Publicstory/prajayoga
ತುರುವೇಕರೆ: ತಾಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಯಹಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ವೃದ್ದೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೌರಮ್ಮ (77) ಮೃತ ದುರ್ದೈವಿ. ರಾಸುಗಳಿಗೆ ಮೇವು ತರಲು ತೋಟಕ್ಕೆ ಹೋಗಿದ್ದರು. ಕೃಷಿ ಹೊಂಡದ ಪಕ್ಕ ಬೆಳೆದಿದ್ದ ಹುಲ್ಲು ಕೊಯ್ಯುವಾಗ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ.
ಮಧ್ಯಾಹ್ನವಾದರೂ ವೃದ್ಧೆ ಮನೆಗೆ ಬಾರದೆ ಇದ್ದುದ್ದನ್ನು ಗಮನಿಸಿ ಮನೆಯವರು ತೊಟಕ್ಕೆ ತೆರಳಿ ನೋಡಿದಾಗ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಸಿದ್ದಾರೆ.