ಕಲ್ಲಿನಲ್ಲಿ ಹುಟ್ಟಿದ
ಮರಕ್ಕೆ ಆಗಾಗ್ಗೆ
ನೀರೆರೆದವರು ಯಾರೋ?
ಬೆಟ್ಟದಿಂದ ನದಿ
ಕಲ್ಲಿನೊಳಗೆ
ನೀರ ಸೆಲೆ …
ಕಲ್ಲೇ ಮುಂದೆ
ಮಣ್ಣಾಗುವ
ರೀತಿ
ಕಲ್ಲೊಳಗೆ ತೂರಿ
ಮಣ್ಣು
ಮುಟ್ಟಿದೆ.
ನೀನೇ ಹೋಳಾಗಿ
ನನಗೆ ಜೀವ
ಕೊಟ್ಟೆ ..
ಕಲ್ಲಿನೊಳಗೆ
ಹುಟ್ಟಿದರೂ
ಲಕ್ಷ್ಯ ಎಲ್ಲಾ
ಆಕಾಶದೆತ್ತರಕ್ಕೆ..
ಕಲ್ಲಿನ
ಸಂದಿಯಲ್ಲಿ
ಬೀಜ
ಬಿತ್ತಿದವರು … ಹಕ್ಕಿಗಳೇ??
ಮಣ್ಣಲ್ಲಿ
ಮೊಳೆತು …ಕಲ್ಲಲ್ಲಿ ಬೆಳೆದು …
ಬಾಡಿಗೆ ತಾಯಿ
ಕಲ್ಲೇ??
ನನಗೆ
ಪೋಷಿಸಿ
ನೀನು ತಾಯಿ ಆದೆಯಾ?
ಬಿಡು ಸಾಲದು
ನಿನ್ನ ನೆತ್ತಿ ನೀರು
ನುಗ್ಗಿ ಪಡೆಯುವೆ
ಭರ್ತಿ ನೀರು..
ಡಾ. ರಜನಿ