Publicstory/Prajayoga
– ವರದಿ, ಎ.ಶ್ರೀನಿವಾಸಲು
ಪಾವಗಡ: ಪಟ್ಟಣದ ತುಮಕೂರು ರಸ್ತೆಯಲ್ಲಿ ಬುಧವಾರ ರಾತ್ರಿ 9 ಗಂಟೆ ವೇಳೆಗೆ, ಅಕ್ರಮವಾಗಿ ಎತ್ತುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಹಿಂದೂಪರ ಸಂಘಟನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದಾಗ ಕಣೆಕಲ್ ನಿಂದ ಹಿಂದೂಪುರಕ್ಕೆ 05 ಎತ್ತುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡ ಹೋಗುತ್ತಿರುವ ವಿಚಾರ ತಿಳಿದು ಬಂದಿದೆ. ಈ ವೇಳೆ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆಂಧ್ರಪ್ರದೇಶದ ಆದಿಗೇನಪಲ್ಲಿಯ ಭೀಮಣ್ಣ (28). ಕನೇಕಲ್ ನ. ಅಫಾನ್ ಫಯಾಜ್ (23) ಬಂಧಿತ ಆರೋಪಿಗಳಾಗಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.