*ಅಮ್ಮನಿಗೆ*
ಇಂದು ತಾಯಂದಿರ ದಿನವಂತೆ,
ನನ್ನಮ್ಮನಿಗಿಲ್ಲ ಇದಾವುದರ ಚಿಂತೆ!
‘ಎಂದೂ ಇಲ್ಲದ ಪ್ರೀತಿ ಮಗನಿಗೆ!’
ಉಸುರುವಳು ಅಮ್ಮ ತಣ್ಣಗೆ,
ಶುಭಾಶಯಿಸ ಹೋಗೆ ಅವಳಿಗೆ.
ದಿನವಿಡೀ ಮನೆಯೊಳಗೇ ಹೆಣಗುವಳು.
ಇದ್ದದ್ದೇ ಅವಳಿಗೂ ನನಗೂ ಮಾತುಗಳು.
ಅವಳ ಕೋಪ-ತಾಪ, ಸಿಟ್ಟು-ಪಟ್ಟುಗಳು
ತಾಳುವವು ಬಾಣಗಳ ರೂಪ,
ಒಮ್ಮೊಮ್ಮೆ ಕಂಬನಿಯಾಲಾಪ.
ದೇವರಿಗೆ ಹರಕೆ ಹೊತ್ತು ಹಡೆದಿದ್ದಳಂತೆ,
ಚಿಕ್ಕಂದಿನಿಂದವಳ ಗೋಳಿಡಿಸಿದ್ದೀನಂತೆ.
ಹಸಿವು ನೀರಡಿಕೆಗಳ ಮರೆತು ಸವೆಯುತ್ತಲೇ ಇದ್ದಾಳೆ,
ತನ್ನ ಮರೆತು ತನ್ನವರಿಗಾಗಿ ಬದುಕುತಿದ್ದಾಳೆ,
ನಿನ್ನನ್ನೂ ಗಮನಿಸಿಕೋ ಎಂದರೆ ಗೊತ್ತೆನ್ನುತ್ತಾಳೆ!
ಕೊಡಲೇನು ಉಡುಗೊರೆಯ ಅವಳಿಗೆ?
ನಾ ಕೊಡಿಸುವ ಒಡವೆ-ವಸ್ತ್ರ ಪೆಟ್ಟಿಗೆಗೆ,
ಅವಳಿಗೆಂದೊಯ್ವ ತಿನಿಸು ಮಕ್ಕಳು-ಮೊಮ್ಮಕ್ಕಳಿಗೆ,
ಹೇಳದುಳಿಹ ಪ್ರೀತಿ ಅವಳ ಪಾಲಿಗೆ,
ತೋರದುಳಿದಿಹ ಭಕ್ತಿಯೇ ಅವಳಡಿಗೆ.
ಅಮ್ಮ ಶ್ರೀಮತಿ ಕಾಮಕ್ಕನೊಂದಿಗೆ ಶಶಿಕುಮಾರ ವೈ. ಬಿ.
Happy mother’s day amma, have a nice day and God bless you, keep smiling always Amma😚😍😘🤩🤗👰💃👩👦👌👍🤝👏💓❤🙏🙏🙏🙏🙏🙏🙏🙏