Publicstory
ಕುಣಿಗಲ್ : ಸತತ 2ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಣಿಗಲ್ ಮಾಕೋನಹಳ್ಳಿ ಜಲಾಶಯ ತುಂಬಿ ಹರಿಯುತ್ತಿದೆ.
ಮಳೆಗಾಲದ ಆರಂಭದ ಜಲಾಶಯ ತುಂಬಿರುವುದು ಜನರಿಗೆ ಸಂತಸ ತಂದಿದೆ.
ಜಲಾಶಯ ತುಂಬಿರುವುದರಿಂದ ಜಲಾಶಯದ ಕೆಳಭಾಗದ ಜನರು ಎಚ್ಚರಿಕೆ ನೀಡಬೇಕು ಜನ ಜಾನುವಾರುಗಳನ್ನು ಕಣಿವೆ ಪ್ರದೇಶಕ್ಕೆ ಬಿಡಬಾರದು ಎಂದು ಕಾವೇರಿ ನೀರಾವರಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಂಷಾ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಿಸಿದ್ದರು.
ನಾಗಲಮಡಿಕೆ ಅಣೆಕಟ್ಟು ಭರ್ತಿ.
ಪಾವಗಡ ತಾಲೂಕಿನ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗಲಮಡಿಕೆ ಅಣೆಕಟ್ಟು ಸಹ ಭರ್ತಿಯಾಗಿದೆ.
ಬಿಸಿಲ ನಾಡು ಖ್ಯಾತಿಯ ಪಾವಗಡಕ್ಕೆ ಈ ಸಲ ಆರಂಭದಲ್ಲಿ ಮಳೆರಾಯ ಕೊಡುಗೆ ನೀಡಿದ್ದಾನೆ.
ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲೂ ಮಳೆ ಸುರಿದಿದೆ. ಅಲ್ಲಲ್ಲಿ ಮನೆಗಳು, ಮರಗಳು ಬಿದ್ದಿವೆ.
ತುಮಕೂರು ನಗರದಲ್ಲಿ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತ್ತವಾಗಿವೆ.
ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಸಣ್ಣ ಪುಟ್ಟ ಹಳ್ಳಗಳು ಭರ್ತಿಯಾಗಿವೆ.