ತಿಳಿದು ತಿನ್ನೊಣ ಬನ್ನಿ.
ಇಂದಿನ ಫಾಸ್ಟ್ ಲೈಫ್ ನಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ತಿನ್ನುವವರೇ ಹೆಚ್ಚು.. ಆಗಂತ ಎಲ್ಲಾ ಆಹಾರಗಳು ಕೆಟ್ಟವಾಗಿರುವುದಿಲ್ಲ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ “ಇದಂ ಹಿತಂ”. ಅದೇ ರೀತಿ ಈ ಚಾಕಲೇಟ್ ಕೂಡ ಯಾರಿಗೆ ಇಷ್ಟ ಇಲ್ಲ ನೀವೇ ಹೇಳಿ..? ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕ ರವರೆಗೂ ಇಷ್ಟಪಟ್ಟು ತಿನ್ನುವ ಒಂದು ತಿನಿಸು. ಆದರೆ ಸಣ್ಣ ಮಕ್ಕಳ ತಾಯಂದಿರ ಪಾಲಿನ ವಿಲನ್. ಮಕ್ಕಳ ಹಲ್ಲು ಆಳಾಗುತ್ತೆ ಎಂಬುದು ತಾಯಂದಿರ ಕಳಕಳಿ.
ಸರಿ ಡಾರ್ಕ್ ಚಾಕೊಲೇಟ್ ನಿಂದಾಗುವ ಪ್ರಯೋಜನಗಳ ಮತ್ತು ಪೌಷ್ಟಿಕ ಅಂಶಗಳ ಬಗ್ಗೆ ತಿಳಿಯೋಣ ಬನ್ನಿ.
ಡಾರ್ಕ್ ಚಾಕೊಲೇಟ್ ತಿನ್ನಲು ಸ್ವಲ್ಪ ಕಹಿ, ಸಕ್ಕರೆ ಅಂಶ ಕಡಿಮೆ ಇರುವ ಡಾರ್ಕ್ ಚಾಕಲೇಟ್ ಆಂಟಿಆಕ್ಸಿಡೆಂಟ್‌ಗಳ ಆಗರ ಡಾರ್ಕ್ ಚಾಕೊಲೇಟ್ ಹೃದಯಕ್ಕೆ ಒಳ್ಳೆಯದು, ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಡಾರ್ಕ್ ಚಾಕೊಲೇಟ್ ಅನ್ನು ಸೇವಿಸುವುದರಿಂದ ಹೃದ್ರೋಗದ ಹಲವಾರು ಪ್ರಮುಖ ಅಪಾಯಕಾರಿ ಅಂಶಗಳನ್ನು ಸುಧಾರಿಸಬಹುದು. ಕೋಕೋ ಪೌಡರ್ ಪುರುಷರಲ್ಲಿ ಆಕ್ಸಿಡೀಕೃತ ಕಂಡು ಬರುವ LDL (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು HDL ಕೊಲೆಸ್ಟ್ರಾಲ್ ಅನ್ನು ಸಹ ಹೆಚ್ಚಿಸುತ್ತದೆ.
ಡಾರ್ಕ್ ಚಾಕೊಲೇಟ್ ನಲ್ಲಿರುವ ಅತ್ಯಧಿಕ ಮಟ್ಟದ ಫ್ಲಾವನಾಲ್ ಮೆದುಳಿನ ಅಂಗಾಂಶಗಳಿಗೆ ರಕ್ತ ಸಂಚಾರ ಸುಗಮಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ.ಡಾರ್ಕ್ ಚಾಕೊಲೇಟ್‌ನಲ್ಲಿರುವ (DARK CHOCOLATE) ಫ್ಲಾವನಾಲ್‌ಗಳು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುವಂತೆ ಅಪಧಮನಿಗಳ ಒಳಪದರವಾದ ಎಂಡೋಥೀಲಿಯಂ ಅನ್ನು ಉತ್ತೇಜಿಸುತ್ತದೆ . ಇದು ವಿಶ್ರಾಂತಿಗಾಗಿ ಅಪಧಮನಿಗಳಿಗೆ ಸಂಕೇತಗಳನ್ನು ಕಳುಹಿಸುವುದರಿಂದ ರಕ್ತದ ಹರಿವಿಗೆ ಉಂಟಾಗುವ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ . ಅನೇಕ ನಿಯಂತ್ರಿತ ಅಧ್ಯಯನಗಳು ಕೋಕೋ ಮತ್ತು ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿವೆ.
