Wednesday, November 20, 2024
Google search engine
Homeಜಸ್ಟ್ ನ್ಯೂಸ್ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಯಾಚನೆ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಯಾಚನೆ

.

ತುರುವೇಕೆರೆ: ಶಿಕ್ಷಣ ಕ್ಷೇತ್ರದ ಹಾಗು ಶಿಕ್ಷಕರ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುವ ಮೂಲಕ ಎಲ್ಲ ಶಿಕ್ಷಕರನ್ನೂ ಜಾತ್ಯಾತೀತವಾಗಿ ಒಳಗೊಳ್ಳುವ ಕೆಲಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು ತಮಗೇ ಮತ ನೀಡಬೇಕೆಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಶಿಕ್ಷಕರಲ್ಲಿ ಮನವಿ ಮಾಡಿದರು.

ಜೂನ್ 3ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ನಿಮಿತ್ತ ಬುಧವಾರ ಪಟ್ಟಣದ ಶ್ರೀ ವಿದ್ಯಾರಣ್ಯ ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರಿಂದ ಮತಯಾಚಿಸಿ ಮಾತನಾಡಿದ ಅವರು

ಕಾಂಗ್ರೆಸ್ ಅಭ್ಯಥರ್ಿ ಡಿ.ಟಿ.ಶ್ರೀನಿವಾಸ್ ಬಗ್ಗೆ ಕೇವಲ ಹೊಗಳಿಕೆಯ ಮಾತುಗಳು ಕೇಳಿಬರುತ್ತಿವೆ ವಿನಹ ಅವರ ಶೈಕ್ಷಣಿಕ ಸೇವೆ ವಿರಳ. ಆದರೆ ಕಳೆದ 15 ವರ್ಷಗಳಿಂದ ನಾನು ಖಾಸಗಿ ಶಾಲಾ ಕಾಲೇಜುಗಳ, ಅನುದಾನಿತ ಶಾಲಾ ಕಾಲೇಜುಗಳ, ಸಕರ್ಾರಿ ಶಾಲಾ, ಕಾಲೇಜುಗಳ ಶಿಕ್ಷಕರ ಹಾಗು ಪದವೀದರರ ನೂರಾರು ಸಮಸ್ಯೆಗಳ ಈಡೇರಿಕೆ ಹೋರಾಟ ನಡೆಸಿ ಸಕರ್ಾರದ ಮಟ್ಟದಲ್ಲಿ ಗಮನ ಸೆಳೆದು ಅವುಗಳನ್ನು ಪರಿಹರಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತಾ ಬಂದಿದ್ದೇನೆ.

ಇಡೀ ರಾಜ್ಯಕ್ಕೆ ವೈ.ಎ.ನಾರಾಯಣ ಸ್ವಾಮಿಯವರ ಶೈಕ್ಷಣಿಕ ಕೊಡುಗೆ ಏನು ಎಂಬುದು ಶಿಕ್ಷಕರಿಗೆಲ್ಲ ಗೊತ್ತಿದೆ. ಆದರೆ ಹೊಸಬರಿಗೆ ಶಿಕ್ಷಕರ ಮತ್ತು ಶಿಕ್ಷಣದ ನಾಡಿಮಿಡಿತ ಗೊತ್ತಿಲ್ಲ ಅಂತವರಿಗೆ ಮತ ಹಾಕಿ ವ್ಯರ್ಥ ಮಾಡಿಕೊಳ್ಳಬೇಡಿ.

ಯಾರ ದ್ವೇಷಿಯೂ ನಾನಲ್ಲ, ಭ್ರಷ್ಟನಲ್ಲ, ಲಂಚಕೋರನಲ್ಲ ಒಳ್ಳೆಯ ಕೆಲಸಗಳಿಂದ ಹಾಗು ಪ್ರೀತಿ ವಿಶ್ವಾಸದಿಂದ ಕ್ಷೇತ್ರದ ಶಿಕ್ಷಕರ ಮನಗೆದಿದ್ದೇನೆ. ನನ್ನ ಗೆಲುವು ಖಚಿತ ಅದರಲ್ಲಿ ಯಾವುದೇ ಅನುಮಾನ ಬೇಡ. ನೀವೆಲ್ಲ ಪ್ರತಿ ಶಿಕ್ಷಕರ, ಉಪನ್ಯಾಸಕರ ಮನೆಮನೆ ಭೇಟಿ ಮಾಡಿ ನನಗೆ ಮೊದಲನೇ ಪ್ರಾಶಸ್ತ್ರ್ಯದ ಮತವನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ತಾಲ್ಲೂಕಿನ ವಿವಿಧ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆ ಆಲಿಸಿ ತಮಗೇ ಮತ ನೀಡುವಂತೆ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಖಾಸಗಿ ಅನುದಾನಿತ ಪ್ರೌಢಶಾಲೆಗಳ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ಆರ್.ಜಯಣ್ಣ ಮತ್ತು ಶಿಕ್ಷಕರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?