ಜಸ್ಟ್ ನ್ಯೂಸ್

ರಾತ್ರಿಯೇ ರಾಜ್ಯಪಾಲರಿಗೆ ಸಚಿವ ಖಾತೆ ಹಂಚಿಕೆ ಪಟ್ಟಿ; ಸಿದ್ದಗಂಗಾ ಮಠದಲ್ಲಿ ಮುಖ್ಯಮಂತ್ರಿ ಹೇಳಿಕೆ

ತುಮಕೂರು: ಸಚಿವರಿಗೆ ಖಾತೆ ಹಂಚಿಕೆ ಪಟ್ಟಿಯನ್ನು ಇಂದು ರಾತ್ರಿಯೇ ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಂಜೆ ಸಿದ್ದಗಂಗಾ ಮಠಕ್ಕೆ ಭೇಟಿ ಶ್ರೀಗಳ ಆರ್ಶೀವಾದ ಪಡೆದ ಬಳಿಕ ಮಾತನಾಡಿದರು.

ಸಿದ್ದಗಂಗಾ ಮಠದಿಂದ ನಾನು ಪ್ರೇರಣೆ ಪಡೆದಿದ್ದೇನೆ.‌ಮಠವು ದಾಸೋಹಕ್ಕೆ ಹೆಸರಾಗಿದೆ. ಶಿವಕುಮಾರ ಸ್ವಾಮೀಜಿ ಅವರ ಆರ್ಶೀವಾದ ನನ್ನ ಮೇಲಿದೆ ಎಂದರು.

ಖಾತೆ ಹಂಚಿಕೆಯ ವಿವರ ನೀಡಲಿಲ್ಲ.‌ ಪತ್ರಕರ್ತರೊಂದಿಗೆ ಚುಟುಕಾಗಿ ಮಾತನಾಡಿ ಬೆಂಗಳೂರಿಗೆ ತೆರಳಿದರು.

ಸಚಿವ ವಿ.ಸೋಮಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ, ಶಾಸಕರಾದ ರೇಣುಕಾಚಾರ್ಯ, ಶಿರಾ ಶಾಸಕ ಡಾ. ರಾಜೇಶ್ ಗೌಡ ಇತರರು ಇದ್ದರು.

Comment here