Sunday, April 14, 2024
Google search engine
Homeಜನಮನವಿನಯ್ ಗುರೂಜಿ ಮೇಲೆ ಯಾವ ಕಣ್ಣು ಬಿತ್ತು…?

ವಿನಯ್ ಗುರೂಜಿ ಮೇಲೆ ಯಾವ ಕಣ್ಣು ಬಿತ್ತು…?


ಸತ್ಯ-ನ್ಯಾಯ-ಸಮಾನತೆ-ಅಹಿಂಸೆ-ಬಾತೃತ್ವದ ಪರ ಇದ್ದ ಅವಧೂತ

ವಿನಯ್ ಗುರೂಜಿ ಬಗ್ಗೆ ಮಾತನಾಡುವ ಮೊದಲು ಇತಿಹಾಸದ ಪುಟ ಅವಲೋಕಿಸದ ಹೊರತು ಸತ್ಯಸತ್ಯತೆ ತಿಳಿಯಲಾ ಗುವುದಿಲ್ಲಾ ಎನ್ನುವುದು ನ್ಯಾಯಸಮ್ಮತ. ಯತಾಸ್ಥಿತಿವಾದಿಗಳು, ಜಾತಿ ವ್ಯವಸ್ಥೆ ಕಠೋರವಾಗಿರುವ ನಮ್ಮಲ್ಲಿ, ಇಲ್ಲಿ ಯಾವ ವರ್ಗ ಯಾವ ಕೆಲಸ ಮಾಡಬೇಕೊ ಅದೇ ಕೆಲಸ ಮಾಡಿದರೇ ಪ್ರತಿಯೊಂದನ್ನು ಸಹಿಸುತ್ತದೆ.

ಗರ್ಭಗುಡಿ ಸಂಸ್ಕೃತಿ, ಶ್ರೇಷ್ಟ-ಕನಿಷ್ಟ ಈ ವ್ಯವಸ್ಥೆ ಸಾವಿರಾರು ವರ್ಷಗಳ ಮೌಡ್ಯ ಆಚರಣೆ ಇವೆಲ್ಲವನ್ನು ಬುಡಮೇಲು ಮಾಡಲೊರಟರೆ ಅವರಿಗೆ ಅಪಹಾಸ್ಯ, ಅವಮಾನ, ಚಾರಿತ್ರ್ಯಹರಣ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ವಿನಯ್ ಗುರೂಜಿ ಹೊರತಲ್ಲಾ..

ದೇಶದ ಐತಿಹಾಸಿಕ & ಮೊಟ್ಟ ಮೊದಲ ಸಮಾನತಾವಾದದ ಮೂಲಪುರುಷ ಬುದ್ಧ ಸತ್ಯ ಹೇಳ ಹೊರಟಾಗ ಈ ದೇಶದ ಯತಾಸ್ಥಿತಿವಾದಿಗಳು ಮಾಡಿದ್ದು ಅಪಪ್ರಚಾರ & ಚಾರಿತ್ರಯಹರಣವನ್ನೆ..!

12 ನೇ ಶತಮಾನದ ಬಸವಣ್ಣ ಸಮಾನತೆ ಬಯಸಿ ಸಂಘರ್ಷಕ್ಕಿ ಳಿದಾಗ ಮಾಡಿದ್ದು ಅಪಪ್ರಚಾರ & ಚಾರಿತ್ರಯಹರಣವನ್ನೆ…!

ಸತ್ಯ-ಅಹಿಂಸಾ ಮಾರ್ಗ ಅನುಸರಿಸಿ ಜೀವನದುದ್ದಕ್ಕೂ ತುಂಡು ಬಟ್ಟೆ ಧರಿಸಿದ ಮಹಾತ್ಮ ಗಾಂಧಿ ಬಗ್ಗೆ ಇಂದಿಗೂ ಅವರ ಬಗ್ಗೆ ಮಾಡುತ್ತಿರುವುದು ಅಪಪ್ರಚಾರ & ಚಾರಿತ್ರ್ಯಹರಣವನ್ನೆ.

ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆ-ಸ್ವಾತಂತ್ರ್ಯ-ಬಾತೃತ್ವ ಬಯಸಿ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ಸಂವಿಧಾನ ರಚಿಸಿ, ಕಾನೂನು ರೂಪಿಸಿ, ಸಮಾನತೆ ಜಾರಿ ಮಾಡಿದಾಗಿನಿಂದ ಇಂದಿನ ವರೆವಿಗೂ ಅವರ ಜ್ಞಾನ & ತ್ಯಾಗ ವನ್ನು ಮರೆತ ಈ ದೇಶ ಅವರ ಚಿಂತನೆಗಳನ್ನು ಜಾತಿ ಕಾರಣಕ್ಕಾಗಿ ತುಚ್ಚಿಕರಿಸಿ, ಕಡೆಯದಾಗಿ ಅವರ ಚಿಂತನೆಗಳಿಗೂ ಚಿತೆ ತಯಾರು ಮಾಡಿಕೊಂಡು ಅವರ ಚಿಂತನೆಗಳ ಸಮಾನತಾವಾದ ವನ್ನು ಸುಡುವುದಕ್ಕೆ ಕಾಯುತ್ತಿದ್ದಾರೆ..

ಇತಿಹಾಸವೇ ಹೀಗಿದ್ದ ಮೇಲೆ ವಿನಯ್ ಗುರೂಜಿಯವರ ಚಾರಿತ್ರ್ಯಹರಣದ ಹಿಂದಿರುವ ಕೈವಾಡ ಯತಾಸ್ಥಿತಿವಾದಿಗಳದ್ದೇ..
ಅಂದರೇ ಬದಲಾವಣೆ ಬಯಸದ ಸಂಪ್ರದಾಯವಾದಿಗಳದ್ದೇ..

ವಿನಯ್ ಗುರೂಜಿ ಇಷ್ಟಕ್ಕೂ ಶೂದ್ರ ಕುಟುಂಬದಿಂದ ಬಂದವರು.
ಗುರೂಜಿ, ಜ್ಯೊತಿಷಿ ಎಲ್ಲಾ ಮೌಡ್ಯ ಸಂಪ್ರದಾಯ ಮೀರಿ, ನೈಜತೆ, ಸತ್ಯತೆ, ಬದುಕಿನ ಮುಖ್ಯ ಗುರಿ, ಬದುಕಿನ ಉದ್ದೇಶ, ಕುಟುಂಬದ ಪ್ರತಿಯೊಬ್ಬರ ಜವಬ್ದಾರಿ, ಸಮಾಜದ ಪ್ರತಿ ಮನುಷ್ಯನ ಜವಬ್ದಾರಿಯನ್ನು ಮಹಾತ್ಮರ ಮಾತುಗಳಿಂದ ಪ್ರಭಾವಿತರಾಗಿ ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತ ಕೈಂಕರ್ಯ ಮಾಡುತ್ತಾ, ಸಂತನಂತೆ ಮನಃ ಪರಿವರ್ತನೆ ಮಾಡುತ್ತಿರುವ ಸಮಾಜ ಸುಧಾರಕರು ವಿನಯ್ ಗುರೂಜಿಯವರು.

ಇಂತಹ ಸರಳ ಸ್ನೇಹ ಜೀವಿಗೆ ಚಿಕ್ಕ ಮಂಗಳೂರು ಜಿಲ್ಲೆಯಲ್ಲಾ, ಕರ್ನಾಟಕ ರಾಜ್ಯವಲ್ಲಾ, ಭಾರತ ದೇಶವಲ್ಲದೇ ಪ್ರಪಂಚದಾದ್ಯಂತ ಅಸಂಖ್ಯಾತ ಹಿಂಬಾಲಕರ ನ್ನೊಂದಿರುವ ಈ ಸಂತನು, ಸಾಮಾಜಿಕ ವ್ಯವಸ್ಥೆಯ ಎಲ್ಲಾ ಅಸಮಾನತೆ ತೊಡೆದು ಹಾಕುತ್ತಾ, ಯಾವ ವರ್ಗ ತಾನೇ ಶ್ರೇಷ್ಚ ಎಂಬ ಸಂಕುಚಿತ ಮನಸ್ಥಿತಿ ಹೊಂದಿತ್ತೊ ಅವರ ಮನಸ್ಥಿತಿಗೆ ಕೊಡಲಿ ಪೆಟ್ಟಾಕಿ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕನಸು ಕಂಡವರಿಗೆ ಈ ತರಹದ ಅಪಪ್ರಚಾರ ನಿರೀಕ್ಷಿತವೆ.

