ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಆರನೆಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಇವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ನಿಮ್ಮಲ್ಲಿರುವ ಶಕ್ತಿಯನ್ನು ನೀವು ಗುರುತಿಸಿಕೊಳ್ಳಿ. ನಿಮ್ಮ ತಂದೆತಾಯಿಗಳ ಕನಸು ಸಾಕಾರಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವು ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ಇಲ್ಲಿಯೇ ನಿರ್ಧರಿಸಿಕೊಳ್ಳಬೇಕು. ಉತ್ತಮ ಮಾರ್ಗದಲ್ಲಿ ನಡೆದು ನಾಡಿನ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು. ತಂತ್ರಜ್ಞಾನವನ್ನು ಅಗತ್ಯ ಮೀರಿ ಬಳಸಬೇಡಿ. ಮೊಬೈಲ್ ಅತಿಯಾದ ಬಳಕೆ ನಿಮಗೆ ಮಾರಕ ಎಂಬ ಕಿವಿಮಾತನ್ನು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜನಕಥಾದಾಸರಾದ ಡಾ. ಲಕ್ಷಣ್ ದಾಸ್ ಅವರು ಆಗಮಿಸಿದ್ದರು. ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. “ಜನನಿ ಜನಕರ ಸೇವೆಯ ಪ್ರಾಮುಖ್ಯತೆಯನ್ನು ಪ್ರಸ್ತುತಪಡಿಸಿದರು. ತಂದೆ, ತಾಯಿ, ಶಿಕ್ಷಕರು ಈ ಮೂವರು ನಿಮ್ಮ ಜೀವನ ರೂಪಿಸುವ ದೇವರು ಅವರಿಗೆ ಗೌರವ ಕೊಡಬೇಕು, ಜೀವನವನ್ನು ಬದಲಾಯಿಸುವ ಮಹತ್ತರವಾದ ಘಟ್ಟವಾದ ಪದವಿಪೂರ್ವ ಹಂತ, ಇಲ್ಲಿ ಜಾಗೃತಿಯಿಂದ ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ನನ್ನ ಮೊಮ್ಮಗಳು ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈಗ ಹಾಸನ ಮೇಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀ ಹೆಂಜಾರಪ್ಪ ಟಿ. ಎಸ್, ಶಿಕ್ಷಣದತ್ತಿಯ ಟ್ರಸ್ಟಿಗಳಾದ , ಶ್ರೀ ಡಬ್ಲೂ ಡಿ ಅಶೋಕ್, ಶ್ರೀ ಕೆ. ಕೃಷ್ಣಸ್ವಾಮಿ, ಶ್ರೀ ಎನ್.ಪಿ ಕಾರ್ತಿಕ್ ಅವರು ಹಾಜರಿದ್ದರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸದಸ್ಯರಾದ ಶಾಂತ ಕುಮಾರಿ ಪಿ, ಶೀ ರಾಕೇಶ್ ಎನ್ ವಿ, ಭಾನುಪ್ರಕಾಶ್ ಎಸ್ ಡಿ, ಅವರು ಹಾಜರಿದ್ದರು. ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ ಟಿ, ಶೇಷಾದ್ರಿಪುರಂ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನಂದರಾಜ್ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.