Thursday, May 30, 2024
Google search engine
Homeಲೇಖನನಿನ್ನ ಬಾಳು ಬೆಳಕಾಗುವುದು; ನಿನ್ನ ಬಿಟ್ಟವರ ಬಿಡು!

ನಿನ್ನ ಬಾಳು ಬೆಳಕಾಗುವುದು; ನಿನ್ನ ಬಿಟ್ಟವರ ಬಿಡು!

Publicstory/prajayoga

ಹರೀಶ್ ಬಾಬು, ಬ್ರಹ್ಮದೇವರಹಳ್ಳಿ

ಪ್ರಸುತ್ತ ಜಗವೇ ಸುಳ್ಳಿನ ಸಂತೆಯಲ್ಲಿ ವಹಿವಾಟು ವ್ಯಾಪಾರ ಜೋರಾಗಿ ಮಾರಾಟವಾಗುತ್ತಿದೆ. ಸತ್ಯವನ್ನು ಜಗತ್ತಿನಲ್ಲಿ ಕೊಳ್ಳುವರೇ ಇಲ್ಲವಾಗಿದ್ದಾರೆ. ಅದರ ಬೆಲೆ, ಬೇಡಿಕೆ ದಿನೇ ದಿನೇ ಗಣನೀಯವಾಗಿ ಈ ಸುಳ್ಳಿನ ಸಂತೆಯಲ್ಲಿ ನಾಟಕದ ಜೀವನದಲ್ಲಿ ಪಾತಾಳಕ್ಕೆ ಇಳಿದಿದೆ. ಬದುಕು ಸತ್ಯದ ಹಾದಿಯಲ್ಲಿ ಇರಬೇಕೆ ಹೊರತು ಸುಳ್ಳಿನ ಸರಮಾಲೆಗಳ ಹೆದ್ದಾರಿಯಾಗಬಾರದು.

ಜಗತ್ತು ಒಂದು ಮಾಯಾ ಲೋಕ, ಜನತೆ ಮಾಯಗಾರ, ಮಾತುಗಾರ ಪ್ರೀತಿ, ವಿಶ್ವಾಸ, ನಂಬಿಕೆ, ಸ್ನೇಹಕ್ಕೆ  ಮನದ ಇಂಗಿತ ಏಟಿಗೆ ಜೀವನ ದಿಕ್ಕು ಬದಲಾವಣೆಗೆ ಸೂತ್ರದಾರ. ಆಪ್ತ ಜೀವಿಯೊಂದು ಯಾರೊಬ್ಬರ ಮನದಿಂದ ದೂರ ಉಳಿದರೇ ಆ ಜೀವಿಯ ಮೇಲೆ ಇನ್ನೂ ನಂಬಿಕೆ ವಿಶ್ವಾಸ ವ್ಯಕ್ತಿಯನ್ನು ಕಾಡುವ ಪರಿ ಅಷ್ಟು ಇಷ್ಟು ಅಲ್ಲ. ಏಕೆಂದರೆ ಮನಸು ಎನ್ನುವಂತದ್ದು ಒಂದು ರೀತಿಯ ನ್ಯಾಯಾಲಯ. ಒಮ್ಮೆ ಒಪ್ಪಿ ತೀರ್ಪು ಕೊಟ್ಟರೆ ಆ ತೀರ್ಪು ಸುಳ್ಳು ಎಂದು ಸಾಬೀತು ಪಡಿಸಲು ಸಾಧ್ಯವಿಲ್ಲ. ಮನಃ ಸಾಕ್ಷಿಯೂ ಒಪ್ಪುವುದಿಲ್ಲ. ಹಾಗಾಗಿ ಒಪ್ಪಿ ಕೊಟ್ಟ ತೀರ್ಪು ಮತ್ತೆ ಸರಿಯಲ್ಲವೆಂದು ಅಲ್ಲೆಗೆಳೆಯುವಂತಿಲ್ಲ. ಪ್ರೀತಿ ವಿಶ್ವಾಸ ನಂಬಿಕೆ ಎನ್ನುವಂತಹದ್ದು ಮನುಷ್ಯನ ಜೀವನವನ್ನೇ ಬದಲಾಯಿಸುವ ದೊಡ್ಡ ಮಂತ್ರಗಳು. ಹಾಗೂ ಸುಂದರ ಜೀವನವನ್ನು ಕೆಲವೇ ಕ್ಷಣಗಳಲ್ಲಿ ಹಾಳು ಮಾಡುವ ದೊಡ್ಡ ನರಭಕ್ಷಗಳೆಂದರು ತಪ್ಪಿಲ್ಲ.

