ವಿನಯ್ ಹೆಬ್ಬೂರು
ಅರೇ ಹಾಸಿಗೆ ಮೇಲೆ ನಾನು ಮಲಗಿದ್ದೇನೆ,ದೇಹವೆಲ್ಲ ಭಾರ ಅಂದರೆ ಅಂತಹ ಸಾಮಾನುಗಳನ್ನು ಹೇರಿದ್ದಾರೆ.ಮೂಗಿಗೂ ಎಂತದ್ದೂ ಪೈಪು..ತಿಳಿದವರಾರು ನನ್ನ ಹತ್ತಿರ ಸುಳಿಯುತ್ತಿಲ್ಲ.
.ಅನ್ಯ ಗ್ರಹ ಯಾತ್ರಿಗಳಂತಹ ವಸ್ತ್ರ
ತೊಟ್ಟ ಮೂರು ಮಂದಿ ನನ್ನ ಕಾಲಿನ ಬಳಿ ಕೂತಿದ್ದಾರೆ,ಅವರು ಯಾರು ಇಲ್ಲಿ ಎಕೆ ಕುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ… ಓಹ್ ಅವರು ಇನ್ನಾರೂ ಅಲ್ಲ ನನ್ನ ಅಪ್ಪ,ಅಮ್ಮ ಹಾಗೂ ಹೆಂಡತಿ.
ಅವರೇಕೆ ಅಳುತ್ತಿದ್ದಾರೆ..ಎಂದು ಕೇಳಬೇಕು ಎನಿಸುತ್ತಿದೆ.
ಆದರೆ ಮೂಗಿಗೆ ಅಳವಡಿಸಿರುವ ಯಾವುದೋ ವೈದ್ಯಕೀಯ ಸಾಧನದಿಂದ ಕೇಳಲು ಆಗುತ್ತಿಲ್ಲ.ನನ್ನ ಹಿಂಸೆ ಅವರಿಂದ ನೋಡಲಾಗುತ್ತಿಲ್ಲ.ಉಸಿರಾಡಲೂ ಕಷ್ಟ.
ಇದ್ದಕ್ಕಿದ್ದಂತೆ ಎನೋ ತೊಂದರೆಯಾಗುತ್ತಿದೆ ಉಸಿರಾಡಲೂ ಕಷ್ಟವಾಗುತ್ತಿದೆ.ವಿಪರೀತ ಬಾಯಾರಿಕೆ ಅದರೆ ಅದನ್ನು ಕೇಳಲು ಆಗುತ್ತಿಲ್ಲ.ನನ್ನ ಕಷ್ಟ ನೋಡಲಾಗದೆ ಡಾಕ್ಟರ್ ಅನ್ನು ಕರೆದಳು ನನ್ನಾಕೆ.ಅಪ್ಪ ಅಮ್ಮನ ಸಂಕಟ,ಗೋಳಾಟ.
ನನ್ನಾಕೆಯ ಮೂಕ ವೇದನೆ.ಡಾಕ್ಟರ್ ಅವರ ಬಳಿ ಎನೋ ಹೇಳುತ್ತಿದ್ದಾರೆ.ನನಗೋ ಕಣ್ಣೆಲ್ಲ ಮಂಜು,ಕಿವಿಯೂ ಅಸ್ಪಷ್ಟವಾಗುತ್ತಿದೆ.ಏನಾಗುತ್ತಿದೆ ನನಗೆ ತಿಳಿಯುತ್ತಿಲ್ಲ.ವಿಪರೀತ ವೇದನೆ..ಆ…ಆಆ…ಎನುವಷ್ಟರಲ್ಲಿ ಹಗುರವಾಧ ಭಾವನೆ.