ಓದುವಾಗ ಡಾರ್ಕ್ ಚಾಕೊಲೇಟ್ ತಿನ್ನುವುದಕ್ಕೆ ಸಲಹೆ ಮಾಡುತ್ತಾರೆ. ಇದು ಮೆಮೊರಿ ಮತ್ತು ಮೆದುಳಿನ ಕಾರ್ಯಕ್ಕೆ ಒಳ್ಳೆಯದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
ಸೌಂದರ್ಯ ಪ್ರಿಯರಿಗೂ ಇದು ಒಳ್ಳೆಯದು ಡಾರ್ಕ್ ಚಾಕೊಲೇಟ್ ಚರ್ಮಕ್ಕೆ ಒಳ್ಳೆಯದು ಎನ್ನುತ್ತಾರೆ ಸಂಶೋಧಕರು. ಚರ್ಮಕ್ಕೆ ಉತ್ತಮ ರಕ್ತದ ಹರಿವನ್ನು ಉಂಟುಮಾಡುತ್ತದೆ. ಚರ್ಮದ ಕಾಳಜಿ ಮಾಡುವವರಿಗೆ ಇದು ಉತ್ತಮ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಪ್ಲಾವನಾಲ್ ಚರ್ಮದ ಸಾಂದ್ರತೆ ಹೆಚ್ಚಿಸಿ ಹೆಚ್ಚು ತೇವಾಂಶದಿಂದ ಕೂಡಿರುವಂತೆ ನೊಡಿಕೊಳ್ಳುತ್ತದೆ. ಅಲ್ಲದೆ ಇದರಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ನಿಮ್ಮ ಚರ್ಮಕ್ಕೆ ಉತ್ತಮ. ಫ್ಲಾವನಾಲ್‌ಗಳು ಸೂರ್ಯನ ಹಾನಿಯಿಂದ ಉಂಟಾಗುವ ಸನ್ ಬರ್ನ್ ಮತ್ತು ಸನ್ ಟ್ಯಾನ್ ಗಳಿಂದ ರಕ್ಷಿಸುತ್ತದೆ, ಚರ್ಮಕ್ಕೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಲ್ಲಿರುವ zinc, iron ,ಸತು , ನೆತ್ತಿಯ ಆರೋಗ್ಯವನ್ನು ಕಾಪಾಡುತ್ತವೆ ಕೂದಲು ಉದುರುವಿಕೆಯನ್ನು ತಡೆಯುತ್ತವೆ. ಚಾಕಲೇಟ್ ನ್ನು ಕರಗಿಸಿ ಮುಖಕ್ಕೆ ಲೇಪಿಸಿದರೆ ಪಿಗ್ಮೆಂಟೆಶನ್ ತಡೆಯುತ್ತದೆ ಹಾಗೂ ಕಪ್ಪು ಕಲೆ ನಿವಾರಣೆ ಮಾಡುತ್ತದೆ.
Gym ನಲ್ಲಿ ಸಲಹೆ ಮಾಡುತ್ತಾರೆ :
ಡಾರ್ಕ್ ಚಾಕೊಲೇಟ್ ತೂಕ ನಷ್ಟಕ್ಕೆ ಒಳ್ಳೆಯದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಡಾರ್ಕ್ ಚಾಕಲೇಟ್ ನಿಯಮಿತವಾಗಿ ತಿಂದರೆ ಬಾಡಿ ಮಾಸ್ ಇಂಡೆಕ್ಸ್ (BMI) ಕಡಿಮೆಯಾಗುತ್ತದೆ.
ಡಾರ್ಕ್ ಚಾಕೊಲೇಟ್ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ concentration ಹೆಚ್ಚಿಸುತ್ತದೆ. ಇದನ್ನು ತಿಂದಾಗ ಮೆದುಳಿನಲ್ಲಿ happy hormones ಬಿಡುಗಡೆ ಮಾಡುತ್ತದೆ ಒಂದು ರೀತಿಯ ಆಹ್ಲಾದಕರ ಮನಸ್ಥಿತಿ ಉಂಟಾಗುತ್ತದೆ.