ಗೆಳೆಯನೊಬ್ಬ ಒಂದು ದಿನ ಮೆಸೆಜ್ ಹಾಕಿದ. ಅಣ್ಣ ಹೇಗಿದ್ದೀಯಾ ಎಂದು. ಚನ್ನಾಗಿ ಇದ್ದೇನೆ ತಮ್ಮ. ನೀನು ಹೇಗಿದ್ದೀಯಾ ಎನ್ನುತ್ತಾ ಕ್ಷೇಮ ಸಮಾಚಾರಗಳು ಸಂವಹನ ಮುಂದುವರೆಯುತ್ತಾ ಹೋಯಿತು. ಕೊನೆಗೆ ಕೇಳಿದ. ಅಣ್ಣ ಒಂದು ಆಪ್ತ ಜೀವವೊಂದು ತನ್ನೊಡನೆ ಮಾತು ಬಿಟ್ಟಿದೆ ಸ್ನೇಹ ಪ್ರೀತಿ ವಿಶ್ವಾಸಕ್ಕೆ ಮತ್ತೊಂದು ಹೆಸರೇ ಆ ಜೀವ ಎಂದು ಆತನಿಗೆ ಆದ ಬಾಧೆ ನನ್ನ ಬಳಿ ಹೇಳಿಕೊಂಡ. ಅಣ್ಣ ಅದರ ಸಂಕಟ ನೋವು ಬಾದೆ ಅಷ್ಟು ಇಷ್ಟಲ್ಲ. ತುಂಬಾ ಕಾಡುತ್ತಿದೆ. ಇಂತ ಪರಿಸ್ಥಿತಿ ಮತ್ಯಾರಿಗೂ ಬರವುದು ಬೇಡ ಎಂದ ತಮ್ಮ. ಸಮಾಧಾನ ಮಾಡಿಕೋ ಈ ಜಗತ್ತಿನಲ್ಲಿ ಮೋಸ ಮಾಡಿದವರಿಗಿಂತ ಮೋಸ ಹೋದವರೇ ಹೆಚ್ಚು. ಅವಕಾಶವಾದಿಗಳೇ ಹೆಚ್ಚು ಎಂದೆ. ಆದರೂ ಅವನಿಗೆ ಸಮಾಧಾನವಾಗದ ಕಾರಣ ಆ ಜೀವ ಜೀವನ ಪೂರ್ತಿ ನನ್ನ ಜೊತೆಯಿರಬೇಕು ಎಂದೆಲ್ಲ ತನ್ನ ನೋವು ಹೊರ ಹಾಕಿದ. ಆಗ ನಾನು ಇದೆ ನೀನು ಮಾಡಿದ ದೊಡ್ಡ ತಪ್ಪು. ಅತಿಯಾದ ನಂಬಿ,ಕೆ ಪ್ರೀತಿ, ವಿಶ್ವಾಸ ಒಳ್ಳೆಯದಲ್ಲ. ತನ್ನ ನೆರಳೇ ಸದಾ ಕಾಲಿನೊಂದಿದೆ ಇರುವುದಿಲ್ಲ. ಸಮಯಕ್ಕೆ ತಕ್ಕನಾಗಿ ದೂರ ಸರಿಯುತ್ತಾ ಹೋಗುತ್ತದೆ. ಹಾಗಿದ್ದಾಗ ಇನ್ನೂ ಮನುಷ್ಯ ಬದಲಾಗಲಾರನೆ ಯೋಚಿಸು ಎಂದು ತಿಳಿ ಹೇಳಿದೆ.

ಸಾಹಿತಿ ಯುವರಾಜ್  ಹಾಡನ್ನೊಂದು ಕಟ್ಟಿದ್ದಾರೆ. ಅದನ್ನು ಇಲ್ಲಿ ಎಳೆತರುತ್ತೇನೆ.