ಗುರೂಜಿಯವರು ಬಾಯಲ್ಲಿ ಎಂದು ಬುದ್ಧ, ಬಸವ, ಅಂಬೇಡ್ಕರರ, ಗಾಂಧಿಯವರ ಚಿಂತನೆಗಳು ಬಂದವೋ ಈ ವ್ಯವಸ್ಥೆಯ ಬುಡ ಅಲುಗಾಡಿತು. ಮತ್ತೊಬ್ಬ ಸಮಾಜ ಸುಧಾರಕ ಈ ನೆಲ ಮುಟ್ಟಿದರು ಎಂದು. ಯಾವ ಸಂಪ್ರದಾಯವಾದಿಗಳು ತಾವೇ ಶ್ರೇಷ್ಚ ಎಂಬುದಾಗಿ ಹೇಳಿಕೊಂಡರೋ, ಅದೇ ಸಂಪ್ರದಾಯವಾದಿಗಳು ಗುರೂಜಿ ಯವರ ಸರಳತೆಗೆ & ಸತ್ಯ ಸಂದೇಶಕ್ಕೆ ಮೇಲ್ನೊಟಕ್ಕೆ ಶರಣಾದರು.. ಅಷ್ಟೇ ಸತ್ಯ ಆಂತರಿಕವಾಗಿ ಗುರೂಜಿಯವರು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು.

ಪರಿಸ್ಥಿತಿ, ಸಮಯಕ್ಕಾಗಿ ಕಾದು ನಿಂತ ಕೆಲವು ಪಟ್ಟಭದ್ರ ಹಿತಾ ಸಕ್ತಿಯ ಗುಂಪುಗಳು ಇಂದು ಒಂದಾಗಿ ಅವರ ಹೆಸರಿಗೆ ಮಸಿ ಬಳಿಯಲೊರಟಿವೆ.. ಅಖಂಡ ಬೌದ್ಧ ಧರ್ಮವನ್ನು ನಾಶ ಮಾಡಿದ್ದು ಇದೇ ಮನಸ್ಥಿತಿಯ ಪುಶ್ಯಮಿತ್ರ ಶೃಂಗನಲ್ಲವೇ..? ಅಭ್ಯಂತರವಿಲ್ಲಾ ಮಾಡಲಿ. ಆದರೆ ಗುರೂಜಿಯವರ ಸಾಮಾಜಿಕ ಸಮಾನತೆಗಾಗಿ ತೆಗೆದುಕೊಂಡ ಹಲವು ಪ್ರಥಮಗಳ ಬಗ್ಗೆ ನಾವು ಶಿಷ್ಯವೃಂದ ಮಾತನಾಡದಿದ್ದರೇ ನಾವೆಲ್ಲರೂ ಗುರೂಜಿಯವರಿಗೆ ಕೊಡುವ ಗುರು-ಗೌರವ ವಾದರೂ ಏನು..?

ಹತ್ತಾರು ವರ್ಷವು ಕೂಡಾ ಗುರೂಜಿಯವರ ಸೇವಾ ಕೈಂಕರ್ಯ ಸುಗಮವಾಗಿ ಸಾಗಿತ್ತು ಈ ವರ್ಷ ಯಾಕಿತರವಾಯ್ತು ಎಂಬುದರ ಬಗ್ಗೆ ಸ್ವಲ್ಪ ಚಿಂತಿಸೋಣ.

1. ಮೊದಲಿನಿಂದಲೂ ತಮ್ಮ ಆಶ್ರಮದಲ್ಲಿ ಗಾಂಧೀಜಿರವರ ಪ್ರತಿಮೆ ಇಟ್ಟಿರುವ ಕಾರಣವಾ..
2. ಗುರೂಜಿ ಯವರಿರುವುದು ಸದಾ ಜಾತ್ಯಾತೀತ ನಾಯಕರೊಟ್ಟಿಗಿನ ಒಡನಾಟ. ಅದು ಮಾಜಿ ಪ್ರಧಾನಿ ದೇವೆಗೌಡರವರಿಂದಿಡಿದು, ಎಸ್.ಎಂ ಕೃಷ್ಣ, ಯಡಿಯೂರಪ್ಪ, ರಮೇಶ್ ಕುಮಾರ್, ಡಿಕೆ ಶಿವಕುಮಾರ್ ವರೆಗು. (ಗುರೂಜಿಯವರ ಅಪಪ್ರಚಾರಕ್ಕೆ ಜಾತ್ಯಾತೀತರನ್ನು ದ್ವೇಷಿಸುವ ಕೋಮುವಾದಿಗಳ ಕೈವಾಡವೇ.?)
3. ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯವರ ಸಮಾನತಾವಾದ/ಬದಲಾವಣೆ ವಾದದ ಬಗ್ಗೆ ಮಾತಾಡುತ್ತಿರುವುದು.( ಗುರೂಜಿಯವರ ಅಪಪ್ರಚಾರಕ್ಕೆ ಯತಾಸ್ಥಿತಿವಾದಿಗಳ ಕೈವಾಡ & ಷಡ್ಯಂತ್ರವಿರಬಹುದೆ.?).
4. ದೇಶದಲ್ಲೇ ಪೌರ ಕಾರ್ಮಿಕರ ಪಾದ ತೊಳೆದು ಅವರ ಪಾದದಡಿಯಲ್ಲಿದ್ದಾನೆ ದೈವ ಎಂಬ ಸಂದೇಶ ಕೊಟ್ಟದ್ದು ಗುರೂಜಿಯವರು. ಬಹುಷಃ ಪುರೋಹಿತಶಾಹಿಗಳ ಅಸಹಿಷ್ಣುತೆಯು ಕಾರಣವಿರಬಹುದಾ..?
5. ಗುರೂಜಿಯವರು ಲಿಂಗ ಸಮಾನತೆ ಬಗ್ಗೆ ಮಾತನಾಡುತ್ತಾ ತೃತಿಯ ಲಿಂಗಿಗಳ ಸಮಾನತೆಗಾಗಿ ಮಾತನಾಡುತ್ತಾ ಸಮಾಜದಲ್ಲಿ ಅವರನ್ನು ಗೌರವಿಸಿ ಎಂದದ್ದು ಕಿಡಿಗೇಡಿಗಳ ಗುರೂಜಿ ವಿರುದ್ದದ ಕುಕೃತ್ಯಕ್ಕೆ ಕಾರಣವಾಯ್ತಾ.?..

