ನಾವು ಯಾವುದೇ ಪದಾರ್ಥವನ್ನು ಕೊಳ್ಳುವಾಗ ಅಗ್ಗದ ಸರುಕಿನ ಕಡೆ ಗಮನ ಹೋಗುತ್ತದೆ. ಆದರೆ ನಾವು ಕೊಳ್ಳುತ್ತಿರುವ ಎಣ್ಣೆ ಯಾವುದು..? ಉದಾಹರಣೆಗೆ ಕಡ್ಲೆಬೀಜದ ಎಣ್ಣೆಯನ್ನು ಕೊಂಡುಕೊಂಡರೆ, ಮಾರುಕಟ್ಟೆಯಲ್ಲಿ ಕಡ್ಲೆಬೀಜದ ಬೆಲೆ ಎಷ್ಟು…? ಒಂದು ಕಿಲೋ ಕಡ್ಲೆಬೀಜದ ಎಣ್ಣೆಯನ್ನು ತೆಗೆಯಲು ಕನಿಷ್ಟ ಮೂರು ಕಿಲೋ ಕಡ್ಲೆಬೀಜ ಬೇಕಾಗುತ್ತದೆ. ತಯಾರಿಕಾ ವೆಚ್ಚ ಎಲ್ಲಾ ನೀವೇ ಲೆಕ್ಕ ಹಾಕಿದಾಗ ನಾವು ಕೊಂಡುತ್ತರುತ್ತಿರುವ ಎಣ್ಣಿ ಬೆಲೆಗೂ ಅಸಲಿ ಎಣ್ಣಿ ಬೆಲೆಗೂ ತಾಳೆ ಆಗುವುದಿಲ್ಲ. ಆಗಿದ್ದರೆ ಮಾರುಕಟ್ಟೆಯಿಂದ ತರುತ್ತಿರುವ ಎಣ್ಣಿ ಅಸಲಿ ಹೇಗಾಗಲು ಸಾಧ್ಯ..? ಲಾಭವಿಲ್ಲದೆ ಯಾರಾದರೂ ಉದ್ದಿಮೆ ನಡೆಸುತ್ತಾರೆಯೇ…? ಇವೆಲ್ಲಾ ಪ್ರಶ್ನೆಯನ್ನು ಕೊಳ್ಳುವ ಮುನ್ನ ನಾವು ಕೇಳಿಕೊಳ್ಳಬೇಕಿದೆ.
ಹಿಂದಿನ ಕಾಲದಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತಿದ್ದರು. ಅವರು ಪ್ರತಿನಿತ್ಯ ಆಹಾರದಲ್ಲಿ ಬೆಣ್ಣೆ,ತುಪ್ಪಾ, ಕರಿದ ತಿನಿಸುಗಳಿರುತ್ತಿದ್ದವು. ಆದರೆ ಇಂದು ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಸಾಯುತ್ತಿದ್ದಾರೆ.. ಇದಕ್ಕೆ ಕಾರಣ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಎನ್ನುತ್ತಾರೆ ವೈದ್ಯರು.. ನಮ್ಮ ಹಿರಿಯರು ಬಿಟ್ಟು ಹೋಗಿರುವ ಆರೋಗ್ಯಕರ ಬದುಕನ್ನು ನಮ್ಮದಾಗಿಸಿಕೊಳ್ಳುವುದೊಂದೆ ಮಾರ್ಗ. ನಮ್ಮ ಸಾಂಪ್ರದಾಯಿಕ ಆಹಾರ ಶೈಲಿಯನ್ನು ವಿದೇಶಿಯರು ಅನುಸರಿಸುತ್ತಿದ್ದಾರೆ. ಆದರೆ ನಾವು ಅವರ ಅನಾರೋಗ್ಯಕರ ಆಹಾರ ಶೈಲಿಯನ್ನು ಅನುಸರಿಸುತ್ತಿದ್ದೇವೆ.