ಹೆಚ್ಚಿನ ಕೋಕೋ ಅಂಶಹೊಂದಿರುವ ಡಾರ್ಕ್ ಚಾಕೊಲೇಟ್ ಅನ್ನು ಖರೀದಿಸಿದರೆ, ಅದು ಸಾಕಷ್ಟು ಪೌಷ್ಟಿಕವಾಗಿದೆ. ಇದು ಯೋಗ್ಯ ಪ್ರಮಾಣದ digstable ಫೈಬರ್ ಅನ್ನು ಹೊಂದಿರುತ್ತದೆ ಮತ್ತು ಉತ್ತಮ ಖನಿಜಗಳಿಂದ ಕೂಡಿರುತ್ತದೆ. ಶೇ 70-85% ಕೋಕೋ ಹೊಂದಿರುವ ಡಾರ್ಕ್ ಚಾಕಲೇಟ್ ಫೈಬರ್, ಕಬ್ಬಿಣ, ಮೆಗ್ನೀಸಿಯಮ್ , ತಾಮ್ರ , ಮ್ಯಾಂಗನೀಸ್, ಇದರ ಜೊತೆಗೆ, ಇದು ಸಾಕಷ್ಟು ಪೊಟ್ಯಾಸಿಯಮ್, ರಂಜಕ, ಸತು ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತದೆ.
antioxidants ಉತ್ತಮ ಮೂಲವಾಗಿದೆ ತಾಜಾ ಹಾಗೂ ಕಚ್ಚಾ ಸಂಸ್ಕರಿಸದ ಕೋಕೋ ಬೀನ್ಸ್ ಪರೀಕ್ಷೆಗೆ ಒಳಗಾದ ಅತಿ ಹೆಚ್ಚು ಸ್ಕೋರಿಂಗ್ ಆಹಾರಗಳಲ್ಲಿ ಒಂದಾಗಿದೆ. ಡಾರ್ಕ್ ಚಾಕೊಲೇಟ್ ಸಾವಯವ ಸಂಯುಕ್ತಗಳಿಂದ ತುಂಬಿರುತ್ತದೆ. ಅದು ಜೈವಿಕವಾಗಿ ಸಕ್ರಿಯವಾಗಿದೆ. ಇವುಗಳಲ್ಲಿ ಪಾಲಿಫಿನಾಲ್‌ಗಳು, ಫ್ಲಾವನಾಲ್‌ಗಳು ಮತ್ತು ಕ್ಯಾಟೆಚಿನ್ ಅಂಶ ಗಳು ಸೇರಿವೆ. ಚಾಕಲೇಟ್ ತಯಾರಿಸಲು ಬಳಸುವ ಕೋಕೋ ಹಣ್ಣಿನಲ್ಲಿ ಇತರೆ ಹಣ್ಣು ಮತ್ತು ತರಕಾರಿಗಳಲ್ಲಿರುವ antioxidantsಗಳಿಗಿಂತ ಹೆಚ್ಚು ಹೊಂದಿದೆ.ಜೊತೆಗೆ ಪಾಲಿಫಿನಾಲ್ಗಳು,ಫ್ಲಾವನಾಲ್ಗಳನ್ನು ಹೊಂದಿವೆ ಎಂಬುದು ಈ ಕುರಿತ ಸಂಶೋಧನೆಗಳು ತಿಳಿಸುತ್ತವೆ.
ಕೋಕೋ ವಿಶೇಷವಾಗಿ ಹೃದ್ರೋಗದಿಂದ ರಕ್ಷಿಸುತ್ತದೆ ಅಷ್ಟೇ ಅಲ್ಲ ಮಕ್ಕಳಾಗದೆ ಇರುವವರಿಗೂ ಕೂಡ ಇದು ಉತ್ತಮ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಪ್ರತಿದಿನ ಸಾಕಷ್ಟು ಎಷ್ಟು ಬೇಕೋ ಅಷ್ಟು ಚಾಕೊಲೇಟ್ ಸೇವಿಸಬೇಕು ಎಂದು ಇದರ ಅರ್ಥವಲ್ಲ. ಬಹುಶಃ ರಾತ್ರಿಯ ಊಟದ ನಂತರ ಒಂದು ಚೌಕ ವನ್ನು ತಿನ್ನಬಹುದು. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಚಾಕೊಲೇಟ್(Chocolate) ಪೌಷ್ಟಿಕವಲ್ಲ ಎಂಬುದನ್ನು ಕೂಡ ಗಮನಿಸಿ. 70% ಅಥವಾ ಹೆಚ್ಚಿನ ಕೋಕೋ ಅಂಶಹೊಂದಿರುವ ಡಾರ್ಕ್ ಚಾಕೊಲೇಟ್ಗಳು ಖರೀದಿಸಿ. ಮತ್ತಿನ್ನೆಕೆ ತಡ ಬನ್ನಿ ಒಂದು ಬೈಟ್ ತಿನ್ನೊಣ.