ತುಳಸೀತನಯ
ಅಮ್ಮ ನಮ್ಮ ಜೊತೆಗಿರುವ ಪೋಟೋ ನೋಡ್ದಾಗ ಕೇವಲ ಒಂದು ಪೋಟೋ ಅನ್ಸುತ್ತೆ ಅಷ್ಟೇ. ಆದರೆ ಅದರ ಹಿಂದಿನ ಭಾವನೆಗಳು ಅಗಣ್ಯ, ಅನನ್ಯ, ಅಭೂತ.
ಇದ್ದಾಗ ವ್ಯಕ್ತಿ ಸದರ ಅನ್ಸತ್ತೆ. ನಮ್ಮನ್ನ ಅಗಲಿದಾಗ ಆ ನೋವು ಯಾರಿಂದಲೂ ತುಂಬಲಾಗಲ್ಲ.
ಇದು ಎಲ್ಲರಿಗೂ, ಎಲ್ಲರ ಬದುಕಿಗೂ, ಎಲ್ಲ ಕಾಲಕ್ಕೂ ಅನ್ವಯ ಕೂಡ. ಇದಕ್ಕೆ ಯಾರೂ ಹೊರತಾಗಿಲ್ಲ. ನಮ್ಮಲ್ಲಿ ನಾವು ಯಾರನ್ನೆ ಕಳೆದುಕೊಂಡ್ರು ಆ ಜಾಗನ ಮತ್ತೊಬ್ರು ತುಂಬೋಕಾಗಲ್ಲ.
ಸುಖ, ಸಂತೋಷ, ನೆಮ್ಮದಿ ಬೇರೆಲ್ಲೂ ಇಲ್ಲ. ಅದು ನಮ್ಮ ಸುತ್ತನೆ ಇದೆ. ನಾವು ಅದನ್ನ ಹುಡಕಬೇಕಷ್ಟೆ. ನಮ್ಮಲ್ಲಿನ ಸಣ್ಣ, ಸಣ್ಣ ವಿಷಯ, ವಿಚಾರದಲ್ಲೂ ಖುಷಿ ಇದೆ. ಆದ್ರೆ ದಡ್ರು ನಾವು ಒಣ ಪ್ರತಿಷ್ಟೆಯಲ್ಲಿ ನಮ್ಮನ್ನ ನಾವು ಹುದುಗಿಟ್ಟುಕೊಳ್ಳುತ್ತಿದ್ದೇವೆ.
ನಾವು ಮೊದಲು ಭಾವನಾ ಜೀವಿಗಳಾದರೆ ನಮ್ಮಲ್ಲಿ ಎಲ್ಲರೂ, ಎಲ್ಲರಿಗೂ, ಎಲ್ಲಾ ಸಮಯದಲ್ಲೂ ಅರ್ಥವಾಗ್ತಾರೆ. ಆ ಪ್ರಯತ್ನ ಕೂಡ ನಾವೇ ಮಾಡಬೇಕು.
ಇವತ್ತು ಅಮ್ಮ ನಮ್ಮನ್ನ ಅಗಲಿ ಕೇವಲ ನೆನಪಾಗಿದ್ದಾರೆ. ನಾಳೆ ನಾವು ಕೂಡ ಬದುಕಿನ ಪಯಣ ಮುಗಿಸಿ ಬಾರದ ಊರಿಗೆ ಸೇರಿ ನೆನಪಾಗಬಹುದು. ಆ ಮುನ್ನ ಒಂದೇ ಒಂದು ಕ್ಷಣ ನಮ್ಮನ್ನ ನಾವು ಅವಲೋಕಿಸಿ ಕೊಳ್ಳಬೇಕು.