ಹಾಗಾದರೆ ಅಡಿಗೆ ಎಣ್ಣೆಗಳನ್ನು ಹೇಗೆ ತಯಾರಿಸಬೇಕು?
- ನಮ್ಮ ಪೂರ್ವಜರು ಎತ್ತಿನಿಂದ ಚಲಿಸುವ ಮರದ ಗಾಣಗಳನ್ನು ಬಳಸಿ ಎಣ್ಣೆ ತಯಾರಿಸುತ್ತಿದ್ದರು. ಈ ರೀತಿಯಲ್ಲಿ ತಯಾರಾದ ಎಣ್ಣೆಯು ನೈಸರ್ಗಿಕ, ಉತ್ತಮ ಹಾಗೂ ಸುರಕ್ಷಿತ. ಈ ರೀತಿಯಲ್ಲಿ ತಯಾರಿಸಿದಾಗ ಎಣ್ಣೆ ಬಿಸಿಯಾಗುವುದಿಲ್ಲ. ಎತ್ತು ಮರಗಾಣದಲ್ಲಿ ಸಾಮಾನ್ಯ ಒತ್ತಡ ಮತ್ತು ತಾಪಮಾನದಲ್ಲಿ ಎಣ್ಣೆ ತಯಾರಾಗುವುದರಿಂದ ಪೋಷಕಾಂಶಗಳು ನಶಿಸುವುದಿಲ್ಲ.
- ಇತ್ತೀಚೆಗೆ ಕೆಲವು ಕಂಪನಿಗಳು ಕೋಲ್ಡ್ ಪ್ರೆಸ್ ಎಂಬ ಹೆಸರಿನಲ್ಲಿ ಅದರ ಉತ್ಪಾದನೆ ಹೆಚ್ಚಿಸಲು ಯಂತ್ರದಿಂದ ಅಡಿಗೆ ಎಣ್ಣೆಯನ್ನು ಉತ್ಪಾದಿಸುತ್ತವೆ. ಆದರೆ ಯಂತ್ರದಲ್ಲಿ ಆರ್.ಪಿ.ಎಂ. (ಯಂತ್ರದ ವೇಗ) ಹೆಚ್ಚಿರುವುದರಿಂದ ಸಾಮಾನ್ಯ ತಾಪಮಾನ ಮತ್ತು ಒತ್ತಡದಲ್ಲಿ ಉತ್ಪಾದನೆಯಾಗುವುದಿಲ್ಲ. ರಿಫೈನ್ಸ್ ಆಯಿಲ್‌ಗಳ ಮೂಲಕ ಸಾವಕಾಶವಾಗಿ ಕೊಲ್ಲುವ ವಿಷವನ್ನು ಉಣಬಡಿಸಲಾಗುತ್ತಿದೆ. ಮರದ ಎತ್ತಿನ ಗಾಣದಿಂದ ತೆಗೆದ ಎಣ್ಣೆಯೇ ನಿಜವಾದ ಆರೋಗ್ಯಕ್ಕೆ ಯೋಗ್ಯವಾದ ಎಣ್ಣೆ.
ರೀಫೈನ್ಸ್ ಎಣ್ಣೆಯಿಂದ ಆಗುವ ಅನಾನುಕೂಲಗಳೇನು..?