6. ತಮ್ಮ ಆಶ್ರಮದಲ್ಲಿ ಗರ್ಭಗುಡಿ ಸಂಸ್ಕೃತಿಗೆ ತಿಲಾಂಜಲಿ ಇಟ್ಟು ದೈವ ಸಕಲರದು ಎಂದು ಸಾರಿದ ಕಾರಣಕ್ಕಾಗಿಯೂ ಗುರೂಜಿ ಯವರ ಅಪಪ್ರಚಾರಕ್ಕೆ ಕಾರಣವಿರಬಹುದಾ..?
7. ಕೆಲವೊಂದು ಜ್ಯೊತಿಷಿಗಳ ರಹಸ್ಯ ಕಾರ್ಯಸೂಚಿಯನ್ನು ಬಯಲಿಗೆಳೆದು ಜ್ಯೊತಿಷಿಗಳು ಹೀಗೆ ಇರಬೇಕು ಎಂದು ತಾಕೀತು ಮಾಡಿ, ಸಮಾಜಕ್ಕೆ ಅವರ ಮುಖ ತೋರಿಸಿದ್ದು ಗುರೂಜಿಯವರ ಅಪಪ್ರಚಾರಕ್ಕೆ ಕಾರಣವಿ ರಬಹುದಾ..?
8. ಕುಟುಂಬ ಎಂದರೇನು..? ತಂದೆ, ತಾಯಿ, ಗಂಡ, ಹೆಂಡತಿ, ಸಹೋದರ, ಸಹೋದರಿಯರ ಕಡೆಗೆ ಮಕ್ಕಳ ಜವಬ್ದಾರಿಯನ್ನು ಮಹಾತ್ಮರ ನುಡಿಗಳನ್ನು ಗುರೂಜಿರವರು ಸರಳವಾಗಿ ಜನಸಾಮಾನ್ಯರಿಗೆ ತಲುಪಿಸಿದ್ದು ತಪ್ಪಾಯ್ತಾ..?
9. ಜಾತಿ-ಧರ್ಮ ಮೀರಿ ವಿಶ್ವದ ಎಲ್ಲಾ ಧರ್ಮಿಯರು ಅದು ಮುಸಾಲ್ಮಾನ, ಕ್ರೈಸ್ತ, ಸಿಖ್, ಬೌದ್ದ, ಸಹಿಷ್ಣು ಹಿಂಧೂಗಳೂ ಸೇರಿದಂತೆ ವಿಶ್ವದೆಲ್ಲೆಡೆ ತಮ್ಮ ಅನುಯಾಯಿಗಳೊಂದಿಗೆ ಕುವೆಂಪುರವರ “ಮನುಜ ಮತ ವಿಶ್ವ ಪಥ” ವೆಂಬ ಸಂದೇಶ ಸಾರುತ್ತಿರುವುದಕ್ಕಾ..?

