್ತವೆ.