ಅಣ್ಣ ತಮ್ಮ ಅಕ್ಕ ತಮ್ಮ
ಎಲ್ಲಿ ತನಕಾ | ಬದುಕಿ ಬೆಳೆಯೋತನಕ
ಸತ್ತಾಗ ಬರುವರು ತಮ್ಮ
ಗುಣಿತನಕಾ ಮಣ್ಣು ಮುಚ್ಚೋತನಕ||

ಹೆಣ್ಣು ಹೊನ್ನು ಮಣ್ಣು ನಿನ್ನದು
ಎಲ್ಲೀತನಕಾ, ನಿನ್ನಾ ಕೊರಳಿಗೆ ಕುಣಿಕೆ ಬೀಳೋತನಕ
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ
ಕಳಚಯ್ಯ ಮಾಯದ ಪೊರೆಯ ಮುಕ್ತೀ ಹೊಂದಾಕ ||

ಮನುಷ್ಯ ಯಾಕೆ ಸಾವಲಂಬಿಯಾಗಿ ಬದುಕುಬೇಕು ಯಾರು ನಮ್ಮ ಜೊತೆಗೆ ಏತಕ್ಕಾಗಿ ಇರುತ್ತಾರೆ ಎಂದು ಅತ್ಯಂತ ಸರಳವಾಗಿ ಮನಮುಟ್ಟುವಂತೆ ಸಾಹಿತ್ಯದಲ್ಲಿ ಹೇಳಿದ್ದಾರೆ.

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲರೂ ಕೂಡ ಜೀವನ ಪೂರ್ತಿ ಜೊತೆಗೆ ಇರಲಾರರು. ಕೇವಲ ಬದುಕಿ ಬಳೋತನಕವಷ್ಟೇ ಜೊತೆಗೆ ಇರುತ್ತಾರೆ. ಸತ್ತಾಗ ಬರುತ್ತಾರೆ ಎಲ್ಲಿವರೆಗೂ ಕಣ್ಣು ಮುಚ್ಚೋತನಕ, ಮಣ್ಣು ಮುಚ್ಚುತನಕ ಅಷ್ಟೇ. ಯಾರೂ ಇರುವುದಿಲ್ಲ, ಯಾರು ಬರುವುದಿಲ್ಲ. ಹಾಗಾಗಿ ಓ ಮನುಜ ಕಲಿನೀನು ಒಂಟಿಯಾಗಿ ಸ್ವಾವಲಂಬನೆ ಬದುಕನ್ನಾ ಎಂದು ಇಲ್ಲಿ ಕವಿ ಹೇಳಿದ್ದಾರೆ.

