ತುಮಕೂರು ಲೈವ್

ಸಚಿವರ ಮನೆಗೆ ಮುತ್ತಿಗೆ ಪ್ರಕರಣ: ಜಾಮೀನು ಮಂಜೂರು

Publicstory


ತಿಪಟೂರು : ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ 24 (ಎನ್‍ಎಸ್‍ಯುಐ) ಕಾರ್ಯಕರ್ತರುಗಳಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಬುಧವಾರ ಸಂಜೆ ಮಂಜೂರಾಗಿದೆ.

ಜೂ.1ರಂದು ಘಟನೆ ನಡೆದ ದಿನವೇ ಎನ್‍ಎಸ್‍ಯುಐನ 15 ಹಾಗೂ ಜೂ.2ರಂದು 7 ಹಾಗೂ ಇಬ್ಬರು ಒಟ್ಟು 24 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಇನ್ನೂ ಬಂಧಿತ ಜೂ.3 ರಿಂದ ಕಳೆದ 5-6 ದಿನಗಳಿಂದಲೂ ಜಾಮೀನಿಗಾಗಿ ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಬಂಧಿತ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಶನಿವಾರಕ್ಕೆ ಜಾಮೀನು ತೀರಸ್ಕøತಗೊಂಡಿದ್ದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಜಾಮೀನಿಗಾಗಿ ಪುನಃ ಅರ್ಜಿ ಸಲ್ಲಿಸಿದ್ದು, ಬುಧವಾರ ಸಂಜೆ ಜಾಮೀನು ಮಂಜೂರಾಗಿದೆ.

ಜಾಮೀನು ಮಂಜೂರಾಗಿದ್ದು ಅಧಿಕೃತವಾಗಿ ನ್ಯಾಯಾಲಯದಿಂದ ಆದೇಶದ ಪ್ರತಿಯೂ ಸಂಜೆ ಸಿಗಲಿದ್ದು ಅದನ್ನು ನಗರಠಾಣೆ ಹಾಗೂ ತುಮಕೂರಿನ ಕಾರಾಗೃಹಕ್ಕೆ ಕಳುಹಿಸುವ ವೇಳೆಗೆ ಸಂಜೆ ಆಗಲಿದ್ದು ವಕೀಲರೇ ತಿಳಿಸುವವಂತೆ ಗುರುವಾರ ಬೆಳ್ಳಿಗ್ಗೆ ಎಲ್ಲರಿಗೂ ಬಿಡುಗಡೆಯ ಭಾಗ್ಯ ದೊರೆಯಲಿದೆ.

Comment here