Publicstory/prajayoga
ತುಮಕೂರು: ವಿದ್ಯಾರ್ಥಿಗಳ ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರ ಸಭೆ ಅತ್ಯಗತ್ಯ ಎಂದು ಶ್ರೀವನಿತಾ ವಿದ್ಯಾ ಕೇಂದ್ರದ ಮುಖ್ಯಶಿಕ್ಷಕಿ ಬಿ.ಸುಜಾತ ಅಭಿಪ್ರಾಯಪಟ್ಟರು.
ನಗರದ ಮಧುಗಿರಿ ರಸ್ತೆಯ ಶ್ರೀ ವನಿತಾ ವಿದ್ಯಾ ಕೇಂದ್ರ ಯಲ್ಲಾಪುರ ದಿಂದ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲನೇ ಪೋಷಕರ ಸಭೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಮಕ್ಕಳ ಕಲಿಕೆಯ ಜತೆಗೆ ಶಾಲಾ ಆಡಳಿತ, ಸಿಬ್ಬಂದಿಗಳೊಂದಿಗೆ ಪೋಷಕರು ಉತ್ತಮ ಬಾಂಧವ್ಯವನ್ನು ಹೊಂದಬೇಕು. ಇದರಿಂದ ಚಿಂತನ ಮಂಥನ ನಡೆಸಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಬೇಕು-ಬೇಡಗಳನ್ನು ತಿಳಿಸಲು ಪೋಷಕರ ಸಭೆ ಉತ್ತಮವಾದ ಸಂವಹನದ ದಾರಿಯಾಗಿದೆ. ತಮ್ಮ ಮಕ್ಕಳ ಆರೋಗ್ಯ ಕಾಳಜಿ ಮತ್ತು ಶಾಲೆಗೆ ಕಳಿಸುವ ವೇಳಾಪಟ್ಟಿ ಮತ್ತು ಹೊಂ ವರ್ಕ್ ಗಳನ್ನು ಮಾಡಿಸುವಲ್ಲಿ ಪೋಷಕರು ಸಹಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಸಹಕರಿಸಬೇಕು ಎಂದರು.
ಈ ವೇಳೆ ಶಾಲೆಯ ಹಿರಿಯ ಶಿಕ್ಷಕ ರಾಮಕೃಷ್ಣಪ್ಪ ಪಿ, ಚಿತ್ರಕಲಾ ಶಿಕ್ಷಕ ಪುರುಷೋತ್ತಮ್ ಹಾಗೂ ಶಿಕ್ಷಕ ಪೋಷಕ ಸಮಿತಿ (PTA) ಉಪ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಪೋಷಕರು ಹಾಗೂ ಶ್ರೀವನಿತಾ ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.