ಎರಡನೇ ಪ್ಯಾರದಲ್ಲಿ ಮತ್ತೆ ಕವಿ ಹೆಣ್ಣು ಹೊನ್ನು ನಿನ್ನದು ಎಲ್ಲಿತನಕ ಜೊತೆಗೆ ಇರುತ್ತದೆ. ನಿನ್ನ ಕೊರಳಿಗೆ ಕುಣಿಕೆ ಬೀಳೋತನಕ. ನಿನ್ನಾಸೆ ಪ್ರಾಣ ನಿಲ್ಲೋತನ ಅಷ್ಟೇ. ಮತ್ಯಾರು ಜೊತೆಗೆ ಇರಲ್ಲ ಕಳಚಯ್ಯ ಮಾಯದ ಪೊರೆ. ಮುಕ್ತಿ ಹೊಂದೊತನಕ ಅಷ್ಟೇ. ನಂತರ ಯಾರಿಗೆ ಯಾರಿಲ್ಲ ಎಂದು ಕವಿ ತುಂಬಾ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಈಗೀಗ ಮನಸ್ಸುಗಳ ನಡುವೆ ಸ್ನೇಹ, ಪ್ರೀತಿ ನಂಬಿಕೆ ಬಿರುಕು ಬಿಟ್ಟಾಗ ಅಥವಾ ಆಂತರಿಕ ಒತ್ತಡ ಎದುರಾದಾಗ ಆಗತ್ಯವಾಗಿ ಸಂವಹನ ತಟಸ್ಥವಾಗುತ್ತದೆ. ಮನಸ್ಸುಗಳು ಕೆಲವೊಂದು ದಿನಗಳ ಮಟ್ಟಿಗೆ ಒಂಟಿತನದ ಸಂಕಟ ಆತ್ಮೀಯತೆಯನ್ನು ಕಳೆದುಕೊಂಡ ನೋವು ಮನಸ್ಸನ್ನು ಕಾಡಿ ಪೀಡಿಸಿ ಒಂದು ನಿರ್ಧಾರಕ್ಕೆ ತಂದು ಬದುಕು ಅತಂತ್ರ ಸ್ಥಿತಿಗೆ ನೂಕುತ್ತದೆ. ಪ್ರೀತಿಯೆಂದು ಹೋದರೆ ನಂಬಿಕೆಯ ಕೊಲೆ, ಸ್ನೇಹವೆಂದು ಹೋದರೆ ವ್ಯಕ್ತಿತ್ವದ ಕೊಲೆ, ಸಂಬಂಧ ವೆಂದು ಹೋದರೆ ಭಾವನೆಗಳ ಕೊನೆ. ಹೀಗಿದ್ದಾಗ ಯಾರನ್ನಾ ನಂಬುವುದು ?  ನಮ್ಮವರು ಯಾರು? ಎಂದು ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಬೇಕು. ತನ್ನವರು ನನ್ನವರು ತನಗಾಗಿ ತಮ್ಮವರಿಗಾಗಿ ಎನ್ನುವುದು ಕೇವಲ ಭ್ರಮೆ.

ನೀವು ಕಣ್ಣಾರೆ ಕಂಡಿರಬಹುದು. ನೀವು ಒಂದು ದೇವಾಲಯಕ್ಕೆ ಅಥವಾ ಜಗಲಿಕಟ್ಟೆ ಅರಳಿ ಮರದಂತ ಪೂಜಾಸ್ಥಳಗಳನ್ನು ನೋಡಿರಬಹುದು. ಅಲ್ಲಿ ದೇವರ ಪೋಟೋಗಳನ್ನು ಎಸೆದು ಹೋಗಿರುತ್ತಾರೆ. ಅದನ್ನಾ ಒಮ್ಮೆ ಗಮನಿಸಿರುವಿರೋ!? ಆ ಪೋಟೋಗಳನ್ನು ದೇವಾಯಲಗಳಿಗೆ ಕೊಟ್ಟ ಉದ್ದೇಶವಂತೂ ಅಲ್ಲ. ಮನೆಗಳಲ್ಲಿ ಪೂಜೆ ಮಾಡಿ ಬಳಸಿ ಬೇಕಿಲ್ಲವೆಂದು ತಂದು ದೇವಾಲಯ ಅಥವಾ ಪೂಜಾ ಸ್ಥಳಗಳಲ್ಲಿ ಹಾಕಿ ಹೋಗಿರುತ್ತಾರೆ. ಈಗ ಒಮ್ಮೆ ಯೋಚಿಸಿ ದೇವರನ್ನೆ ಬಳಸಿ ಬಿಸಾಡುವಾಗ ಇನ್ನೂ ಮನುಷ್ಯರನ್ನಾ ಬಳಸಿ ಬಿಸಾಡುವರು ಇಲ್ಲವೇ? ಒಮ್ಮೆ ಅವಲೋಕಿಸಿ ಈ ಪ್ರಪಂಚವೇ ಬಳಸಿ ಬಿಸಾಡುವ ಜಗತ್ತು ನಾವು ತಿಳಿಯಬೇಕಷ್ಟೇ.

