Publicstory/prajayoga
ತುಮಕೂರು: ನಗರದ ಶೇಷಾದ್ರಿ ಪುರಂ ಪಿ.ಯು. ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್ಶಿಪ್ ವಿತರಿ ಸುವ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು.
ಹೊಸದಾಗಿ ಪಿಯುಸಿಗೆ ಪ್ರವೇಶ ಪಡೆದಿರುವ, ಶೇ 85%ಕ್ಕೂ ಹೆಚ್ಚು ಅಂಕಗಳಿಸಿರುವ 300 ವಿದ್ಯಾರ್ಥಿಗಳಿಗೆ ಹಾಗೂ ಶೇ 90% ಕ್ಕೂ ಹೆಚ್ಚು ಅಂಕಗಳಿಸಿರುವ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಪತ್ರ ವಿತರಿಸಿ ಮಾತನಾಡಿದ ನಾಡೋಜ ಡಾ.ವೂಡೇ.ಪಿ.ಕೃಷ್ಣ ಅವರು ಕೈಗೆಟಕುವ ದರದಲ್ಲಿ ಶಿಕ್ಷಣ ಕೊಡುವುದು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದು ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
ಜಾಹೀರಾತು
ನಮ್ಮ ಶಿಕ್ಷಣ ದತ್ತಿಯ ತುಮಕೂರು ಬೆಂಗಳೂರು, ಮಂಡ್ಯ, ಮೈಸೂರು, ಪದವಿ ಪೂರ್ವ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಈ ವರ್ಷ 2.6 ಕೋಟಿ ವಿದ್ಯಾರ್ಥಿವೇತನ ವಿತರಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಕರೋನ ಸಂದರ್ಭದಲ್ಲಿ ಸಹ ನಮ್ಮ ಅಧ್ಯಾಪಕರು ಶ್ರಮವಹಿಸಿ ಪಾಠ ಮಾಡಿ ಸಂಸ್ಥೆಗೆ ಹೆಸರು ತಂದರು. ಶಿಕ್ಷಕರೇ ಶಿಕ್ಷಣದ ಆತ್ಮ. ನಮ್ಮ ಸಂಸ್ಥೆಯ ಶಕ್ತಿ ಉತ್ತಮ ಅಧ್ಯಾಪಕರು ಎಂದು ಶ್ಲಾಘಿಸಿದರು.
ಡಾ. ಟಿ. ಹೆಚ್ ಆಂಜನಪ್ಪ ಮಾತನಾಡಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ನಾಡಿನ ಉತ್ತಮ ಸಂಸ್ಥೆಯಾಗಿದೆ. ನಮ್ಮ ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟ ವಾಗಿತ್ತು. ನೀವು ಅದೃಷ್ಟವಂತರು. ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಯನ್ನು ಮಾಡಿ ಎಂದು ಸಲಹೆ ನೀಡಿದರು.
ಬೇರೆಯವರೊಂದಿಗೆ ಹೋಲಿಸಿ ಕೊಂಡು ಕೊರಗುವುದನ್ನು ಬಿಟ್ಟು ಸಾಧನೆಯ ಕಡೆ ಮುಖ ಮಾಡಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ, ತದೇಕ ಚಿತ್ತದಿಂದ ಪಾಠ ಕೇಳಬೇಕು. ಉತ್ತಮ ಅಂಕಗಳನ್ನು ಪಡೆಯದೇ ಇರುವವರಿಗೆ ಕೀಳರಿಮೆ ಬೇಡ ಕಷ್ಟಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಅಬ್ದುಲ್ ಕಲಾಂ, ಇವರ ಜೀವನ ಸ್ಪೂರ್ತಿಯಾಗ ಬೇಕು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿನಂತೆ ನಿಮ್ಮ ಕಾಯಕ ಮಾಡಿ ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿಗಳಾದ ಡಬ್ಲ್ಯೂ. ಡಿ ಅಶೋಕ್, ಬಿ.ಎಂ ಪಾರ್ಥ ಸಾರಥಿ, ಬಿ.ಎ.ಅನಂತ ರಾಮು, ಪಿ.ಯು ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಬಿ.ವಿ.ಬಸವರಾಜು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ., ಜಿ.ಸಿ. ಬೋರ್ಡ್ ಸದಸ್ಯೆ ಶಾಂತಕುಮಾರಿ, ಕಾಲೇಜಿನ ಬೋಧಕರು, ಬೋಧಕೇತರರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.