Publicstory/prajayoga
ತುಮಕೂರು: ಧೈರ್ಯ,ಶಾಂತಿ, ಸಮೃದ್ದಿ ಹಾಗೂ ಸರ್ವಧರ್ಮ ಸ್ವಮನ್ವಯತೆಯ ಸಂಕೇತವಾಗಿರುವ ಭಾರತದ ತ್ರಿವರ್ಣ ದ್ವಜವನ್ನು ದೇಶದ ನಾಗರಿಕರೆಲ್ಲರೂ ಸ್ವಾತಂತ್ರದಿನದ ಅಮೃತ ಮಹೋತ್ಸವದ ದಿನದಂದು ತಮ್ಮ ಮನೆಗಳ ಮೇಲೆ ಹಾರಿಸುವ ಮೂಲಕ ಪ್ರಧಾನಿ ಮೋದಿ ಅವರ ಆಶಯವನ್ನು ಈಡೇರಿಸುವಂತೆ ಮಹಾನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಮನವಿ ಮಾಡಿದ್ದಾರೆ.
ನಗರದ ವಿಧ್ಯಾನೀಕೇತನ ಶಾಲೆಯ ಮಕ್ಕಳು, ಶಿಕ್ಷಕ ವೃಂದದವರಿಗೆ ಹರ್‌ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಬಾವುಟ ನೀಡಿ ಮಾತನಾಡಿದ ಅವರು, ಕೇಸರಿ ಧೈರ್ಯ, ಬಳಿ ಶಾಂತಿ, ಹಸಿರು ಸಮೃದ್ಧಿ ಮತ್ತು ಬಾವುಟದ ಮದ್ಯದಲ್ಲಿರುವ ಅಶೋಕ ಚಕ್ರ ಸೌಹಾರ್ಧತೆಯ ಸಂಕೇತವಾಗಿದೆ. ಇದನ್ನು ಪ್ರತಿಯೊಬ್ಬ ಭಾರತೀಯರು ಆರ್ಥ ಮಾಡಿಕೊಂಡು ಸಹೋದರರಂತೆ ಬದುಕಬೇಕಾಗಿದೆ. ಪ್ರತಿ ದಿನ, ಪ್ರತಿ ಕ್ಷಣ ನಮ್ಮ ರಾಷ್ಟ್ರ ದ್ವಜದ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಧ್ವಜಗಳ ಬಳಕೆಯಿಂದ ದೂರ ಉಳಿದು, ಪರಿಸರದ ಜೊತೆಗೆ, ದೇಶದ ಗೌರವವನ್ನು ಕಾಪಾಡಬೇಕಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದ 75ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಹರ್‌ಘರ್ ಮೇ ತಿರಂಗ್ ಕಾರ್ಯಕ್ರಮ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ ಹೋರಾಟದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ನಮ್ಮಗೆ ಸಿಕ್ಕಿರುವ ಸ್ವಾತಂತ್ರವನ್ನು ಹೇಗೆ ರಕ್ಷಿಸಿಕೊಂಡು ಹೋಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವುದೇ ಆಗಿದೆ. ಹಲವರ ತ್ಯಾಗ, ಬಲಿದಾನದಿಂದ ಬಂದಿರುವ ಈ ಸ್ವಾತಂತ್ರವನ್ನು ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸನ ಗೌರ್ನರ್ ಸುಭಾಷಿಣಿ, ನಿವೃತ ಇಂಜಿನಿಯರ್ ರವೀಶ್, ಶಾಲಾ ಆಡಳಿತ ಮಂಡಳಿಯ ಸುರೇಂದ್ರ ಷಾ, ಚೇತನಕುಮಾರ್ ಹಾಗೂ ಶಾಲೆಯ ಶಿಕ್ಷಕವೃಂದದವರು ಪಾಲ್ಗೊಂಡಿದ್ದರು.