Publicstory
ತುಮಕೂರು: ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮವನ್ನು ಮೇ.22ರ (ಭಾನುವಾರ) ಬೆಳಿಗ್ಗೆ ೧೦ ಗಂಟೆಗೆ ಜನಮನ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪ್ರಸ್ತಕ ಸಾಮಾಜಿಕ, ರಾಜಕೀಯ ಸಂದರ್ಭ ಮತ್ತು ಯುವ ಸಂವೇದನೆ ಕುರಿತ ಸಂವಾದ ನಡೆಯಲಿದ್ದು, ಸಮಾಜ ಮತ್ತು ಸಂಸ್ಕೃತಿ ಚಿಂತಕ ವೈ.ಎಸ್.ವಿ ದತ್ತಾ ಸಂವಾದ ನಡೆಸಿಕೊಡಲಿದ್ದಾರೆ.
ಸಂವಿಧಾನ ತತ್ವ ಮತ್ತು ಸಿದ್ದರಾಮಯ್ಯನವರ ಕಾರ್ಯಕ್ರಮಗಳು ಎಂಬ ವಿಷಯದ ಮೇಲೆ ಸಮಾಜ ಚಿಂತಕ ಡಾ.ಮೋಹನ ಚಂದ್ರಗುತ್ತಿ ಮಾತನಾಡಲಿದ್ದು, ಡಾ.ನಟರಾಜ ಬೂದಾಳು ಧರ್ಮ ಮತ್ತು ರಾಜಕಾರಣ: ಸಿದ್ದರಾಮಯ್ಯರ ಸೈದ್ಧಾಂತಿಕ ನಿಲುವು ಹಾಗೂ ವಿಶ್ರಾಂತ ಕುಲಪತಿ ಪ್ರೊ.ಎಸ್.ಜಾಫೆಟ್ ಅವರು ದುರ್ಬಲ ವರ್ಗಗಳ ಕುರಿತು ಸಿದ್ದರಾಮಯ್ಯರ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳು ಎಂಬ ವಿಷಯವನ್ನು ಮಂಡಿಸಲಿದ್ದಾರೆ.
ಇದನ್ನು ಓದಿ: https://publicstory.in/nagalamadike-markonahalli-dam-overflow/
ಗ್ರಂಥಾವಲೋಕನ ಸಂಕಿರಣದಲ್ಲಿ ಗ್ರಂಥ ಸಂಪಾದಕ ಕಾ ತ ಚಿಕ್ಕಣ್ಣ, ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ, ಅರುಣೋದಯ ಸಹಕಾರ ಸಂಘದ ಸದಸ್ಯ ಡಾ.ಎಲ್.ಮುಕುಂದ ಸೇರಿದಂತೆ ಹಲವರು ಹಾಜರಿ ಇರಲಿದ್ದಾರೆ.
ವಿಶ್ವವಿದ್ಯಾಲಯ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳ ಸದಸ್ಯರು, ಜನ ಸಾಮಾನ್ಯರಿಗೆ ಸಂವಾದಲ್ಲಿ ಸಿದ್ದರಾಮಯ್ಯ ಅವರಿಗೆ ನೇರ ಪ್ರಶ್ನೆ ಕೇಳಲು ಮುಕ್ತ ಅವಕಾಶ ಮಾಡಿಕೊಡಲಾಗಿದೆ.