ಯಾರೋ ಹೊಸ ವ್ಯಕ್ತಿ ನನ್ನನೂ ಕರೆದೊಯ್ಯಲು ಸಿದ್ದನಾಗಿದ್ದಾನೆ ,ಅವನು ಯಾರೋ,ಎಲ್ಲಿಗೆ ಕರೆದೊಯ್ಯುತ್ತಾನೂ ತಿಳಿಯದು.ಅವನನ್ನು ನೋಡಿದರೆ ಬಳಲಿದಂತಿದ್ದಾನೆ.ಅವನಲ್ಲಿ ವಿಚಾರಿಸಿದರೆ ಅವನಿಗೆ ತಿಳಿದಿರುವುದು ಇಷ್ಟೇ..ಅದೆಂತಹದ್ದೂ ರೋಗ ಬಂದಿದೆ..ಅದರಿಂದ
ಸಾಯುವವರ ಸಂಖ್ಯೆ ಹೆಚ್ಚಾಗಿದೆ ಅವರನ್ನು ಕರೆದುಕೊಂಡು ಕೋಗುವ ಕೆಲಸ ಮಾಡಿ ಮಾಡಿ ಸುಸ್ತಾಗಿದ್ದೇನೆ ಎಂದ……ಅಂದರೆ ನಾನು ಸತ್ತಿದ್ದೇನೆ….ಅಯ್ಯೋ ನಾನು ಸತ್ತಿದ್ದೇನೆ ಗೋಳಿಡಲು ಪ್ರಾರಂಭಿಸಿದೆ ಆಗ ಆವ್ಯಕ್ತಿ ಅಸಡ್ಡೆಯಿಂದ ‘ದಿನವೂ ಕೇಳಿ ಕೇಳಿ ಸಾಕಾಗುತ್ತಿದೆ,
ಮನೆಯಲ್ಲಿರು ಎಂದರೆ ಏಕೆ ಇಚೆ ಬರುವುದೇತಕ್ಕೆ ಸಾಯುವುದೇತ್ತಕ್ಕೆ ಎಂದ’.
.ದುಖಃ ಹೆಚ್ಚಾಗುತ್ತಿದೆ ಅವನು ಕೊನೆಗೆ ನನ್ನ ದುಖಃಕ್ಕೆ ಮರುಗಿ ಹೋಗಲಿ ಬಿಡು ದೇಹ ಬಿಟ್ಟ ಮೇಲೆ ಮತ್ತೆ ಹೋಗಲಾಗುತ್ತದೆಯೆ ಎಂದ.
ನಾನು ಅವನನ್ನು ಕಾಡಿ ಬೇಡಿ ನನ್ನ ದೇಹವನ್ನು ತೋರಿಸಿ,ಅಲ್ಲಿ ನನ್ನ ಹೆಂಡತಿ,ತಂದೆ ತಾಯಿ ಸಂಬಂಧಿಕರು ಮರುಗುತ್ತಿರುತ್ತಾರೆ ಕೊನೆಯದಾಗಿ ಅವರನ್ನೊಮ್ಮೆ ನೋಡಿ ಬರುತ್ತೇನೆ ಎಂದೆ.ನಕ್ಕ ಆತ ಸರಿ ನೋಡು ಎಂದ ಅಲ್ಲಿ ನೋಡಿದರೆ ನನ್ನ ದೇಹವನ್ನು ಮೂಟೆ ಕಟ್ಟಿದ್ದಾರೆ.ಅದರ ಹತ್ತಿರ ಯಾರೂ ಬರುತ್ತಿಲ್ಲ.
ನನ್ನ ಹೆಂಡತಿ,ಅಪ್ಪ ಅಮ್ಮ ಬಿಟ್ಟು ಇನ್ನಾರೂ ಇಲ್ಲ…….ಅಲ್ಲೆ ಇದ್ದ ಡಾಕ್ಟರ್ ಒಬ್ಬ ಇವನು ಕರೊನಾದಿಂದ ಸತ್ತ ರೋಗಿ ಅದಕ್ಕೆ ಸಂಬಂಧಿಕರು ಯಾರೂ ಬಂದಿಲ್ಲ.ರೋಗ ಹರಡುವ ಭಯ ಎಂದು ದಾದಿಯ ಬಳಿ ಹೇಳುತ್ತಿದ್ದ…ಕೇಳಿ ಬೇಸರವಾದರೂ ಮನೆಯಲ್ಲಿರದೇ ಮಾಡಿಕೊಂಡ ಸ್ವಯಂಕೃತ ಅಪರಾದಕ್ಕೆ ನೋವಾದರೂ.ಏನು ಮಾಡುವುದಕ್ಕಾಗದು..ಆ ಅಪರಿಚಿತ ವ್ಯಕ್ತಿಯ ಹಿಂಬಾಲಿಸುವುದೊಂದೆ ದಾರಿ……