ಯುದ್ಧ ತರುವ ನೋವು ನೂರಾರು. ಅಮಾಯಕರ, ಮಕ್ಕಳ , ಸಾವು ಭವಿಷ್ಯದ ಆಸೆಯನ್ನು ಕಂಗೆಡಿಸುತ್ತದೆ. ಸತ್ತು ಹೋದವರು ದೇವರ ಅದ್ಯಾವ ಲೆಕ್ಕದಲ್ಲಿ ಸಾವನ್ನಪ್ಪಿದರು? ಗೊತ್ತಿಲ್ಲ. ಚರಿತ್ರೆ
ದಾಖಲಿಸುವುದೇ ಸಾಯುವ ಕ್ಷಣವನ್ನು ? ಕಾರಣವನ್ನು ?
ಇದೇ ಪ್ರಶ್ನೆ ಕವಯಿತ್ರಿಯನ್ನು ಕಾಡುತ್ತಿದೆ
ಯುದ್ಧ
******
ಮನೆಯೊಳಗೇ
ಸಿಡಿಮದ್ದುಹೊಟ್ಟೆಯಲ್ಲಿನ
ಮಗು ಸತ್ತು
ತಾಯಿ ಸತ್ತುಹುಟ್ಟದಿರುವ ಮಗು
ಯಾವ ಧರ್ಮ
ಯಾವ ದೇಶಕಂದನ ಭೂಮಿಗೆ
ತರುವ ತವಕಮುಖ ನೋಡಿಲ್ಲ
ನಾನಾರು ಗೊತ್ತಿಲ್ಲ …ನನಗೇಕೆ ಸಿಡಿಯಿತು
ತುಪಾಕಿ , ಕ್ಷಿಪಣಿ?ನಾನು ಮಗುವಿಗೆ ಹಾಲೂಡಿಸುತ್ತಿದ್ದೆ
ಗಿಡಕ್ಕೆ ನೀರೆರೆಯುತ್ತಿದ್ದೆ
ನಾಳೆ ಪಾಠವ ಓದುತ್ತಿದ್ದೆ
ಗೆಳತಿಗೆ ರಿಂಗ್ ತೊಡಿಸಿದ್ದೆಕೊನೆಗೆ …ಓವೆನ್ ಅಲ್ಲಿ
ಬ್ರೆಡ್ ಬೇಯುತ್ತಿತ್ತು…ಬದುಕಿದ ನಿಮಗೆ ಗೊತ್ತೆ?
ನಿನ್ನೆ ನಾವೇಕೆ ಸತ್ತೆವು ಎಂದು?ರಸ್ತೆಯಲಿ ನಡೆವಾಗ
ಸತ್ತು ಬಿದ್ದೆವು ಎಂದು ….ನೀವೇಕೆ ಯುದ್ಧ
ಮಾಡಿದಿರಿ ಎಂದು
ನನ್ನ ಪ್ರೇತಾತ್ಮಕ್ಕಾದರೂ
ತಿಳಿಸಿ…ಸರಿಯಾಗಿ ತಿಳಿಸಿ.
ಡಾII ರಜನಿ
ಯುದ್ಧದ ದಾರುಣ ಚಿತ್ರಣ …ಗೆಲುವೇ ಇಲ್ಲದ ಕ್ರೂರ ಆಟ ಗೆದ್ದವರು ಸೋತರು ಸೋತವರು ಸತ್ತರು….ಎಂದೆಂದಿಗೂ ಆರ್ಥ ಹೀನ ಅನರ್ಥ ಕಾರಿ ಯುದ್ಧ