ಯುವ ಜನತೆ ಗಂಭೀರವಾಗಿ ಯೋಚಿಸ ಬೇಕಿದೆ. ಈ ಪ್ರಪಂಚ ಮೋಸದ ಪ್ರಪಂಚ.  ಪ್ರೀತಿ ವಿಶ್ವಾಸ ನಂಬಿಕೆ ಅಧಿಕಾರ ಹಣ ಅಂತಸ್ತು ಕ್ಷಣಿಕ ಸಂತೋಷಗಳೇ ಹೊರತು ಸದಾ ಸಂತೋಷ ಕೊಡುವ ಬುಟ್ಟಿ ತೊಟ್ಟಿ ಬುತ್ತಿಗಳಲ್ಲ…!  ಅರಿತು ಬಾಳಿದರೆ ಬಾಳು ಬೆಳಗುವುದು ಇಲ್ಲವಾದಲ್ಲಿ ನಿಮ್ಮ ಬಾಳಿನ ಬೆಳಕು ನೀನೆ ಆರಿಸಿಕೊಂಡತೆ, ಪ್ರಪಂಚ ಬದಲಾದಂತೆ ಬದಲಾಗು ನಿನ್ನ ಬಾಳು ಬೆಳಕಾಗುವುದು ನಿನ್ನ ಬಿಟ್ಟವರ ಬಿಟ್ಟು ಬಿಡು. ನಿನ್ನ ಜೀವನಕ್ಕೆ ಅಂಟಿದ ದರಿದ್ರ ಬಿಟ್ಟಂತೆ..

ಪ್ರೀತಿ,ವಿಶ್ವಾಸ,ನಂಬಿಕೆ ಉಳಿಸಿ ಬೆಳೆಸಿಕೊಂಡು ಜೀವನದಲ್ಲಿ ಬದುಕು ಕಟ್ಟಿಕೊಂಡವರಿಗಿಂತ ಎಲ್ಲವನ್ನೂ ಕಳೆದುಕೊಂಡು ಬದುಕು ಕೆಡಿಸಿಕೊಂಡವರೇ ಹೆಚ್ಚು. ಆಕೆ/ತನೋ ಅವರ ಬದುಕಿನಿಂದ ನಿರ್ಗಮಿಸಿದ ಸಲುವಾಗಿ ಬಂಗಾರದ ಜೀವನ ಹಾಳು ಮಾಡಿಕೊಂಡು ಮದ್ಯಪಾನ, ಧೂಮಪಾನ ಅನೈತಿಕ ಚಟುವಟಿಕೆಗಳನ್ನು ಕಲಿಯುವುದರ ಮುಖಾಂತರ ಬದುಕ ದಿಕ್ಕನ್ನೆ ಬೇರೆ ಕಡೆಗೆ ತಿರುಗಿಸಿ ಸಾವಿಗೂ ಶರಣಾಗಿ ಹೆತ್ತವರ ಕರುಳ ಕುಡಿಯನ್ನು ಚಿವುಟಿದ ಈ ಪ್ರೀತಿ ಪ್ರೇಮ ವಿಶ್ವಾಸದ ಕಣ್ಣೀರ ಕಥೆಗಳು ನಮ್ಮ ಎದುರೆ ನಿತ್ಯ ನಡೆಯುತ್ತವೆ. ಅತಿಯಾದ ಪ್ರೀತಿ ವಿಶ್ವಾಸ ನಂಬಿಕೆಯನ್ನೇ ಬದುಕಿನಲ್ಲಿ ಮುಖ್ಯವಾಗಿ ಪರಿಗಣಿಸುವುದು ಯುವಜನತೆಯ ದೊಡ್ಡ ತಪ್ಪು. ಹೆತ್ತವರ ಕರುಳ ಕುಡಿಯ ನೋವಿಗೆ ಮತ್ಯಾವ ನೋವು ಸಾಟಿಯಲ್ಲ. ಇದಕ್ಕಿಂತ ನೋವು ಸಂಕಟ ಮತ್ತೊಂದಿಲ್ಲ ಹಾಗಾಗಿ ಪ್ರೀತಿಸಿ ನಂಬಿ ವಿಶ್ವಾಸವಿಡಿ ಆದರೆ ನಿರೀಕ್ಷೆ ಮೀರಿ ಬೇಡ.
ಬಿಟ್ಟು ಬಿಡಿ ಬಿಟ್ಟವರ ಚಿಂತೆ
ಇದ್ದು ಬಿಡಿ ನೀವು ಇದ್ದಂತೆ.

ಈ ಬರಹ ಲೇಖಕರ ಅಭಿಪ್ರಾಯ, ವೆಬ್‌ಸೈಟ್‌ನ ಅಭಿಪ್ರಾಯವಲ್ಲ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?