ಚಿಕ್ಕನಾಯಕನಹಳ್ಳಿ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನನ್ನು ವಶಪಡಿಸಿಕೊಂಡು ಪರಿಹಾರ ನೀಡಿಲ್ಲವೆಂದು ಮನ ನೊಂದ ರೈತ ರಂಗಣ್ಣ (65) ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ತಾಲೂಕಿನ ಸಾಲುಕಟ್ಟೆ ಗ್ರಾಮದಲ್ಲಿ ನಡೆದಿದೆ.
ರೈತ ರಂಗಣ್ಣನ ಜಮೀನನ್ನು ಕೆಬಿ ಕ್ರಾಸ್ ನಿಂದ ಹುಳಿಯಾರು ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ವಶಪಡಿಸಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಿರಲಿಲ್ಲ. ಇವರ ಮನವಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಮತ್ತು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಹಾರ ದೊರೆಯದೆ ರೈತ ಆತ್ಮಹತ್ಯೆ
Recent Comments
on ಗುರು
on ಕೊಳಲ ಕರೆ
on ಕೊಳಲ ಕರೆ
on ಕೋರೋಣ
on ಸರಗಳವು
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…

