Publicstory
ಕೋವಿಡ್ ತಂದಿತ್ತ ನೋವುಗಳನ್ನು ಹೇಳಲು ಪದಗಳೇ ಇಲ್ಲ. ಕೋವಿಡ್ ಕಥನಗಳನ್ನು ಜಗತ್ತಿಗೆ ಹೇಳುತ್ತಿದ್ದ ಪತ್ರಕರ್ತರೇ ಕೋವಿಡ್‌ಗೆ ತುತ್ತಾದರೆ? ಅವರ ಆರ್ಥಿಕ ಕಷ್ಟಗಳು ಏನಿದ್ದವು? ಅವರ ಕುಟುಂಬದ ಕತೆ ಏನಾಗಿತ್ತು?
ಅನೇಕ ಪತ್ರಕರ್ತರು ಕಷ್ಟದಲ್ಲೇ ನಲುಗುತ್ತಿದ್ದಾರೆ. ಅದರೂ ನಗುನಗುತ್ತಾ ಸಮಾಜಸೇವೆಯ ಬರವಣೆಗೆಯಲ್ಲಿ ತೊಡಗುತ್ತಾರೆ. ಕೋವಿಡ್ ಎಂದು ಎಲ್ಲರೂ ಮನೆ ಸೇರಿದಾಗ ಧೃತಿಗೆಡದೆ ಸುದ್ದಿ ಮಾಡಿ ಜನರಿಗೆ ನ್ಯಾಯ ಕೊಡಿಸಿದರು. ಈ ಕೆಲಸದಲ್ಲಿ ಅನೇಕರು ಹಸು ನೀಗಿದರು. ಪ್ರಾಣ ತೆತ್ತವರ ಕುಟುಂಬದ ಕಷ್ಟಗಳ ಕಥನವೇ ಕೋವಿಡ್ ಕತೆಗಳು.
ಬೆಂಗಳೂರಿನ ಬಹುರೂಪಿ ಪ್ರಕಾಶನ ಹೊರ ತಂದಿರುವ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಬರೆದಿರುವ ಪುಸ್ತಕ ಓದುತ್ತಾ ಓದಂತೆ ಎಂಥವರ ಕಣ್ಣಾಲಿಗಳು ತುಂಬಿ ಬರುತ್ತವೆ.
ಪತ್ರಕರ್ತರಿಗೂ ಇಷ್ಟೊಂದು ಕಷ್ಟಗಳಿವೆಯೇ? ಸರ್ಕಾರದ ಒಂದು ಸಹಾಯ ಪಡೆಯಲು ಪತ್ರಕರ್ತರು ಸಹ ಒದ್ದಾಡಬೇಕೆ ಎಂಬುದು ಪುಸ್ತಕ ಓದಿದ ಮೇಲೆಯೇ ಗೊತ್ತಾಗಲಿದೆ.
ನನಗೆ ಗೊತ್ತಿರುವ ಅನೇಕ ಪತ್ರಕರ್ತರ ಸಾವಿನ ಸುದ್ದಿಗಳು ಇದರಲ್ಲಿವೆ. ಕರಳು ಚುರುಕ್ ಎಂದಿತು.
ಶಾಂತಾರಾಮ ಭಟ್, ಸೀತಾಲಕ್ಷ್ಮಿ, ಜಯಣ್ಣ, ಮಂಜುನಾಥ್, ಪುತ್ತೂರಿನ ಸುದ್ದಿ ಬಿಡುಗಡೆಯ ಸಂಪಾದಕರು… ಹೀಗೆ ಹಲವರು.
ಕೋವಿಡ್ ನಿಂದ ತುತ್ತಾದ ಜನ ಸಾಮಾನ್ಯರ ಮನೆ ಹೊಕ್ಕಿ ನೋಡಿದರೆ ಇನ್ನೆಂಥ ಕರುಣಾಜನಕ ಕತೆಗಳಿವೆಯೋ?
ಎಲ್ಲರೂ ಓದಬೇಕಾದ ಪುಸ್ತಕ ಇದಾಗಿದೆ. ತುಂಬಾ ಸರಳವಾಗಿ ಬರೆದಿದ್ದಾರೆ. ಒಮ್ಮೆಗೇ ಒಂದೇ ಗುಟಕಿಗೆ ಓದಿಸಿಕೊಳ್ಳುತ್ತಲೇ ಹೊಟ್ಟೆಯಲ್ಲಿ ದುಃಖದ ಜ್ವಾಲೆ ಯನ್ನು ಹೊತ್ತಿಸುವ ಕೃತಿ ಇದು. ಪತ್ರಕರ್ತರ ಬವಣೆಗಳ ನಿವಾರಣೆಗೆ ಹೆಗಲಾದ ಪತ್ರಕರ್ತರ ಸಂಘ, ಅದರ ಅಧ್ಯಕ್ಷರಾದ ಶಿವಾನಂದ ತಗಡೂರು, ಅವರ ಎಲ್ಲ ಪದಾಧಿಕಾರಿಗಳ ಕೆಲಸ ಮೆಚ್ಚುವಂಥದ್ದು. ಇಂಥದೊಂದು ಕೃತಿ ಬರೆದ ಶಿವಾನಂದ್, ಕೃತಿಯನ್ನು ಹೊರ ತಂದಿರುವ ಬಹುರೂಪಿ ಪ್ರಕಾಶನದ ಕೆಲಸ ಅಭಿನಂದಾರ್ಹ.
ಕೃತಿ ಬೇಕಾದವರು ಮೊ: 7019182729 ಸಂಪರ್ಕಿಸಿ.