ಕವನ

ಸೂರ್ಯನೇ ದೇವರಾದಾಗ

ಶಂಕರ್ ಬರಕನಹಾಲ್


ನೀ ಎದ್ದು
ಸೂರ್ಯನಿಗೆ ಎಚ್ಚರಿಸು..!!

ನೀ ಉರಿ ಬಿಸಿಲಿಗೆದ್ದು
ನಿನ್ನ ತಾಳ್ಮೆಯ ಸ್ಥಿತಿ ಏನು..!!

ಮಣ್ಣಲ್ಲಿ ಅಸ್ಥಿರವಾಗುವ ನಿನಗೆ
ಬೇಕಿರುವುದು ಭೂ-ವಿಜ್ಞಾನ ಸಾರುವ ಜೀವಕೋಶಗಳಿಗೆ ಸತ್ವ ಇರುವ ಮಿನರಲ್, ವಿಟಮಿನ್,ಕ್ಯಾಲೋರಿ ಫುಡ್ ಗಳು…!!

ವ್ಯಾಪಾರಕ್ಕೆ ಬೆಳೆದ
ರಾಸಾಯನಿಕ ಗೊಬ್ಬರದ
ದವಸ ಧಾನ್ಯಗಳ ಮುಖ್ಯ ಅತಿಥಿಗಳೇ
ಬಿಪಿ ಶೂಗರ್ ಗಳು…!!

ನಿನ್ನ ಆರೋಗ್ಯ
ನಿನ್ನ ಕೈಯಲ್ಲಿ ಇರುವಾಗ
ಪರಿವೇ ಇಲ್ಲದೇ ಆಸ್ಪತ್ರೆಯ
ಆದಾಯ ನಿನಾದೇ..!!

ನಾವು ನಂಬಿದ ವೈದ್ಯರು ಕಾಪಾಡುವ ಕೈಗಳಾಗಬೇಕು ವಿನಃ
ಕಿತ್ತು ತಿನ್ನುವಂತ ರಾಕ್ಷಸರಾಗಬಾರದು..!!

ರೋಗಿಗಳ ಮನಸ್ಸಿಗೆ
ಧೈರ್ಯವೇ ಚಿಕಿತ್ಸೆಯಾಗಲಿ.

Comments (2)

  1. Thank you Maheshanna and Publicstory

  2. ನಿಮ್ಮ ಈ ಬರವಣಿಗೆಯ ಬೆಳವಣಿಗೆ ಈಗೆ ಮುಂದುವರೆಯಲಿ ಹಾಗೂ ಅರೊಗ್ಯದ ಬಗ್ಗೆ ಕಾಳಜಿ ವಹಿಸುವ ಈ ಬರವಣಿಗೆಗೆ ನಮ್ಮ ಕಡೆಯಿಂದ ಹೃತ್ಪೂರ್ವಕ ವಂದನೆಗಳು..👍👍

Comment here