ಪಾವಗಡ: ‘ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನ ಪರ್ಯಂತ ನ್ಯಾಯಾಲಯ, ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ’ ಎಂದು ರೌಡಿ ಶೀಟರ್ಗಗಳಿಗೆ ಡಿವೈಎಸ್ ಪಿ ಕೆ.ಜಿ.ರಾಮಕೃಷ್ಣ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ತಾಲ್ಲೂಕಿನ ರೌಡಿಶೀಟರ್ಗಳ ಪರೇಡ್ ನಡೆಸಿದ ಡಿವೈಎಸ್ ಪಿ, ಎಂಒಬಿ, ರೌಡಿ ಶೀಟರ್ಗಳಿಗೆ ಹಲವು ಸೂಚನೆ ನೀಡಿದರು.
‘ತಾಲ್ಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಬಾಹಿರ ಚಟುವಟಿಕೆ, ಬಡ್ಡಿ ವ್ಯವಹಾರ, ಮಟ್ಕಾ, ಇಸ್ಪೀಟು ಜೂಜಾಟಗಳಲ್ಲಿ ತೊಡಗಿಕೊಳ್ಳಬಾರದು. ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ರೌಡಿ ಶೀಟರ್ ಗಳಾಗಿಯೇ ಮುಂದುವರೆಯುತ್ತೀರಿ. ಕುಟುಂಬ ಸದಸ್ಯರು ನಿಮ್ಮ ತಪ್ಪಿನಿಂದ ಆಸರೆಯಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾರೆ. ’ ಎಂದು ಕಠಿಣ ಎಚ್ಚರಿಕೆ ನೀಡಿದರು.
ಕಷ್ಟ ಪಟ್ಟು ದುಡಿದು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಿ. ಕುಟುಂಬ ಸದಸ್ಯರೊಡನೆ ನೆಮ್ಮದಿಯಾಗಿರಿ. ಹಳೆಯ ಛಾಳಿ ಮುಂದುವರೆಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತಂದಲ್ಲಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗುತ್ತೀರಿ ಎಂದು ಎಚ್ಚರಿಸಿದರು.
ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಕಾಂತರೆಡ್ಡಿ, ಸಬ್ ಇನ್ ಸ್ಪೆಕ್ಟರ್ ಗುರುನಾಥ್, ಭಾರತಿ, ರಂಗಪ್ಪ, ರಾಜಣ್ಣ ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದ ಡಿವೈಎಸ್ಪಿ
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on