(ಕವಿ ಡಾ.ಸಿದ್ದಲಿಂಗಯ್ಯ ಅವರ ಕವನ ಪ್ರೇರಿತ)
ಧೀಮತಿ
ಆ ಬೆಟ್ಟದಲ್ಲಿ..
ಹಸಿರು ಬೆಟ್ಟದ ತಪ್ಪಲಲ್ಲಿ
ಸುಳಿದಾಡಬೇಡ ಗಳತಿ..
ಮುತ್ತುವುವು ತೋಳದ ಹಿಂಡು
ಇಳಿಯಬೇಡ ನೀ ಕಣಿವೆಗೆ..
ಕಾದಿಹರು ಕಳ್ಳು ಕುಡಿದು
ಮಲ್ಲಿಗೆಯ ನಿನ್ನ ಮೈಯ..
ಪರಚುವವರು ಇರಿದು ಇರಿದು
ಹೂಮುತ್ತಿಗಾಗಿ ಕಾದು..
ಸಂಜೆ ಬೆಳಕಲ್ಲಿ
ಅಹಾರವಾಗಬೇಡ..
ಹಸಿದ ನಾಯಿಗಳಿಗೆ
ನೀ ನೆಡಲು ಪ್ರೀತಿ ಬಳ್ಳಿ..
ಬಿಡುವರೇನೇ ರಕ್ತ ರಕ್ಕಸರು
ಕಾದು ಸವಿ ಮಾತಿಗೆ..
ಬಲಿಯಾಗಬೇಡ ಬಲಿತ ಹದ್ದುಗಳಿಗೆ
ಉಲ್ಲಾಸವನ್ನು ತಂದ ಸಂಜೆಗೆ
ಇಟ್ಟರಲ್ಲೇ ಬೆಂಕಿ ಕೊಳ್ಳಿ..
ಈ ನಿನ್ನ ಕೆನ್ನೆ ಕೆಂಪ
ನೋಡಲು ಸಂಜೆಗೆಂಪಲ್ಲಿ…..
ಆಯಿತಲ್ಲೆ ದುರ್ಗೆಗೆ
ರಕ್ತದ ಓಕುಳಿ…
ಚಂಡಾಡಿ ರಕ್ಕಸರಮುಂಡ..
ಚಾಮುಂಡಿ ಕೈಯಲ್ಲಿ
ಧೀಮತಿ