ತುರುವೇಕೆರೆ:
ರೈತರ, ಬಡವರ, ದುರ್ಬಲರ ಮಕ್ಕಳು ಹೆಚ್ಚು ಶಿಕ್ಷಣವಂತರಾಗಿ; ಐಎಸ್ಎಸ್. ಕೆಎಎಸ್ ಅಧಿಕಾರಿಗಳಾಗಬೇಕೆಂಬ ಆಸೆ ನನ್ನದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಾಣಸಂದ್ರ ಗ್ರಾಮದ ವಿ.ಎಸ್.ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ, ಸಾಂಸ್ಕೃತಿಕ, ವಿಜ್ಞಾನ, ಭಾಷಾ ಮತ್ತು ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಗುಣಮಟ್ಟದ ಶಿಕ್ಷಕರುಗಳಿದ್ದರೆ ಒಳ್ಳೆಯ ಶಿಕ್ಷಣ ಸಿಗುತ್ತದೆ. ಜೊತೆಗೆ ಶಾಲೆ ಮತ್ತು ಪೋಷಕರಿಗೂ ಗೌರವ ಬರುತ್ತದೆ. ಕ್ಷೇತ್ರದ ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೆ ಕೇಳಿ ಬರುತ್ತಿದ್ದು ಇದರಿಂದ ಮಕ್ಕಳ ಶೈಕ್ಷಣಿಕ ಕಲಿಕೆಗೆ ಹಿನ್ನೆಡೆಯಾಗುತ್ತಿದೆ ಇದು ನನ್ನ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾದದಲ್ಲ ಇಡೀ ರಾಜ್ಯದ ಸಮಸ್ಯೆಯಾಗಿದ್ದು ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು.
ಗ್ರಾಮೀಣ ಪ್ರದೇಶಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕು ಕಟ್ಟಿ ಓದಲು ಸಾದ್ಯವಿಲ್ಲ ಹಾಗಾಗಿ ತಾಲ್ಲೂಕಿನಲ್ಲಿ ಸು.8 ಸರ್ಕಾರಿ ಪ್ರೌಢ ಶಾಲೆಗಳನ್ನು ತಂದಿದ್ದೇನೆ. ಜೊತೆಗೆ ಕ್ಷೇತ್ರದ ಕೆಲ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪೀಜ್ ಕಟ್ಟಲು ಸಾದ್ಯವಾಗದಿದ್ದಾಗ ಅಂತಹ ಮಕ್ಕಳು ಶುಲ್ಕವನ್ನು ನಾನೇ ಕಟ್ಟಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದೆಂತೆ ನೋಡಿಕೊಂಡಿದೇನೆ.
ಬಿಕಾಂ, ಬಿ.ಎ, ಡಿಪ್ಲೋಮಾ ಇಂತಹ ವೃತ್ತಿಪರ ಕೋರ್ಸ್ ಗಳನ್ನು ಓದಲು ಹಳ್ಳಿಯ ಬಡ ಮಕ್ಕಳು ದೂರದ ತುಮಕೂಕೂರು ಹೋಗಲು ಕಷ್ಟಪಡುತ್ತಿದ್ದರು. ಅಂತಹ ಸಮಸ್ಯೆ ಕೂಡ ನಿವಾರಣೆ ಮಾಡಿದ್ದೇನೆ ಎಂದರು.
ಇದೇ ವೇಳೆ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಇದೇ ಶಾಲೆಯಲ್ಲಿ ಓದಿ ಡಾಕ್ಟರೇಟ್ ಪದವಿ ಪಡೆದ ಡಾ.ಕೆ.ಎಸ್. ವಿಶ್ವನಾಥ್, ಡಾ.ಅರುಣ್ ಕುಮಾರ್, ಡಾ.ಪಾಂಡುರಂಗಯ್ಯ ಎಚ್.ವಿ ಹಾಗು ಸ್ವರ್ಣ ಪದಕ ಪಡೆದ ವಿದ್ಯಾರ್ಥಿ ವಿನುತ.ಪಿ ಅವರುಗಳನ್ನು ಮೈಸೂರು ಪೇಟತೊಡಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿಇಒ ಸೋಮಶೇಖರ್, ಇಸಿಒ ಸಿದ್ದಪ್ಪ, ಅಕ್ಷರದಾಸೋಹ ನಿರ್ದೇಶಕ ಜೆ.ಆರ್.ರವಿಕುಮಾರ್, ಸಂಘದ ಅಧ್ಯಕ್ಷರಾದ ರಾಗಿರಂಗೇಗೌಡ, ಕಾರ್ಯಪಾಲ ನಿದರ್ೇಶಕ ಸತ್ಯನಾರಾಯಣ್, ಉಪಾಧ್ಯಕ್ಷ ಬಿ.ಆರ್.ರಂಗೇಗೌಡ, ನಿರ್ದೇಶಕ ಎಚ್.ಪಾಂಡುರಂಗೇಗೌಡ, ಪ್ರಾಂಶುಪಾಲರಾದ ಎಚ್.ಎನ್.ಸುರೇಶ್, ಮುಖ್ಯ ಶಿಕ್ಷಕಿ ತಿಮ್ಮವ್ವ, ಶಿಕ್ಷಕರುಗಳಾದ ಎಚ್.ಆರ್.ಚಂದ್ರಶೇಖ್, ಬಿ.ಎಚ್.ಶ್ರೀರಂಗನಾಥ್, ರವಿಗುಳೇದ್, ಉಪನ್ಯಾಸಕರಾದ ಭರತ್.ಟಿ.ಎ, ಕೆ.ಸಿ.ಸರ್ವೇಶ್ ಇದ್ದರು.