ತುಮಕೂರ್ ಲೈವ್

ಯಡಿಯೂರಪ್ಪ ನನ್ನ ಕೈ ಹಿಡಿದರು; ಕೆ.ಎನ್.ರಾಜಣ್ಣ

ತುಮಕೂರು; ತುಮಕೂರು ಡಿ.ಸಿ.ಸಿ.ಬ್ಯಾಂಕ್ ಸೂಪರ್ ಸೀಡ್ ಮಾಡಿದಾಗ ಯಡಿಯೂರಪ್ಪ ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಅವರಿಂದ ನನ್ನ ಈ ಸ್ಥಾನ ಉಳಿದಿದೆ ಎಂದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ತುಮಕೂರು‌ನಗರದಲ್ಲಿ ಗುರುವಾರ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಅವರು, ಬೇರೆ ಮನೆ ಮುರುಕರು ನನ್ನನ್ನು ಸಹಕಾರಿ ಆಂದೋಲನದಿಂದ ತೆಗೆಯಲು ಪ್ರಯತ್ನಿಸಿದರು. ಆದರೆ ಯಶಸ್ವಿ ಆಗಲಿಲ್ಲ ಎಂದು‌ ಯಾರ ಹೆಸರನ್ನು ಹೇಳದೆ ಟೀಕಿಸಿದರು.

ಅಕಾಲಿಕವಾಗಿ ಮೃತಪಟ್ಟ ರೈತರ ಒಂದು ಲಕ್ಷದ ವರೆಗಿನ ಸಾಲವನ್ನು ಡಿಸಿಸಿ ಬ್ಯಾಂಕ್ ಮನ್ನಾ ಮಾಡುತ್ತಿದೆ. ಇದನ್ನು ಎಲ್ಲ ಕಡೆಯು ಜಾರಿಗೆ ತರುವಂತೆ ಸಿಎಂ ಗೆ ಮನವಿ ಮಾಡಿದರು.

ತುಮಕೂರಿನಲ್ಲಿ 10 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯವಿರುವ ಮೆಗಾಡೇರಿ ಸ್ಥಾಪಿಸಬೇಕು. ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮತ್ತೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ಅಪಾರ ಸಂಖ್ಯೆಯಲ್ಲಿ ಸಹಕಾರಿ ಸೇರಿದ್ದರು.

Comment here