ನಾನು ಯಾರು, ನನ್ನ ಸಂಬಂಧಗಳು ಯಾವು ಅಂತ. ಆಗ ನಮ್ಮ ಕುಟುಂಬದ ಸಣ್ಣ ಜೀವನು ಭಾವನಾ ಜೀವಿಯಾಗೇ ಕಾಣತ್ತೆ. ನಮ್ಮ ಬದುಕು ಬಲಿಷ್ಟಗೊಳ್ಳುತ್ತೆ.
ನಮ್ಮಮ್ಮ ಬರೀ ವ್ಯಕ್ತಿಯಾಗಿರಲಿಲ್ಲ. ಅದೊಂದು ಶಕ್ತಿ. ಆ ಜೀವ ನಮ್ಮ ಕುಟುಂಬದ ಎಲ್ಲರ ಅಂತರಂಗದಲ್ಲಿ ಹಸಿರಾಗಿದೆ. ಯಾಕಂದ್ರೆ ಅವರು ಅವಿದ್ಯಾವಂತರಾದರೂ ಯಾವ ವಿಶ್ವವಿದ್ಯಾಲಯದಲ್ಲೂ ಕಲಿಸದ ಜೀವನ ಪಾಠ ನಮಗೆ ಕಲಿಸಿಬಿಟ್ಟಿದ್ದಾಳೆ.
ನಾವೆಲ್ಲರೂ ಚೆನ್ನಾಗಿರಬೇಕು. ನನ್ನ ಮಕ್ಳು, ಮೊಮ್ಮಕ್ಳು ಒಗ್ಗಾಟ್ಟಾಗಿ ಒಂದು ಕಡೆ ಸೇರಿ ನಗ್ತಾನಗ್ತಾ ಇರಬೇಕು ಅನ್ನೊದಷ್ಟೆ ಅವರ ಆಂಬೋಣವಾಗಿತ್ತು.
ನನ್ನ ಪ್ರಕಾರ ಅವರು ಎಲ್ಲೂ ಹೋಗಿಲ್ಲ. ನಮ್ಮಲ್ಲೇ ಇದ್ದಾರೆ. ನಮ್ಮ ಒಗ್ಗಟ್ಟಿನ ಪ್ರೀತಿಯಲ್ಲಿ ಅವರ ಹೆಸರು ಸದಾ ಹಸಿರಾಗಿದ್ದೆ ಇರತ್ತೆ. ನಮ್ಮ ದೇಹದ ಕೊನೆ ಉಸಿರಿರುವ ತನಕ ಅವಳ ಮಕ್ಕಳಾದ ನಾವು ಒಬ್ಬರನ್ನ ಒಬ್ಬರು ಬಿಡದೇ ಒಂದಾಗಿ ಇರೋದೆ ಅವಳ ಆಶಯ.
ಅದಕ್ಕೆ ಬದ್ದರಾಗಿರೋದೆ ನಾವು ಅವಳಿಗೆ ಸಲ್ಲಿಸುವ ಕೃತಜ್ಞತೆ, ಗೌರವ. ಅವಳಿಗಾಗಿ ತೀರಿಸಬೇಕಾದ ಖುಣ ಕೂಡ ಆಗಿದೆ.
ಮಮತೆಯ ಕರುಣಾಮಯಿ ಅಮ್ಮ ನಮ್ಮ ಬದುಕು ಬರೆದವಳು.
ಸದಾಕಾಲ ತುಂಬಾನೇ ನೆನಪಾಗ್ತಾಳೆ.
ಅವಳು ಸತ್ತರೂ ನಮ್ಮೆಲ್ಲರ ಹೃದಯ ಮಂದಿರದಲ್ಲಿ ಜೀವಂತ, ಅಜರಾಮರ. ಯಾಕಂದ್ರೆ ಅವಳು ನಮ್ಮಮ್ಮ. ಕೆಡುಕೇ ಗೊತ್ತಿರದ ಪ್ರೀತಿಯ ಗಣಿ. ಅದಕ್ಕೆ ಕಳೆದು ಹೋದ ಅವಳ ನೆನಪು ಸದಾ ಕಾಡತ್ತೆ.