ಡಾ. ರಜನಿ ಎಂ
ದುರಂತವೆಂದರೆ
ಪ್ರಬುದ್ಧ ಮನಸ್ಸು …
ಪ್ರಣಯ ಭರಿತ
ಹೃದಯ
ಒಂದೇ ದೇಹದಲ್ಲಿರುವುದು.
ಹೆಣ್ಣಿಗೆ ಬೇಕಾಗಿದ್ದು
ಸುರ ಸುಂದರಾಂಗ,
ಕುಬೇರ,
ಅಲ್ಲ…
ಅವಳ ಕಣ್ಣಿನ ನೋವನ್ನು
ಹೇಳದೇ ಅರ್ಥ ಮಾಡಿಕೊಂಡು
ತನ್ನೆದೆಗೆ ಒರಗಿಸಿಕೊಂಡು
ಇಲ್ಲಿದೆ ನೋಡು
” ನಿನ್ನ ಮನೆ” ಎನ್ನುವ ಗಂಡು.
ಆಕಾಶ
ನನಗೂ ಆಕಾಶಕ್ಕೂ
ಏನು ವ್ಯತ್ಯಾಸ
ಕೇಳಿದಳು ನಲ್ಲೆ…
ನಾ ನುಡಿದೆ ….
ನಲ್ಲೆ ನೀನು ನಕ್ಕಾಗ
ನಾನು ಆಕಾಶವನ್ನೇ
ಮರೆವೆ .
‘ನಿಜಾರ್ ಖಬ್ಬಾನಿ’ ಕವಿತೆಗಳ
ಭಾವಾನುವಾದ.
ನಿಜಾರ್ ಖಬ್ಬಾನಿ (1923-1998)ಸಿರಿಯಾದ ರಾಷ್ಟೀಯ ಕವಿ ಎನಿಸಿಕೊಂಡುವರು. ಅವರು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೈ ಆಡಿಸಿದವರು. ಅವರ ಕವನಗಳು ಸರಳವಾಗಿದ್ದರೂ ಮಾರ್ಮಿಕವಾಗಿರುತ್ತವೆ. ಪ್ರೇಮ ಕವನಗಳೂ ಹಾಗೆಯೆ. ಅವರ ಕವನಗಳ ಭಾವಾನುವಾದದ ಪ್ರಯತ್ನ ಡಾ. ರಜನಿ ಅವರಿಂದ.