ಜಸ್ಟ್ ನ್ಯೂಸ್

ಭಾರತ ವಿಶ್ವಗುರು: ಸ್ವಾಮಿ ಜಪಾನಂದ ಜಿ

ಪಾವಗಡ: ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಭಾನುವಾರ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರಿಗೆ ಪಡಿತರ ವಿತರಿಸಿ ಅವರು ಮಾತನಾಡಿದರು.

ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರಪಂಚದ ಇತರೆ ದೇಶಗಳು ಅನುಕರಣೆ ಮಾಡುತ್ತಿವೆ. ದೇಶದ ಸಂಪ್ರದಾಯಗಳನ್ನು ಟೀಕಿಸುತ್ತಿದ್ದ ದೇಶಗಳೇ ಇಂದು ಕೈ ಕುಲುಕುವುದನ್ನು ಬಿಟ್ಟು ನಮಸ್ಕರಿಸುವುದನ್ನು ಅನುಕರಿಸುತ್ತಿವೆ. ಆಹಾರ ಪದ್ದತಿಗಳನ್ನು, ಜೀವನ ಶೈಲಿಯನ್ನು ಬದಲಿಸಿಕೊಳ್ಳಲಾಗುತ್ತಿದೆ. ವೈಜ್ಞಾನಿಕ ನೆಲೆಗಟ್ಟಿನ ಆಧಾರದ ಮೇಲೆ ಆಚರಿಸಲಾಗುತ್ತಿದ್ದ ಪದ್ದತಿಗಳನ್ನು ಮತ್ತೆ ಅನುಸರಿಸಲಾಗುತ್ತಿದೆ ಎಂದರು.

ಇತರೆ ದೇಶಗಳು ಕೊರೊನಾ ನಿಯಂತ್ರಿಸಲು ಸಾಹಸ ಪಡುತ್ತಿವೆ. ದೇಶದಲ್ಲಿ ನಿಯಂತ್ರಿಸಲಾಗುತ್ತಿದೆ. ಇದಕ್ಕೆ ಇಲ್ಲಿನ ಜನರಲ್ಲಿನ ರೋಗ ನಿರೋಧಕ ಶಕ್ತಿ, ಆಚಾರ, ವಿಚಾರ, ಜೀವನ ಶೈಲಿಯೂ ಕಾರಣ. ಕೊರೊನಾ ನಿಯಂತ್ರಿಸುವಲ್ಲಿ ದೇಶ ಪ್ರಥಮ ಸ್ಥಾನ ಪಡೆದಿದೆ. ವಿಶ್ವ ಸಂಸ್ಥೆ. ವಿಶ್ವ ಆರೋಗ್ಯ ಸಂಸ್ಥೆ ದೇಶದ ನಿರ್ಧಾರ, ಕ್ರಮಗಳನ್ನು ಶ್ಲಾಘಿಸುತ್ತಿವೆ. ಇವೆಲ್ಲವನ್ನು ಗಮನಿಸಿದಾಗ ದೇಶ ಶಿಘ್ರ ವಿಶ್ವಗುರುವಿನ ಸ್ಥಾನ ಪಡೆಯಲಿದೆ ಎಂದರು.

https://youtu.be/yylLsq-Cy5I

ಇತಿಹಾಸ ಲೇಖಕ ವಿ.ಆರ್.ಚೆಲುವರಾಜನ್, ಸ್ವಾಮಿ ಜಪಾನಂದ ಜಿ ಅವರು ಕೊರೊನಾ ಆರಂಭಿಕ ಹಂತದಲ್ಲಿದ್ದಾಗಲೇ ತಾಲ್ಲೂಕಿನ ಬಡ ಜನತೆಗೆ ಪಡಿತರ, ಕೂಲಿ ಕಾರ್ಮಿಕರಿಗೆ ಪರಿಹಾರ ಧನ, ಆಹಾರ ವಿತರಿಸಲು ಆರಂಭಿಸಿದರು. ರಾಜ್ಯದಲ್ಲಿಯೇ ಪ್ರ ಪ್ರಥಮವಾಗಿ ಕೂಲಿ ಕಾರ್ಮಿಕರ ಖಾತೆಗೆ ಹಣ ಹಾಕಿ ಊಟವನ್ನು ವಿತರಿಸಲಾಗುತ್ತಿದೆ.

ಪುರಸಭೆಯ ಕರ್ಮಚಾರಿಗಳಿಗೆ, ಹೋಂ ಗಾರ್ಡ್ , ಗ್ರಾಮ ಸೇವಕರು, ಸವಿತಾ ಸಮಾಜ, ಮಡಿವಾಳ ಸಮಾಜ, ಚಮ್ಮಾರರಿಗೆ, ಅಕ್ಕಸಾಲಿಗರಿಗೆ, ಟೈಲರ್ ಗಳಿಗೆ, ತಾಲ್ಲೂಕು ಫೋಟೋಗ್ರಾಫರ್ ಗಳಿಗೆ, ಮನೆಗೆಲಸ ಮಾಡುವವವರಿಗೆ, ಲಾರಿ ಚಾಲಕರುಗಳಿಗೆ, ತಾಲ್ಲೂಕಿನ ಅರ್ಚಕರಿಗೆ, ಬಡ ಆರ್ಯವೈಶ್ಯ ಜನರಿಗೆ, ಅತ್ಯಂತ ಕಡುಬಡವರಾದ ಬಿದಿರು ಕೆಲಸದವರಿಗೆ, ಮಹಾರಾಷ್ಟ್ರದ ರಾಯಘಡದಿಂದ ಬಂದಂತಹ ಕಾರ್ಮಿಕರಿಗೆ, ವಕೀಲರಿಗೆ, ಉತ್ತರ ಪ್ರದೇಶದಿಂದ ಬಂದಂತಹ ಕಾರ್ಮಿಕರಿಗೆ, ಬಿಹಾರ ರಾಜ್ಯದಿಂದ ಬಂದಂತಹ ಕಾರ್ಮಿಕರಿಗೆ, ದೂರದ ರಾಯಚೂರು ಪ್ರದೇಶದಿಂದ ಬಂದಂತಹ ಕಾರ್ಮಿಕರಿಗೆ, ಹಕ್ಕಿಪಿಕ್ಕಿ ಜನಾಂಗದವರಿಗೆ, ಬುಡಕಟ್ಟು ಜನಾಂಗದವರಿಗೆ ಪಡಿತರ ವಿತರಿಸಿದ್ದಾರೆ.

ಸಮಾಜದ ಎಲ್ಲ ವರ್ಗದವರಿಗೂ ರಾಜ್ಯದ ಯಾವುದೇ ಸಂಘ ಸಂಸ್ಥೆ ಇಷ್ಟು ಪ್ರಮಾಣದ ಸಹಾಯ ನೀಡಿಲ್ಲ. ಸ್ವಾಮೀಜಿ ಉತ್ತಮ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಎಸ್.ಎಸ್.ಕೆ ಸಂಘದ ಕಾರ್ಯದರ್ಶಿ ಪಿ.ವಿ.ಸುಬ್ಬನರಸಿಂಹ, ವಕೀಲ ಯಜ್ಞ ನಾರಾಯಣ ಶರ್ಮ, ಶೋಭ, ಜಯಶ್ರೀ ಉಪಸ್ಥಿತರಿದ್ದರು.

Comment here