ಕನಾ೯ಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಾ೯ಟಕ ಲೇಖಕಿಯರ ಸಂಘ ಮತ್ತು ಕನ್ನಡ ಸಂಘ,ಶೇಷಾದ್ರಿ ಪುರಂ ಕಾಲೇಜು ಇವರ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ ಸಾಂಸ್ಕೃತಿಕ ಕಾಯ೯ಕ್ರಮಗಳು,ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ರವರು ಮಾತನಾಡಿದರು, ಗಡಿ ಪ್ರದೇಶಗಳಲ್ಲಿ ಕನ್ನಡ ಅಸ್ಮಿತೆ ಉಳಿಯಬೇಕು,ಕನ್ನಡ ಭಾಷೆ ಮತ್ತು ಸಾಹಿತ್ಯ,ಸಂಸ್ಕೃತಿ ಪ್ರಥಮ ಆದ್ಯತೆಯಾಗ ಬೇಕು ಮಾತೃ ಭಾಷೆ ಯಾವುದೇ ಆಗಿರಲಿ ನೆಲದ ಭಾಷೆಗೆ ಪ್ರಾಮುಖ್ಯತೆ ನೀಡಬೇಕು,ಸಂಸ್ಕೃತಿ ಪ್ರಗತಿಯ ಮೂಲ, ಕನ್ನಡಿಗರು ಸಾಮರಸ್ಯ ಪ್ರಿಯರು ಸಂಘಷ೯ ಮನೋಭಾವನೆಯವರಲ್ಲ ಎಂದು ನುಡಿದರು.
ಕನ್ನಡದ ಕೆಲಸಕ್ಕೆ ಸದಾ ಕೈ ಜೊಡಿಸುತ್ತೇವೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು ತಮ್ಮ ಮೂಲ ಊರಾದ ವೂಡೇಯ ಬಗ್ಗೆ ಹೇಳುತ್ತಾ ತಮ್ಮ ಊರು ವೂಡೇ ಕೂಡ ಗಡಿ ಪ್ರದೇಶದ ಊರು ಆಗಾಗಿ ಗಡಿನಾಡಿನ ಸಮಸ್ಯೆಗಳಿಂದ ಹೊರತಾಗಿಲ್ಲ. ಕನ್ನಡದ ಕೆಲಸಕ್ಕೆ ಯಾವಾಗಲೂ ನಮ್ಮ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸದಾ ಕೈ ಜೊಡಿಸುತ್ತದೆ ಎಂದರು.
ಅಪರ ಮುಖ್ಯ ಕಾಯ೯ದಶಿ೯ ಡಾ ಶಾಲಿನಿ ರಜನೀಶ್ ಅವರು ಮಾತನಾಡಿ ಕೆಲವು ಅಂಕಿ ಅಂಶಗಳನ್ನು ತೆರೆದಿಟ್ಟರು. ವಾರ್ಷಿಕ ಜಿಡಿಪಿ ಪ್ರಕಾರ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪಡೆಯುವ ೭೦% ಮಕ್ಕಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶೇಕಡಾ ೩೦ ರಷ್ಟು ಮಾತ್ರ. ಯಾಕೆಂದರೆ ಮಕ್ಕಳು ಮತ್ತು ಮನೆಯ ಜವಾಬ್ದಾರಿಯನ್ನು ನಿರ್ವಹಿಸುವ ಕಾರಣದಿಂದ ಸಾಕಷ್ಟು ಜನ ಹೆಣ್ಣು ಆದಾಯ ರಹಿತ ಕೆಲಸ ಮಾಡುತ್ತಿದ್ದಾರೆ. ಇದನ್ನು ಜಿಡಿಪಿಗೆ ಗಣನೆಗೆ ತೆಗೆದು ಕೊಳ್ಳುವುದಿಲ್ಲ. ಆಗಿದ್ದರೆ ಹೆಣ್ಣಿನ ಶ್ರಮ ಆದಾಯಕ್ಕೆ ಸೇರಿಲ್ಲವೇ ?
ಮಾಜಿ ಸಚಿವೆ ಡಾ. ಲೀಲಾದೇವಿ ಆರ್ ಪ್ರಸಾದ್ ಅವರು ತಮ್ಮ ತೊಂಬತ್ತೊಂದನ್ನೆ ವಯಸ್ಸಿನಲ್ಲಿ ಕೂಡ ಕ್ರಿಯಾಶೀಲವಾಗಿರುವ ಅವರು ಲೇಖಕಿಯರ ಸಂಘದ ಹುಟ್ಟಿ ಬಂದ ಬಗೆ ಹಾಗೂ ಅದರ ಹಿಂದಿನ ಪರಿಶ್ರಮವನ್ನು ತಿಳಿಸಿದರು. ಲೇಖಕಿಯರ ಸಂಘ ಉತ್ತಮವಾಗಿ ನಡೆಸಿಕೊಂಡು ಹೋಗಲು ಸಾಮರಸ್ಯ, ಏಕತೆ, ಪರಿಶ್ರಮದ ಕೆಲವು ಕಿವಿಮಾತನ್ನು ಹೇಳಿದರು.
ಶ್ರೀಮತಿ ಹೇಮಲತಾ ಮಹಿಷಿ ನಿವೃತ್ತ ನ್ಯಾಯಾದೀಶರು, ಮಾತನಾಡಿದರು ಗಡಿಭಾಗದ ಅವ್ಯವಸ್ಥೆಯನ್ನು ಕೇಳುವವರು ಯಾರು.. ? ಗಡಿನಾಡಿನ ಕಷ್ಟಗಳನ್ನು ಬೆಂಗಳೂರಿನವರು ತಿಳಿದುಕೊಳ್ಳಬೇಕು. ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು. ಇತಿಹಾಸವನ್ನು ಇಂದಿನ ಯುವ ಜನತೆ ತಿಳಿಯಬೇಕು ಎಂದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾಯ೯ದಶಿ೯ಯಾದ ಪ್ರಕಾಶ್ ಮತ್ತೀಹಳ್ಳಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.