ಪಾವಗಡ : ತಾಲೂಕಿನಾದ್ಯಂತ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಶಾಸಕರಾದ ವೆಂಕಟರಮಣಪ್ಪನವರು ತಿಳಿಸಿದರು.
ತಾಲ್ಲೂಕಿನ ನಿಡಗಲ್ ಹೋಬಳಿಯ ನ್ಯಾಯದಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಶಾಸಕರಾದ ವೆಂಕಟರಮಣಪ್ಪನವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ಕದಿರೆಹಳ್ಳಿ ಗ್ರಾಮದ ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ,
ತಾಲೂಕಿನಾದ್ಯಂತ ಸುಮಾರು 100 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡಿದ್ದು ಇವುಗಳಲ್ಲಿ
ಕೆಲವು ಕಾಮಗಾರಿಗಳು ಪ್ರಪೂರ್ಣಗೊಂಡಿದ್ದು ಇನ್ನು ಕೆಲವು ಪ್ರಗತಿಯ ಹಂತದಲ್ಲಿವೆ. ಇಂದು ಸಹಾ ಕ್ಯಾತಗಾನಹಳ್ಳಿ-ಮುದ್ದಗಾನಹಳ್ಳಿ ರಸ್ತೆ ಅಭಿವೃದ್ಧಿಗೆ 25 ಲಕ್ಷ ,ಕೋಡಿಗೆಹಳ್ಳಿ-ಕದಿರೇಹಳ್ಳಿ ರಸ್ತೆ ಅಭಿವೃದ್ಧಿಗೆ 25 ಲಕ್ಷ ,ಕೋಡಿಗೆಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ , ಕದಿರೇಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 13.90 ಲಕ್ಷ ನೀಡಲಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಇದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಮ್ಮದು 10% ಸರ್ಕಾರ್ ಎಂದು ಯಾವುದೇ ಆದರವಿಲ್ಲದೆ ಅಪಪ್ರಚಾರ ಮಾಡಿದರು. ಆದರೆ ಇಂದಿನ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಯವರಿಗೆ ನಮ್ಮ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ನೇರವಾಗಿ ಪತ್ರ ಬರೆದರು ಸಹ ಅವರಿಂದ ಯಾವುದೇ ಉತ್ತರವಿಲ್ಲ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕುಡಿಯುವ ನೀರಿನ ಯೋಜನೆಗಾಗಿ 2,300 ಕೋಟಿ ಬಿಡುಗಡೆ ಮಾಡಿದ್ದರು. ಡಿಕೆ ಶಿವಕುಮಾರ್ ಪವರ್ ಮಿನಿಸ್ಟರ್ ಆಗಿದ್ದಾಗ ನಮ್ಮ ತಾಲೂಕಿಗೆ ವಿಶ್ವವೆ ತಿರುಗಿ ನೋಡುವಂತಹ ಸೋಲಾರ್ ಪಾರ್ಕ್ ತಂದು ಇಲ್ಲಿನ ಜನರು ನಿಮ್ಮದೇ ಆಗಿ ಬದುಕುವಂತೆ ಮಾಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕದಿರೆಹಳ್ಳಿ ಜಗನ್ನಾಥ್, ಕ್ಯಾತಗನಹಳ್ಳಿ ನಾಗರಾಜಪ್ಪ, ಎಇಇ ಸುರೇಶ್, ಬಸವಲಿಂಗಪ್ಪ , ಕೆಂಚರಾಯ, ಈರಣ್ಣ , ಮಂಜುನಾಥ್, ರೇಣುಕಮ್ಮ , ಪೂಜಾರ್ ಹನುಮಂತರಾಯಪ್ಪ , ಗಂಗಮ್ಮ ಹಾಗೂ ಇನ್ನೂ ಹಲವರು ಉಪಸ್ಥಿರಿದರು.