ರೀಫೈನ್ ಎಣ್ಣೆ 200+C ಸಂಸ್ಕರಿಸಲಾಗುವುದರಿಂದ, ಹೆಚ್ಚಿನ ಪೋಷಕಾಂಶಗಳನ್ನು ಕಳೆದುಕೊಂಡಿರುತ್ತದೆ
ಬಣ್ಣ ರಹಿತ
(ಫುಮ) ರಹಿತ
ಟ್ರಾನ್ಸ್ ಫ್ಯಾಟ್ ನಿಂದ ಕೂಡಿದೆ
ಆರೋಗ್ಯಕರ ಹೃದಯಕ್ಕೆ ಅಪಾಯಕಾರಿ
ಜಾಹೀರಾತು
ರೀಫೈನ್ ಆಯಿಲ್:
ರೀಫೈನ್ಸ್ ಆಯಿಲ್‌ನಲ್ಲಿ ಪೆಟ್ರೋಲಿಯಂ ಕೆಮಿಕಲ್ಸ್‌ನಂತಹ ವಿಷಕಾರಿ ವಸ್ತುವನ್ನು ಬಳಸಲಾಗುತ್ತದೆ. ರೀಫೈನ್ಸ್ ಆಯಿಲ್ ಕೆಡದೆ ಇರುವುದಕ್ಕೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ.
ರೀಫೈನ್ಸ್ ಆಯಿಲ್ ಉಪಯೋಗ ಮಾಡುವುದರಿಂದ ಆಗುವ ದುಷ್ಪರಿಣಾಮಗಳು
3 ಹೃದಯ ಸಂಬಂಧಿ ಕಾಯಿಲೆಗಳು, ಅತಿ ಚಿಕ್ಕ ವಯಸ್ಸಿನಲ್ಲಿ ಉಲ್ಬಣಗೊಂಡು ಹೃದಯಾಘಾತ ಸಮಸ್ಯೆಗೆ ಕಾಣಬಹುದಾಗಿದೆ.
ರೀಫೈನ್ ಎಣ್ಣೆ ರಕ್ತದಲ್ಲಿ ಕೊಬ್ಬಿನಾಂಶವನ್ನು ಅಧಿಕ ಮಾಡುತ್ತದೆ.
3 ಕಿಡ್ನಿ ಸಮಸ್ಯೆಯನ್ನು ತಂದೊಂಡುತ್ತದೆ.
3 ಕ್ಯಾನ್ಸ್‌ರ್‌ಗೆ ಕಾರಣವಾಗುತ್ತದೆ.
3 ಮಧುಮೇಹದಂತಹ ರೋಗಗಳನ್ನು ತಂದೊಡ್ಡುತ್ತದೆ.
3 ಮೆದುಳಿಗೆ ಸಂಬಂಧಿಸಿದ ಕಾಯಿಲೆ ಬರುತ್ತದೆ.
ಈ ಎಲ್ಲಾ ಕಾರಣಗಳಿಂದ ನಮ್ಮ ಪೂರ್ವಜರು ಬಳಸುತ್ತಿದ್ದ ಆರೋಗ್ಯಕರವಾದ ಎತ್ತಿನ ಗಾಣದ ಎಣ್ಣೆಯನ್ನು ಬಳಸುವುದು ಉತ್ತಮ.
ಸ್ವಾಭಾವಿಕವಾಗಿ ತಯಾರಾದ ಗಾಣದ ಎಣ್ಣೆಯಲ್ಲಿ ಕೋಲ್ಡ್ ಪ್ರೆಸ್ಟ್ ಎಲ್ಲಾ ಪೋಷಕಾಂಶಗಳು ಉಳಿದುಕೊಂಡಿರುತ್ತದೆ
ಸ್ವಾಭಾವಿಕ / ನೈಜ / ಬಣ್ಣ
ಟ್ರಾನ್ಸ್ ಫ್ಯಾಟ್ ರಹಿತ
ಆರೋಗ್ಯಕ್ಕೆ ಉತ್ತಮ
100% ಶುದ್ಧ ಹಾಗೂ ಸಂರಕ್ಷಕಗಳಿಂದ ಮುಕ್ತ ವಾಗಿರುವ ಆರೋಗ್ಯಕರ ಎಣ್ಣೆಯನ್ನು ಬಳಸಿ ಆರೋಗ್ಯ ಕಾಪಾಡೋಣ.