ಇಷ್ಚೆಲ್ಲಾ ಕಾರಣಗಳಿಂದ ಗುರೂಜಿರವರ ಮೇಲೆ ಅಪಪ್ರಚಾರವಾಗುತ್ತಿರುವುದಾದರೇ ಆಗಲಿ ಬಿಡಿ..
ಬುದ್ಧನ ಸತ್ಯ ಮಾರ್ಗ. ಬಸವಣ್ಣನ ಸಮಾನತಾ ಸಂಘರ್ಷದ ಮಾರ್ಗ.
ಗಾಂಧಿಯ ಅಹಿಂಸ ಮಾರ್ಗ. ಬಾಬಾ ಸಾಹೇಬರ ಸ್ವಾತಂತ್ರ್ಯ, ಸಮಾನತೆ, ಬಾತೃತ್ವದ & ಸಂವಿಧಾನ / ಕಾನೂನಿನ ಮಾರ್ಗ ನಮ್ಮನ್ನು ಇನ್ನಷ್ಚು ಬಲಿಷ್ಚಗೊಳಿಸಬೇಕು ಇದನ್ನೆ ಗುರೂಜಿಯವರು ನಮಗೇಳಿಕೊಟ್ಟಿರುವುದು..
ಇದೇ ಮಾರ್ಗದಲ್ಲಿರಲಿ ನಮ್ಮ ಹೋರಾಟ.

ಯಾವ ಸಂವಿಧಾನದ 4ನೇ ಅಂಗವಾದ ಮಾಧ್ಯಮ ರಂಗದ ಮೇಲೆ ಬಾಬಾ ಸಾಹೇಬರು ನಂಬಿಕೆಯಿಟ್ಟಿದ್ದರೋ, ಆ ಮಾಧ್ಯಮ ರಂಗದ ಈ ರೀತಿಯ ನಡೆ ನೋವುಂಟು ಮಾಡಿದೆ.

ಮಾಧ್ಯಮ ರಂಗ ಸಂವಿಧಾನದ 4 ನೇ ಆಧಾರ ಸ್ತಂಭವಾಗಿರಬೇಕು. ಕರ್ನಾಟಕದ ಬಹುತೇಕ ಮಾಧ್ಯಮಗಳು ತಮ್ಮ ಸಾಮಾಜಿಕ ಜವಬ್ದಾರಿ ನಿರ್ವಹಿಸುತ್ತಿವೆ. ಒಂದೆರಡು ಮಾಧ್ಯಮ ಹಣ ದಾಸೆಗೆ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾ, ವ್ಯಾಪಾರೀಕರಣ ಗೊಂಡಿರುವುದು ಬೇಸರ ತಂದಿದೆ..ಬಾಬಾ ಸಾಹೇಬರ ಆಶಯಗಳಿಗೆ ಕೊಳ್ಳಿ ಇಡೋ ಕೆಲಸ ಮಾಡಬೇಡಿ.

ಸತ್ಯ ಅಳುವಾಗ ಸುಳ್ಳು ನಗುತಿರುತ್ತೆ, ಅದೇ ಸತ್ಯ ಒಮ್ಮೆ ನಗಲು ಪ್ರಾರಂಭಿಸಿದರೆ ಸುಳ್ಳು ಸತ್ತೆ ಹೋಗುತ್ತೆ. ಗುರೂಜಿ & ಅವರ ಕುಟುಂಬ ಸತ್ಯ ಮಾರ್ಗಿಗಳು, ಇಂದು ಕೆಲವು ವಿಕೃತಿ ಮನಸ್ಥಿತಿಗಳು ನಮ್ಮನ್ನ ವಿಚಲಿತರನ್ನಾಗಿಸಬಹುದು ಎಂದು ಕೊಂಡಿದ್ದಾರೆ.. ಆ ಸುಳ್ಳು ಸುಳ್ಳೆಂದು ಜಗಜ್ಜಾಹಿರಾಗಲು ಕೆಲವೆ ದಿನ. ಜೀವನ & ಸಮಾಜ ಕಟ್ಟುವುದು ಸಂಘರ್ಷದ ಬದುಕು, ವಿಚಲಿತರಾಗದೇ ಮತ್ತಷ್ಟು ಶಕ್ತಿ & ವಿಶೇಷತೆಗಳಿಂದ ಸಮಾಜ ಕಟ್ಟೋಣ..

ಕೆಟ್ಟವರು ಕೆಟ್ಟದ್ದನ್ನೆ ಮಾಡುತ್ತಾರೆ.. ಸಮಾಜ ಕಟ್ಟಬೇಕಾದ ಕೆಲಸ ನಮ್ಮ ಹೆಗಲ ಮೇಲಿದೆ ನಾವು ಗುರೂಜಿರವರ ಕಾಯಕಕ್ಕೆ ಕೈ ಜೋಡಿಸೋಣಾ..

-ಲೇಖಕ: ಯಶವಂತ್ ತುಮಕೂರು✍️

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?