ನಾಗವಲ್ಲಿ: ಹಳ್ಳಿಗೆ ತುಮಕೂರು ವಿಶ್ವವಿದ್ಯಾಲಯವನ್ನು ತಂದ ಹೆಮ್ಮೆ ನನಗೆ ಇದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದರು.
ಇಲ್ಲಿಗೆ ಸಮೀಪದ ಸೀನಪ್ಪನಹಳ್ಳಿ ದೊಡ್ಡಮ್ಮ ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿದರೆ ಕಟ್ಟೆ ಗೆ ವಿಶ್ವವಿದ್ಯಾಲಯ ತಂದಿರುವುದರಿಂದ ಈ ಭಾಗದ ಹಳ್ಳಿ ಮಕ್ಕಳಿಗೆ ಕೈ ಅಳತೆ ದೂರದಲ್ಲಿ ಶಿಕ್ಷಣ ಸಿಗಲಿದೆ. ಉನ್ನತ ಶಿಕ್ಷಣದ ಕನಸು ನೆರವೇರಲಿದೆ ಎಂದರು.
ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜನೆಯನ್ನು ನೆನಪು ಮಾಡಿಕೊಂಡ ಅವರು ಹೇಮಾವತಿ ನದಿ ನೀರು ತಂದಿದ್ದರಿಂದ ಈ ಭಾಗವು ಕೃಷಿಕರಿಗೆ ನೆರವಾಗಿದೆ ಎಂದರು.
ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಈ ಸಲ ಜನರು ನನಗೆ ಆರ್ಶೀವದಿಸಬೇಕು. ಅಭಿವೃದ್ಧಿಯಲ್ಲಿ ಗ್ರಾಮಾಂತರ ಕ್ಷೇತ್ರ ನಂಬರ್ ಒನ್ ಆಗಬೇಕಾಗಿದೆ. ಇದೇ ನನ್ನ ಕನಸು ಎಂದರು.
ಗ್ರಾಮದ ಹಲವು ಮುಖಂಡರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಇತರರು ಇದ್ದರು.