Order Online:: https://mindroit.net/desi_food_factory
96060328721 / 9606032868
ಕಡಲೇಕಾಯಿ ಎಣ್ಣೆ : ಈ ಎಣ್ಣೆಯಲ್ಲಿರುವ ರೆಸ್-ವೆರಟ್ರಾಲ್ ಎನ್ನುವ ರಾಸಾಯನಿಕ
(ಫೀನೋಲಿಕ್ ಕಂಪೌಂಡ್) ದೇಹದಲ್ಲಿರುವ ಅನೇಕ ವಿಷಪೂರಿತ ಅಂಶಗಳನ್ನು ತಟಸ್ಥಗೊಳಿಸುತ್ತದೆ. ಮುದಿತನವನ್ನು ದೂರವಿಡಲು ಆಮ್ಲಜನೀಕರಣದ ತಡೆ, ದೇಹದ ಊತದ ತಡೆ, ವೈರಾಣುಗಳ ತಡೆ, ಬ್ಯಾಕ್ಟಿರಿಯಾ ತಡೆ, ಎಲ್ಲದಕ್ಕೂ ಈ ಎಣ್ಣೆ ಸೂಕ್ತವಾದದ್ದು. ಹೃದಯ ಸಂಬಂಧಿ ಖಾಯಿಲೆಗಳಿಗೆ ಇದು ಒಳ್ಳೆಯ ಎಣ್ಣೆ.
- ಕೊಬ್ಬರಿ ಎಣ್ಣೆ : ಲಾರಿಕ್ ಆಸಿಡ್ ಅಂಶ ಹೆಚ್ಚಾಗಿದೆ. ಹೊಗೆ ಉತ್ಪನ್ನ ಉಷ್ಣತೆ ಹೆಚ್ಚಾಗಿರುವುದರಿಂದ ಹೆಚ್ಚು ಕರಿಯಬೇಕಾದ ಪದಾರ್ಥಗಳಾದ ಸಿಹಿ ತಿನಿಸುಗಳು, ಪೂರಿ, ವಡೆ, ಚಿಪ್ಸ್ ಇತ್ಯಾದಿಗಳನ್ನು ಮಾಡಲು ಉತ್ತಮ ಉತ್ತಮ ಹಾರ್ಮೋನ್, ಅಸಮತೋಲನ, ಥೈರಾಯಿಡ್ ಸಮಸ್ಯೆ, ಬುದ್ದಿಮಾಂದ್ಯತೆ ಇತ್ಯಾದಿ ಸಮಸ್ಯೆಗಳಿಗೆ
ಈ ಎಣ್ಣೆ ಅತ್ಯುತ್ತಮ.
- ಎಳ್ಳೆಣ್ಣೆ : ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್-ಇ ಈ ಎಣ್ಣೆಯಲ್ಲಿ ಇದೆ. ಉಪ್ಪಿನಕಾಯಿ ತಯಾರಿಕೆಯಲ್ಲಿ ಈ ಎಣ್ಣೆಗೆ ಮೊದಲ ಸ್ಥಾನ. ಆಮ್ಲಜನೀಕರಣದ ತಡೆ, ದೇಹದ ಊತ ತಡೆಯುವ ಅಂಶಗಳು ಈ ಎಣ್ಣೆಯಲ್ಲಿ ಇವೆ. ಪುಳಿಯೋಗರೆ, ಚಿತ್ರಾನ್ನ ಮುಂತಾದ ಕಲಸಿದ ಅನ್ನ ತಯಾರಿಕೆಯಲ್ಲಿ ಬಳಸುವ ಎಣ್ಣೆ ಇದು. ಕೀಲುನೋವು, ಸಂಧಿವಾತ, ಚರ್ಮದ ಸಮಸ್ಯೆ ಇತ್ಯಾದಿ ಖಾಯಿಲೆಗಳ ನಿವಾರಣೆಗೆ ಇದನ್ನು ಹೇರಳವಾಗಿ ಬಳಸುತ್ತಾರೆ.
