ತುಮಕೂರು: ಡಾ.ಬಿ.ಅರ್.ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವುದೇ ನನ್ನ ಗುರಿ ಎಂದು ಮಾಜಿ ಶಾಸಕ ಬಿ. ಸುರೇಶಗೌಡರು ಹೇಳಿದರು.
ಹೊಳಕಲ್ ಗ್ರಾಮದಲ್ಲಿ ನಡೆದ ಎಸ್ ಸಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು,ಪರಿಶಿಷ್ಟ ಜಾತಿ ಜನರಿಗೆ ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಕಾಲೊನಿಗಳಿಗೆ ಸಿ ಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ ಎಂದರು.
ಇದೇ ಸಂದರ್ಭ ಅವರು ಮನೆಗಳಿಗೆ ಭೇಟಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಶಿಕ್ಷಣ ಪಡೆಯುವ ಮೂಲಕವೇ ಸಮಾಜದ ಉದ್ಧಾರ ಸಾಧ್ಯ ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಇದೇ ಕಾರಣದಿಂದಲೇ , ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಸರ್ಕಾರಿ ಶಾಲೆಗಳನ್ನು ದೇಶದಲ್ಲಿಯೇ ಮಾದರಿ ಶಾಲೆಗಳಾಗಿ ಕಟ್ಟಿಸಿದೆ. ಹಣ, ಹೆಂಡ ಹಂಚಿ ರಾಜಕಾರಣ ಮಾಡುವುದು ನನ್ನ ದಾರಿ ಅಲ್ಲ ಎಂದರು.
ಸಭೆಯಲ್ಲಿ ಬಿಜೆಪಿ ಎಸ್ ಸಿ ಮೋರ್ಚಾದ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಪಾಪಣ್ಣ, ದಲಿತ ಮುಖಂಡರಾದ ಮಹೇಶ್, ಅಂಜಿನಪ್ಪ, ಗಿರೀಶ್, ಗ್ರಾಮ ಪಂಚಾಯತಿ ಸದಸ್ಯ ರಮೇಶ್, ಹೊಳಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಇತರರು ಇದ್ದರು.