ಜನಮನ

ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರ ದಿಢೀರ್ ರಾಜಿನಾಮೆ

Publicstory


ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ.ಬಿಜೆಪಿಯ ನೂತನ ಅಧ್ಯಕ್ಷ ಲಕ್ಷ್ಮೀಶ ಅವರು ದಿಢೀರ್ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಮಾಜಿ ಅಧ್ಯಕ್ಷ, ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹೇಮಾವತಿ ನೀರನ್ನು ಬಿಡಲಿಲ್ಲ ಎಂಬ ಸಿಟ್ಟಿನಲ್ಲಿ ಸುರೇಶ್ ಗೌಡ ಅವರು ರಾಜಿನಾಮೆ ನೀಡಿದ್ದರು. ಈ ಕಾರಣದಿಂದ ಜಿಲ್ಲಾ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಸುರೇಶ್ ಗೌಡ ರಾಜಿನಾಮೆ ನಂತರ ಜಿಲ್ಲೆಯನ್ಮೇ ಎರಡು ಭಾಗ ಮಾಡಿದ ಪಕ್ಷವು ಇಬ್ಬರು ಅಧ್ಯಕ್ಷರ ನೇಮಕ ಮಾಡುವ ಮೂಲಕ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿತು. ಇದು ಅಚ್ಚರಿಗೂ ಕಾರಣವಾಗಿತ್ತು. ಇದರ ಹಿಂದೆಯೂ ಬಣ ರಾಜಕೀಯ ಕೆಲಸ ಮಾಡಿದೆ ಎಂದೇ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದರು.

ತುಮಕೂರು ಜಿಲ್ಲೆಯನ್ನು 2 ಜಿಲ್ಲೆಗಳಾಗಿ ವಿಭಾಗ ಮಾಡಬೇಕು ಎಂಬ ಜನರ ಹಕ್ಕೊತ್ತಾಯ ನಡುವೆಯೇ ಬಿಜೆಪಿ ತಾನೇ ಮುಂದಾಗಿ ಇಬ್ಬರು ಅಧ್ಯಕ್ಷರನ್ನು ನೇಮಿಸಿದ್ದು, ಆ ಪಕ್ಷದ ಕಾರ್ಯಕರ್ತರಲ್ಲಿ ರಾಜಕೀಯ ಹೊಸ ಹುರುಪನ್ನು ತಂದಿತ್ತು.

ಈಗ ದಿಢೀರನೆ ತುಮ್ಕೂರ್ ಜಿಲ್ಲಾಧ್ಯಕ್ಷ ಲಕ್ಷ್ಮೀಶ ಅವರು ರಾಜಿನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ .
ರಾಜಿನಾಮೆ ರಾಜಿನಾಮೆ ನೀಡಿರುವ ಯಾರ ಕೈಗೂ ಸಿಗದಂತೆ ದೂರವಾಗಿದ್ದಾರೆ ಅವರ ದೂರವಾಣಿ ಅವರಿಗೆ ಮೊಬೈಲ್ ಕರೆ ಮಾಡಿದರೆ ನಾಟ್ ರೀಚಬಲ್ ಎಂದು ಬರುತ್ತಿತ್ತು.
ಆರೆಸ್ಸೆಸ್ ನಾಯಕರೊಬ್ಬರು ಎಲ್ಲದಕ್ಕೂ ಮೂಗು ತೂರಿಸಿಕೊಂಡು ಬರುತ್ತಿರುವ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂಬ ಗುಸುಗುಸು ಪಕ್ಷದಲ್ಲಿ ಕೇಳಿಬರುತ್ತಿದೆ.
ರಾಜಿನಾಮೆ ನೀಡಿರುವ ಲಕ್ಷ್ಮೀಶ ಅವರು ರಾಜ್ಯ ಕಾರ್ಯಕಾರಿಣಿ ಸಭೆಗೆ ಗೈರಾಗಿದ್ದಾರೆ ಇದು ಪಕ್ಷಕ್ಕೆ ಇರುಸುಮುರುಸು ಉಂಟುಮಾಡಿದೆ.

ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈ ಮೂಲಕ ಕೇಳಿ ಬಂದಿದೆ. ಈಗಾಗಲೇ ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಲೋಕಸಭಾ ಸದಸ್ಯ ಜಿ ಎಸ್ ಬಸವರಾಜ್ ಅವರ ನಡುವೆ ಮುನಿಸು ಬಹಿರಂಗಗೊಂಡಿದೆ.

ಪಕ್ಷದಲ್ಲಿ ಬಸವರಾಜ್ ಗುಂಪು, ಮಾಧುಸ್ವಾಮಿ ಗುಂಪು, ಸೊಗಡು ಶಿವಣ್ಣ ಅವರ ಗುಂಪು ಹೀಗೆ ಗುಂಪುಗಳಾಗಿ ಒಡೆದು ಹೋಗಿರುವ ಬಿಜೆಪಿ ಗೆ ಅಧ್ಯಕ್ಷರ ರಾಜಿನಾಮೆ ಹೊಸ ತಲೆನೋವಾಗಿ ಪರಿಣಮಿಸಿದೆ .

ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯುವ ಹೊತ್ತಿನಲ್ಲೇ ಪಕ್ಷದ ಈ ಬೆಳವಣಿಗೆಗಳು ಮುಂದಿನ ಚುನಾವಣೆ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಲಕ್ಷ್ಮೀಶ ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಪಕ್ಷಕ್ಕೆ ಒಬ್ಬ ದಕ್ಷ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡುವಷ್ಟು ಪಕ್ಷ ಜಿಲ್ಲೆಯಲ್ಲಿ ಸೊರಗಿ ಹೋಗಿದೆ ಎಂಬುದು ಕಾರ್ಯಕರ್ತರ ಅಳಲು.

ಲಕ್ಷ್ಮೀಶ್ ಅವರ ಮೊಬೈಲ್ ನಾಟ್ ರೀಚಬಲ್ ಆಗಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಅದರ ಕಾರಣವನ್ನು ಸುದ್ದಿಯಲ್ಲಿ ಸೇರಿಸಲಾಗುವುದು.

Comment here