Wednesday, November 20, 2024
Google search engine
Homeಜನಮನಅಪ್ಪಂದಿರ ದಿನದ ವಿಶೇಷ: ನಾನು ಏನಾಗಿದ್ದೇನೋ‌ ಅದೆಲ್ಲವೂ ಅಪ್ಪನೇ...

ಅಪ್ಪಂದಿರ ದಿನದ ವಿಶೇಷ: ನಾನು ಏನಾಗಿದ್ದೇನೋ‌ ಅದೆಲ್ಲವೂ ಅಪ್ಪನೇ…

ವಿಶ್ವ ಅಪ್ಪಂದಿರದ ದಿನದ ಅಂಗವಾಗಿ ಖ್ಯಾತ ವೈದ್ಯೆ, ಕವಯತ್ರಿ ಡಾ. ರಜನಿ ಅವರು ಅವರ ಅಪ್ಪನ ಕುರಿತದಾದ ಆಪ್ತ ಬರಹ ಬರೆದಿದ್ದಾರೆ.


ಜೂನ್ 20 ಅಪ್ಪಂದಿರ ದಿನ. ನಾನು ನನ್ನ ಅಪ್ಪನನ್ನು ಅಣ್ಣಾ ಎನ್ನುತ್ತಿದ್ದೆ. ಎಲ್ಲರೂ ಅಲ್ಲಿ ತಮ್ಮ ಅಪ್ಪಂದಿರನ್ನು ಹಾಗೆಯೇ ಕರೆಯುವುದು ರೂಢಿ.
ನನ್ನ ಅಪ್ಪ ಸ್ವಾಭಿಮಾನದ ಪ್ರತೀಕ ವಾಗಿದ್ದರು.
ನಾನು ಹೆಣ್ಣು ಮಗಳೆಂದು ಯಾವತ್ತೂ ಬೇಧ ಮಾಡಲಿಲ್ಲ.

ನಾನು ದೊಡ್ದವಳಾದ ದಿನ ನನ್ನನ್ನು ಅಮ್ಮ ವೆರಾಂಡದಲ್ಲಿ ಮಲಗಿಸಿದ್ದಳು. ಅಣ್ಣ ಬಂದಿದ್ದೇ , ನಾನು ನಿದ್ರೆ ಬಂದಂತೆ ನಟಿಸುತ್ತಿದ್ದೆ, ಯಾಕೇ ಇಲ್ಲಿ ಮಲಗಿಸಿದ್ದೀಯಾ? ನನ್ನ ಮಗಳನ್ನ… ಯಾವ ಸೂತಕ ? ಎಂದು ಎತ್ತಿಕೊಂಡು ನನ್ನ ಜಾಗದಲ್ಲಿ ಒಳಗಡೆ ಮಲಗಿಸಿದರು.

50 ಪೈಸೆ Readers Digest ಇದ್ದಾಗಿನಿಂದ ನನಗೆ ಇಂಗ್ಲಿಷ್ ಓದಲು ಆಸೆ ಮೂಡಿಸಿದರು. oxford English dictionary ತಂದು ಕೊಟ್ಟಿದ್ದು ನನ್ನ English ವ್ಯಾಮೋಹಕ್ಕೆ ಕಾರಣ.
10ನೇ ಕ್ಲಾಸಿನಲ್ಲೇ The Diary of Anne Frank ಪುಸ್ತಕ ಕೊಟ್ಟು ಭಾವನೆಗಳನ್ನು ಬರಹದ ಮೂಲಕ ವ್ಯಕ್ತ ಪಡಿಸಲು ಪ್ರೇರಣೆ ಆದರು.

ಉಂಡ ತಟ್ಟೆ ಎತ್ತಲೂ ಬಿಡದೆ ಬೇಟಿ ಬಚಾವೋ ಬೇಟಿ ಪಡಾವೋ ಪಾಲಿಸಿದರು.ಚೆಸ್ ಆಡಲು ಕಲಿಸಿದವರು.

