Thuruvekere: ಗ್ರಾಮೀಣ ಪ್ರದೇಶದ ಮಕ್ಕಳು ಐ.ಸಿ.ಎಸ್.ಇ ಪರೀಕ್ಷೆಯಲ್ಲಿ ಸತತ ಆರನೇ ಬಾರಿಗೆ ಶೇಕಡ ನೂರರಷ್ಟು ಫಲಿತಾಂಶವನ್ನು ನಮ್ಮ ಶಾಲೆಗೆ ತಂದುಕೊಟ್ಟಿದ್ದಾರೆ ಎಂದು ಇಂಡಿಯನ್ ಪಬ್ಲಿಕ್ ಸ್ಕೂಲ್ ನ (INDIAN PUBLIC SCHOOL) ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್ ತಿಳಿಸಿದರು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂಧಿಸಿ ಮಾತನಾಡಿದ ಅವರು ಪ್ರತಿ ವರ್ಷ ತಮ್ಮ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳು ಹೊರಹೊಮ್ಮುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ಒಳ್ಳೆಯ ಹೆಸರುಗಳನ್ನು ಸಂಪಾದಿಸಿದ್ದಾರೆ. ಇಂತಹ ಕಾರ್ಯಗಳಿಗೆ ಕರಿವೃಷಭ ದೇಶಿ ಕೇಂದ್ರ ಮಹಾ ಸ್ವಾಮೀಜಿಗಳ ಸಹಕಾರ ಅತ್ಯಮೂಲ್ಯವಾಗಿದೆ ಎಂದು ಹೇಳಿದರು.
ಈ ಬಾರಿ ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಚಿತ್ರಶ್ರೀ ಜಿ ಶೇ.94 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ಸುಭಾಶ್ ಪಾಲ್ಗುಣಿ ಶೇ.92, ಅಂಕ ಪಡೆದು ಎರಡನೇ ಸ್ಥಾನ, ಪ್ರೀತು ಟಿ.ಎಸ್ ಶೇ .90 ಅಂಕ ಪಡೆದು ತೃತೀಯ ಸ್ಥಾನ ಹಾಗು ತನುಶಾ ಮತ್ತು ಸಿಂಚನಾ ಎಸ್.ಎ ತಲಾ ಶೇ.89 ಅಂಕ ಪಡೆದಿದ್ದಾಳೆ. ಶಾಲಾ ಫಲಿತಾಂಶ ಉತ್ತಮವಾಗಿ ಬರಲು ಶ್ರಮಿಸಿದ ಪ್ರಾಂಶುಪಾಲರಾದ ಪುಷ್ಪಾ ಎಸ್ ಪಾಟೀಲ್ , ಶಿಕ್ಷಕ ವೃಂದ ಹಾಗು ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪುಷ್ಪಾ ಎಸ್.ಪಾಟೀಲ್, ಮುಖ್ಯ ಶಿಕ್ಷಕಿ ಶಶಿಕಲಾ ಹಿರೇಮಠ್, ಗುಂಡೇಗೌಡ, ಸರೋಜ ಮತ್ತು ಪೋಷಕರು ಉಪಸ್ಥಿತರಿದ್ದರು.