ಅಡಿಕೆ ಅಮದು ಸುಂಕವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ಇದರಿಂದ ಈ ವರ್ಷ ಅಡಿಕೆ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.
ಈಚೆಗೆ ಅಮದು ಸುಂಕದ ವಿಚಾರದಲ್ಲಿ ರೈತ ಸಂಘಟನೆಗಳು ಸರ್ಕಾರ ನಡೆಯನ್ನು ಟೀಕಿಸಿದ್ದರು. ಕ್ಯಾಂಪ್ಕೋ ಸೇರಿದಂತೆ ಹಲವು ಅಡಿಕೆ ಬೆಳೆಗಾರರ ಸಂಘಟನೆಗಳು ಸುಂಕ ಏರಿಕೆಗೆ ಒತ್ತಾಯಿಸಿದ್ದವು.
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸುಂಕ ಹೆಚ್ಚಳದ ಭರವಸೆ ನೀಡಿದ್ದರು.
ಈಗ ಕೆಜಿ ಅಡಿಕೆ ಮೇಲಿನ ಸುಂಕದ ದರವನ್ನು ರೂ. 250ರಿಂದ 351ಕ್ಕೆ ಹೆಚ್ಚಿಸಿ ಕೇಂದ್ರ ವಾಣಿಜ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.



 

