ಡಾ. ರಜನಿ ಎಂ.
ಹೊತ್ತಿರುವ ಹೊರೆ
ಹಳೆ ಬಟ್ಟೆ,ಪುಡಿಗಾಸು
ಪಾಪುವಿನ ಸಿರಪ್
ರೇಷನ್ ಕಾರ್ಡ್..ಆಧಾರ್ ಜೆರಾಕ್ಸ್
ಬಿರು ಬಿಸಿಲು
ಆದರೂ ನಡಿಗೆ ಬೀಸು
ಎದ್ದು ಹೋಗಬೇಕು.. ಬಿರ ಬಿರನೆ
ಬಿಟ್ಟಿದ್ದ ಊರಿಗೇ
ಮರಳಿ ಅಟ್ಟುತ್ತಿದೆ ಕರೋನಾ
ಬಸಿರು,ಸಂಸಾರ,ಹೆರಿಗೆ ಎಲ್ಲಾ ಕೆಟ್ಟು ಬಂದ ಪಟ್ಟಣದಲ್ಲೇ
ನರಳಲು,ಉಪವಾಸ ಇರಲು..ಸಾವಿನ ಹೆದರಿಕೆ
ಇರುವಾಗ ಬೇಕು…ತನ್ನೂರು…
ತನ್ನ ಜನ..ಮನ
ದುಡಿಸಿಕೊಂಡ ಜನ ,ಊರು ..ನನ್ನದಲ್ಲ.…
ನಾಳೆಗೆ ಗ್ಯಾರಂಟಿ ಇಲ್ಲ..…ನನ್ನ
ಸಾವುಕಾರ
ದಾಟುವೆವು ನಾವು..ಯಮುನಾ.
ಕೃಷ್ಣಾ..ಕಾವೇರಿ..ಸೇರಲು.…ನನ್ನ ಊರು.
ನನ್ನ ಸೂರು
ಕಾಯಿದ,ಕರೊನಾಗಳ…ಅರಿವಿಲ್ಲಾ
ನೋಡಿಲ್ಲ .…..ಟಿವಿ.….
ಮೇಸ್ತ್ರಿ...ಪತ್ತೇ..….ಇಲ್ಲ
ಒಮ್ಮೆ. …ಊರು ..ಸೇರೀ.…ನೋಡಿದರೆ
ಹೆತ್ತವರ ಮುಖ
ತುತ್ತು ..ಅನ್ನ…ಕಡಕ್ ರೊಟ್ಟಿ
ತಲೆ ಜಗಲಿ
ಬದುಕಿದ್ದರೆ
ಕರೋನಾ…ಬಂದಾಗ..….
ಕಥೆ… ನನ್ನ..ಮೊಮ್ಮಗಳಿಗೇ.
ಕವಯತ್ರಿ ತುಮಕೂರಿನಲ್ಲಿ ವೈದ್ಯರು.