ನಿವೃತ್ತಿ ನಂತರವೂ ದುಡಿದವರು. ಯಾರ ಮೇಲೂ
ಹೊಟ್ಟೆ ಕಿಚ್ಚು ಪಟ್ಟ ವರಲ್ಲ. ಮಂಡ್ಯದಿಂದ ಬಸ್ ನಲ್ಲಿ ಬೆಂಗಳೂರಿಗೆ ಬಂದು James Bond ಫಿಲಂ ತೋರಿಸಿದವರು. ನನಗೆ ಬಿರಿಯಾನಿ ರುಚಿ ಹತ್ತಿಸಿದವರು. ಅವರಿಗೆ ಮುಸ್ಲಿಂ ದೋಸ್ತಿಗಳು ಬಹಳ. ಉರ್ದು , ಗಜಲ್, ಮೇಲೆ ಇದೇ ಕಾರಣಕ್ಕೆಒಲವು.

ಮಕ್ಕಳನ್ನು ಓದಿಸಲು ಚಿನ್ನ ಮಾರಿದರೂ , ಅದೇ ದುಡ್ಡಿನಲ್ಲಿ ಜಿಲೇಬಿ ತಂದು ತಿನ್ನಿಸಿದ ನಿರ್ಲಿಪ್ತ ಭಾವ.
ಪ್ರತೀ ರಾತ್ರಿ ನಂಜನಗೂಡು ರಸಬಾಳೆ, ಚೌ ಚೌ, ಕ್ರೀಮ್ ಬಿಸ್ಕಿಟ್ , ಬೋಂಡ , ಬಜ್ಜಿ ತಂದು ತಿನ್ನಿಸಿದವರು.

ನನ್ನ ಮಾರ್ಕ್ಸ್ ಕಾರ್ಡ್ ನೋಡದೇ ನನ್ನ ಮಗಳು FIRST RANK ಅಂದವರು. ಯೂನಿವರ್ಸಿಟಿ ಫುಟ್ ಬಾಲ್ ಆಟಗಾರರು.
ನನಗೆ ಬಲವಂತವಾಗಿ ಸರ್ಕಾರಿ ಕೆಲಸಕ್ಕೆ ನೂಕಿದವರು.

Wills Filter ತರಲು ಅಂಗಡಿಗೆ ನನ್ನ ಓಡಿಸಿದವರು.
ನನಗೆ Poker ಆಡಲು ಹೇಳಿ ಕೊಟ್ಟ ವರು.
ನನ್ನ ಕೆಂಚುಗೂದಲು ಬಾಚಿ ಡಿಸೈನ್ ಹಣೆ ಬಟ್ಟು ಇಟ್ಟವರು. ಕೈ ಕಾಲು ತರಚಿಕೊಳ್ಳುತ್ತಾಳೆ ಎಂದು ಲೂನಾ ಕಲಿಯಲು ಬಿಡದವರು. paper back ಓದಲು ಬಿಡದೇ glazed pages ಪುಸ್ತಕ ಅಭ್ಯಾಸ ಮಾಡಿಸಿದವರು. ಒಂದೇ ,ಎರಡೇ.. ಜೀವನವನ್ನು ಅತಿಯಾಗಿ ವರ್ಣ ರಂಜಿತವಾಗಿ ಪ್ರೀತಿಸಿದವರು.
‘ಜಡೇ ಮುನಿ’ ಎಂಬ ಆತ್ಮಕಥೆ ಬರೆದು ಪ್ರಕಟಿಸದೇ ಹೋದವರು.

ಮುಂದಿನ ಎರಡು ಹಲ್ಲು ಬಿದ್ದಾಗ group study ಎಂದು ಹೇಳಿಸಿ ನಕ್ಕವರು. ಹಾರ್ಟ್ ಅಟ್ಯಾಕ್ ಆಗಿ ದುತ್ತೆಂದು ನಿರ್ಗಮಿಸಿದವರು. ವೆಂಟಿಲೇಟರ್ ಗೆ ಹಾಕುವ ಮುನ್ನ ರಾಮ, ರಾಮ ಎನ್ನು ಅಣ್ಣಾ ಎಂದರೆ ರಾಮ, ರಾಮ ಎಂದು ಕಡೆ ಮಾತು ಅಂದವರು. ಎಲ್ಲ ಹೆಣ್ಣು ಮಕ್ಕಳನ್ನು ಪ್ರೀತಿಸುವವರಿಗೆ ಈ ಲೇಖನ.

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?