- ಹುಚ್ಚೆಳ್ಳೆಣ್ಣೆ
: ಲಿನೋಲಿಯಿಕ್ ಆಸಿಡ್ ಮತ್ತು ನಿಯಾಸಿನ್ ಪ್ರಮಾಣ ಇದರಲ್ಲಿ ಹೆಚ್ಚಾಗಿದೆ. ಈ ಎರಡು ಪದಾರ್ಥಗಳು ನರಗಳು ಮತ್ತು ಮೆದುಳಿನ ಜೀವಕೋಶಗಳ ಮರು ಉತ್ಪಾದನೆ ಮತ್ತು ಶುದ್ದೀಕರಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ತ್ವಚೆಯ ಆರೋಗ್ಯ ಹಾಗೂ ಸೌಂದರ್ಯವಷ್ಟೇ ಅಲ್ಲದೇ, ಮಾನಸಿಕ ಉಲ್ಲಾಸಕ್ಕೂ ಬಹಳ ಉಪಯುಕ್ತ. ಪಾರ್ಕಿನ್‌ಸನ್ ಹಾಗೂ ಅಲ್ಜಿಮರ್ ಖಾಯಿಲೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಣ್ಣೆಯನ್ನು ತುಪ್ಪದಂತೆ ನೇರವಾಗಿ ಬಳಸಬಹುದು. ಸಿಹಿಪದಾರ್ಥ, ಉಪ್ಪಿನಕಾಯಿ, ಚಟ್ನಿ ಪುಡಿಗಳ ಜೊತೆ ಬೆರೆಸಿ ತಿಂದರೆ ಬಹಳ ರುಚಿಕರವಾಗಿರುತ್ತದೆ. ಹಿಂದೆ ದೇವಸ್ಥಾನಗಳಲ್ಲಿ ಪ್ರಸಾದ ಮತ್ತು ನೈವೇದ್ಯಗಳನ್ನು ತಯಾರು ಮಾಡಲು ಈ ಎಣ್ಣೆಯನ್ನು ಹೇರಳವಾಗಿ ಬಳಸುತ್ತಿದ್ದರು.
- ಕುಸುಬೆ ಎಣ್ಣೆ: ಈ ಎಣ್ಣೆಯಲ್ಲಿ ಬಹು ಆಸಂಪೂರ್ಣ ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿವೆ. ವಾಸನೆ ಮತ್ತು ರುಚಿಯಲ್ಲಿ ತಟಸ್ಥವಾದ ಎಣ್ಣೆ ಇದು. ಹೊಗೆ ಉತ್ಪನ್ನ ಉಷ್ಣತೆ ಹೆಚ್ಚಾಗಿರುವುದರಿಂದ ಹುರಿಯಲು, ಕರಿಯಲು ಬಹಳ ಸೂಕ್ತ. ಬಾಣಂತಿಯರಿಗೆ ಇದು ಒಳ್ಳೆಯದು. ಹಾಲು ಸಮೃದ್ಧವಾಗಿ ಬರಲು ಸಹಾಯ ಮಾಡುತ್ತದೆ.
ನಮ್ಮ ಸ್ಥಳೀಯ ಎಣ್ಣೆಗಳು:
I. ಕಡಲೇಕಾಯಿ ಎಣ್ಣೆ
(ಶೇಂಗಾ ಎಣ್ಣೆ )
- ಕೊಬ್ಬರಿ ಎಣ್ಣೆ
- ಎಳ್ಳೆಣ್ಣೆ
- ಹುಚ್ಚೆಳ್ಳೆಣ್ಣೆ
- ಕುಸುಬೆ ಎಣ್ಣೆ
Address:
Desi Food Factory Sy.No. 85, Byrasandra Village (Hosapalya), Kasaba Hobli, Nelamangala, Bangalore – 562123.