Sunday, November 10, 2024
Google search engine
Homeಕ್ರೀಡೆಕ್ರೀಡೆಯಿಂದ ಸದೃಢ ಭಾರತ

ಕ್ರೀಡೆಯಿಂದ ಸದೃಢ ಭಾರತ

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಏಳನೇ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

 ಈ ಕಾರ್ಯಕ್ರಮವನ್ನು ಡಾ. ರಾಘವೇಂದ್ರ ದೈಹಿಕ ಶಿಕ್ಷಕ ನಿರ್ದೇಶಕರು  ಶೇಷಾದ್ರಿಪುರಂ ಪದವಿ ಕಾಲೇಜು ಮೈಸೂರು, ರಾಷ್ಟ್ರ ಪ್ರಶಸ್ತಿ ವಿಜೇತರು ಎನ್ಎಸ್ಎಸ್ ಕಾರ್ಯಕ್ರಮದ  ಅಧಿಕಾರಿಗಳು ಇವರು  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಇರುವುದು ಬರೀ ಸ್ಪರ್ಧೆಗಾಗಿ ಅಲ್ಲ, ನಮ್ಮ ಆರೋಗ್ಯ ದೃಷ್ಟಿಯಿಂದ ಕೂಡ  ಒಳ್ಳೆಯದು.  ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸದೃಢಗೋಳಿಸುತ್ತದೆ.  ಮೊಬೈಲ್ ಬಳಕೆ ಕಡಿಮೆಮಾಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು, ದೈಹಿಕ ಶ್ರಮ ವಹಿಸುವ ಕ್ರೀಡೆಗಳನ್ನು ಆಡಬೇಕು. ಮುಂದಿನ ಭವಿಷ್ಯಕ್ಕಾಗಿ ಸದೃಢ ಭಾರತಕ್ಕಾಗಿ ಸದೃಢ ಯುವಜನತೆ ಬೇಕು. ನೀವೆ ನಮ್ಮ ಭಾರತದ ಭವಿಷ್ಯ. ಪ್ರತಿ ದಿನ ಒಂದು ಗಂಟೆ ಕ್ರೀಡೆಗಾಗಿ ಮೀಸಲಿಡಿ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಸ್ವಾಮಿ ಕೆ ಟ್ರಸ್ಟಿ ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಬೆಂಗಳೂರು ಇವರು ವಹಿಸಿದ್ದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಇವರು  “ ಇರುವೆಗಿರುವ ಚೈತನ್ಯ ರೂಢಿಸಿಕೊಳ್ಳಬೇಕು” ಸದಾ ಕ್ರಿಯಾಶೀಲವಾಗಿರಬೇಕು. “sound mind in a sound body” ಕ್ರೀಡೆ, ಯೋಗದ ಪ್ರಯೋಜನ ಸಾಕಷ್ಟಿದೆ. ಜಗತ್ತಿಗೆ ಯೋಗವನ್ನು ಪರಿಚಯಿಸಿದ್ದು ಭಾರತೀಯರು. ಜಗತ್ತೆ ಯೋಗವನ್ನು ಪಾಲಿಸುವಾಗ, ನಾವೇಕೆ ಪಾಲಿಸಬಾರದು? ಎಂದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶಶಾಂಕ್ ಎಂ ಗೋಪಾಲ್ ಟ್ರಸ್ಟಿ ಶೇಷಾದ್ರಿಪುರಂ ಎಜುಕೇಶನ್ ಟ್ರಸ್ಟ್ ಬೆಂಗಳೂರು ಇವರು ಆಗಮಿಸಿದ್ದರು.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿ  ಕುಶಲ್ ಜಿ ಕೆ ರಾಷ್ಟ್ರೀಯ ಕಬ್ಬಡಿ ಆಟಗಾರರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ಜಿ ಟಿ ಹಾಗೂ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?