ತುಮಕೂರಿನಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಸರಾ ಸಂಭ್ರಮ ಸಡಗರ ಆವರಿಸಿದೆ. ನಗರದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ನಗರದ ವಿವಿಧ ಕಲಾತಂಡಗಳು ದಸರಾ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡುತ್ತಿವೆ.
ಜಾನಪದ ಗೀತೆಗಳ ಗಾಯನ ಸ್ಪರ್ಧೆ,ಜಾನಪದ ನೃತ್ಯ, ನಾಟಕ ಪ್ರದರ್ಶನ ಹಾಗೂ ನಗರ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಹಾಸ್ಯ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ ಭಜನಾ ಸ್ಪರ್ಧೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಗರದ ಲೇಖಕಿರಯರ ಸಂಘದ ಸದಸ್ಯರೂ ಸೇರಿದಂತೆ ದೌರ್ಜನ್ಯ ವಿರೋಧಿ ವೇದಿಕೆ, ಸಾಹಿತ್ಯ ಪರಿಷತ್ ಸದಸ್ಯರು ಎಲ್ಲರೂ ಪಾಲ್ಗೊಳ್ಳುವ ಮೂಲಕ ದಸರಾ ರಂಗೇರಿದೆ. ತುಕೂರು ದಸರಾವನ್ನು ಮಹೇಶ್ ಜೋಶಿ ನೆರವೇರಿಸಲಿದ್ದಾರೆ. ಪ್ರತಿದಿನ ಸಿಡಿಮದ್ದಿನ ಪ್ರದರ್ಶನವೂ ಇದೆ.
ಎಂದಿನಂತೆ ಈ ವರ್ಷದ ದಸರವು ಕಳೆಗಟ್ಟಿದೆ.