ಕವನ

ಬೆಳೆಯುವುದೆಂದರೆ…

ಕವನಗಳ ರಚನೆಯಲ್ಲಿ II ರಜನಿ ಎಂ.  ಸಿದ್ಧಹಸ್ತರು. ವೃತ್ತಿಯಲ್ಲಿ ವೈದ್ಯರಾದರೂ ಅವರು ಅನುಭಾವಿಕ ನೆಲೆಯಲ್ಲಿ ಬದುಕನ್ನು ಕಾಣುವ ರೀತಿಯೇ ಅದ್ಬುತ. ಪ್ರಖ್ಯಾತ ಕವಿ ರೂಮಿ ಅವರಿಂದ ಪ್ರೇರಿತ ಕವನ.  ಬದುಕಿಗೂ ಹತ್ತಿರುವಾಗವ ಈ ಕವನ ನೂರಾರು ದ್ವನಿತಗಳನ್ನು ಒಳಗೊಂಡಿದೆ. http://publicstory.in ಓದುಗರಿಗಾಗಿ ಈ ಕವನ.

dr rajani

ಹಾಲು ಬಿಡಿಸಿದ  ಮಗುವು ಮೊಲೆ…
ಮರೆತ ಹಾಗೆ

ರೆಕ್ಕೆ ಬಲಿತ ಪಕ್ಷಿಯು
ಗೂಡಿಂದ ಹಾರಿ…
ಹೋದ ಹಾಗೆ

ಮೊಳಕೆ ಒಡೆದ
ಬೀಜ ಸೂರ್ಯನಿಗೆ..
ಹಾತೊರೆದ ಹಾಗೆ

ದಣಿದ ಜೀವ…
ಸೃಷ್ಟಿಯ ವೈಚಿತ್ರ್ಯವನ್ನು
ಕಣ್ತುಂಬಿಕೊಂಡ ಹಾಗೆ

ಅನೂಹ್ಯಕ್ಕೆ
ದೇವರ
ಹೊಣೆ ಮಾಡಿದ
ಹಾಗೆ

ಎಳವೆಯಾಗಿದ್ದ ನಿನ್ನನ್ನು
ನೀನು
ಅರಿತು ಕೊಂಡ
ಹಾಗೆ

(ರೂಮಿ ಕವನ ಪ್ರೇರಿತ )

Comment here