ಹೂವು ಹಲವರಿಗೆ ಹಲವು ಭಾವ. ಮಲ್ಲಿಗೆ,ಜಾಜಿ
ಪಾರಿಜಾತ ಸುಗಂಧಕ್ಕೆ ಮಾರು ಹೋಗದವರಿಲ್ಲ.
ಆದರೂ ಹೂವನ್ನು ಹೆಣ್ಣಿಗೆ ಹೋಲಿಸವ ಭಾವನೆಗಳೇ
ಹೆಚ್ಚು. ನೀರೆಯರಿಗೂ ಹೂವಿಗೂ ಅವಿನಾಭಾವ ಸಂಬಂಧವಿದೆ. ಹೂಗಳನ್ನು ಆಸ್ವಾದಿಸಿ ರಜನಿಯವರ ಕಣ್ಣಲ್ಲಿ
ಹೂವು
ನೋಯಿಸಬೇಡಿ ಹೂವು..
ಅರಳಲು
ಅರಳಿ ಸುಗಂಧ
ಸೂಸಲು…ದೇವರು
ಸೃಷ್ಟಿಸಿದ್ದಾನೆ.
ಹತ್ತಿರ ಹೋಗಿ
ಮೂಗಿಗೆ ಹಿಡಿದು
ಹಿಂಸಿಸುವಿರಿ ಏಕೆ?
ದೂರಕ್ಕೂ
ಸುವಾಸನೆ ಬೀರುತ್ತವೆ.
ಮನಸ್ಸುಗಳನ್ನು
ಅರಳಿಸಿ
ಹೃದಯಗಳನ್ನು
ಬೆಸೆಯುವ
ಜವಾಬ್ದಾರಿ ಇವೆ ಹೂಗಳಿಗೆ.
ಎಲ್ಲಿದ್ದರೂ
ಸುಗಂಧ ಸೂಸುತ್ತವೆ..
ಮುಡಿಯಲ್ಲಿ..
ಮಸಣದಲ್ಲಿ.
ಅರಳುವುದೆ
ಅದರ ಕೆಲಸ..
ಅರಳಿದ ನಂತರವೇ
ಮುದುರುವುದು.
ಅರಳುವಾಗಲೂ
ಅರಳಿ ನಿಂತ ಮೇಲೂ
ಮುದುಡಿ ಸಾಯುವಾಗಲೂ
ಕೂನೆಗೆ ಸತ್ತು ಉದುರುವಾಗಲೂ
ಅದು ಸದ್ದು ಮಾಡುವುದಿಲ್ಲ.
ಹೂವನ್ನು
ಜಜ್ಜಿದರೂ
ಸುಗಂಧ ದ್ರವ್ಯ
ದೂರಕುತ್ತದೆ.
ಹೂವು
ಅರಳಿಸದ
ಹೃದಯವಾಗಿದ್ದರೆ
ದೂರ ಇರಿ.
ಹೂವು
ಬೇರೆ ಹೂವಿನೂಂದಿಗೆ
ಹದವಾಗಿ
ಹೂಂದಿಕೂಳ್ಳುತ್ತದೆ.
ಹೂವು
ಮುಳ್ಳಿನ ಜೂತೆಯೇ
ಇದ್ದರೂ
ಅದರ ಬುದ್ಧಿ ಕಲಿಯುವುದಿಲ್ಲ.
ಹೂವು
ದೇವರಿಗೆ ಸಂದರೂ
ಹಮ್ಮಿಲ್ಲ.
ಹೂವು ಅಳುತ್ತದೆ
ಯಾವಾಗ
ಎಂದರೆ
ಅದನ್ನು ಮುಡಿದವಳು
ಅತ್ತಾಗ.
ಡಾllರಜನಿ
👌🏻👌🏻👌🏻ma’am
ತುಂಬಾ ಚೆಂದದ ಕವನ