ವಿದ್ಯಾ ಸಂಸ್ಥೆ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೋಷಕರ ಸಭೆ ಅಗತ್ಯ : ಮುಖ್ಯಶಿಕ್ಷಕಿ ಬಿ ಸುಜಾತ

Publicstory/prajayoga

ತುಮಕೂರು:   ವಿದ್ಯಾರ್ಥಿಗಳ ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರ ಸಭೆ ಅತ್ಯಗತ್ಯ ಎಂದು ಶ್ರೀವನಿತಾ ವಿದ್ಯಾ ಕೇಂದ್ರದ ಮುಖ್ಯಶಿಕ್ಷಕಿ‌ ಬಿ.ಸುಜಾತ ಅಭಿಪ್ರಾಯಪಟ್ಟರು.

ನಗರದ ಮಧುಗಿರಿ ರಸ್ತೆಯ ಶ್ರೀ ವನಿತಾ ವಿದ್ಯಾ ಕೇಂದ್ರ ಯಲ್ಲಾಪುರ ದಿಂದ 2022-23 ನೇ ಸಾಲಿನ  ಶೈಕ್ಷಣಿಕ ವರ್ಷದ ಮೊದಲನೇ ಪೋಷಕರ ಸಭೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಮಕ್ಕಳ ಕಲಿಕೆಯ ಜತೆಗೆ  ಶಾಲಾ ಆಡಳಿತ, ಸಿಬ್ಬಂದಿಗಳೊಂದಿಗೆ ಪೋಷಕರು ಉತ್ತಮ ಬಾಂಧವ್ಯವನ್ನು ಹೊಂದಬೇಕು. ಇದರಿಂದ ಚಿಂತನ ಮಂಥನ ನಡೆಸಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳ ಬೇಕು-ಬೇಡಗಳನ್ನು ತಿಳಿಸಲು ಪೋಷಕರ ಸಭೆ ಉತ್ತಮವಾದ ಸಂವಹನದ ದಾರಿಯಾಗಿದೆ. ತಮ್ಮ ಮಕ್ಕಳ ಆರೋಗ್ಯ ಕಾಳಜಿ ಮತ್ತು ಶಾಲೆಗೆ ಕಳಿಸುವ ವೇಳಾಪಟ್ಟಿ ಮತ್ತು   ಹೊಂ ವರ್ಕ್ ಗಳನ್ನು  ಮಾಡಿಸುವಲ್ಲಿ ಪೋಷಕರು ಸಹಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಸಹಕರಿಸಬೇಕು ಎಂದರು.

ಈ ವೇಳೆ ಶಾಲೆಯ  ಹಿರಿಯ ಶಿಕ್ಷಕ ರಾಮಕೃಷ್ಣಪ್ಪ  ಪಿ,  ಚಿತ್ರಕಲಾ ಶಿಕ್ಷಕ ಪುರುಷೋತ್ತಮ್ ಹಾಗೂ ಶಿಕ್ಷಕ ಪೋಷಕ ಸಮಿತಿ (PTA) ಉಪ ಕಾರ್ಯದರ್ಶಿ  ಮಂಜುನಾಥ್ ಸೇರಿದಂತೆ ಪೋಷಕರು ಹಾಗೂ ಶ್ರೀವನಿತಾ  ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Comment here