- ತುಮಕೂರು : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿಗೆ ಹಿಂದುಳಿದ ವರ್ಗಗಳ ಪ್ರವರ್ಗ-3ಎನಲ್ಲಿ ಕ್ರಮ ಸಂಖ್ಯೆ 1(ಎ) ರಿಂದ 1(ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪವಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾ ಒಕ್ಕಲಿಗ, ದಾಸ್‌ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ (Gouda)/ ಗೌಡ (Gowda), ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡ, ನಾಮಧಾರಿಗೌಡ, ಉಪ್ಪಿನ ಕೊಳಗ ಉತ್ತಮ ಕೊಳಗ ಒಕ್ಕಲಿಗ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಲಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ,
ಶೈಕ್ಷಣಿಕ ಸಾಲ ಯೋಜನೆ(Fresh Students), ಶೈಕ್ಷಣಿಕ ಸಾಲ ಯೋಜನೆ(Renewal), ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ(Fresh Students) ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ(ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)ಗಳಡಿ ಸಾಲ ಸೌಲಭ್ಯ ಒದಗಿಸಲಾಗುವುದು. ಈ ಯೋಜನೆಯಡಿ ಅರ್ಜಿ ಸಲ್ಲಿಸಬಯಸುವವರು ಸೇವಾಸಿಂಧು
ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
https://www.sevasindhu.karnat aka.gov.in)ಗ್ರಾಮ ಒನ್
(https://gramaone.karnataka.gov
.in) ಹಾಗೂ ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆಯಡಿ ಕೌಶಲ್ಯ ತಂತ್ರಾಂಶ (https://www.kaushalkar.com) ಲ್ಲಿ ಅಕ್ಟೋಬರ್ 30ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.