ಸಿಹಿ ಸರಿಯಾಗಿರಬೇಕು
ಹೆಚ್ಚೂ ಆಗಬಾರದು
ಕಡಿಮೆ ಎನಿಸಬಾರದು.
ಹೂರಣ ಅತೀ
ನುಣ್ಣಗೆ ರುಬ್ಬಬಾರದು.
ಕಣಕ ತೆಳ್ಳಗೆ…
ಹರಿಷಿನ ಕಂಡೂ ಕಾಣದಂತೆ
ಏಲಕ್ಕಿ
ರುಚಿ ತಿಂದರೆ
ಮತ್ತೇರುವಂತೆ
ಮೆಂತ್ಯ ಎಲೆ ತೊಟ್ಟು
ಹಾಕಿ ಕಾಯಿಸಿದ ತುಪ್ಪ
ಬಿಸಿ ಮಾಡಿ…ಒಬ್ಬಟ್ಟಿನ
ಮೇಲೆ ಬಿಟ್ಟು..
ತುಪ್ಪದಲ್ಲಿ
ನೆಂದು
ಮಿದ್ದು ಕೊಂಡು
ತಿನ್ನಬೇಕು
ಮಕಚಿಟ್ಟು
ಆದಾಗ
ಮಧ್ಯೆ ಕಳ್ಳೆ ಗೊಜ್ಜು
ತಿಂದು ತೇಗಿ..
ಹೊಂಗೆ ಮರದಡಿ
ಮಲಗಿದರೆ
..ಅರಳಿದ ವಸಂತ
ಮುಂದಿನ ದಿನಗಳಿಗೆ
ಒಳ್ಳೇ ಮುನ್ನುಡಿ
ಬರೆದ ಹಾಗೆ..
ಒಬ್ಬಟ್ಟು ಹಬ್ಬದ ಸಂದರ್ಭದಲ್ಲಿ ಮಾಡುವ ಒಂದು ಸಿಹಿ ಖಾದ್ಯವಷ್ಟೆ ಅಲ್ಲ ಅದೊಂದು ಬಾಂದವ್ಯ ಬೆರೆತ ಅಡುಗೆ, ಒಬ್ಬಟ್ಟು ಮಾಡುವ ಕಲೆಯೂ ಕೂಡ ವಿಶೇಷ. ಹಿತಮಿತವಾದ ಸಿಹಿ ಯೊಂದಿಗೆ ಹದವರಿತ ಬೇಯುವಿಕೆ ಜೀವನದಲ್ಲೂ ಹಾಗೆ ಅಲ್ಲವೇ ಹಿತ ಮಿತವಾದ ನಡವಳಿಕೆ ಸೊಗಸು. ಬೇಸಿಗೆಯ ಬಿಸಿಲಿನ ಝಳಕ್ಕೆ ಹೊಂಗೆಯ ತಂಪು. ಬೇವುಬೆಲ್ಲದ ಜೀವನ ತತ್ವ ಕೂಡ ಸೊಗಸು ಯುಗಾದಿಯ ವಿಶೇಷ ಖಾದ್ಯಕೂಡ ಹೌದು