Saturday, July 20, 2024
Google search engine
HomeUncategorizedಕಳಪೆಗುಣಮಟ್ಟದ ಟ್ರಾನ್ಸ್ ಫಾರ್ಮರ್

ಕಳಪೆಗುಣಮಟ್ಟದ ಟ್ರಾನ್ಸ್ ಫಾರ್ಮರ್

ತುರುವೇಕೆರೆ: ತಾಲ್ಲೂಕಿನ ಬೆಸ್ಕಾಂ ಇಲಾಖೆಯು ರೈತರಿಗೆ ಉತ್ತಮ ಗುಣಮಟ್ಟದ ಟ್ರಾನ್ಸ್ ಫಾರ್ಮರ್ ನೀಡಬೇಕು ಹಾಗು ತಕ್ಷಣ ಸುಟ್ಟ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಾಯಿಸಿಕೊಡಬೇಕೆಂದು ಆಗ್ರಹಿಸಿ ಕಿಸಾನ್ ಸಂಘದ ತಾಲ್ಲೂಕು ಕಾರ್ಯದರ್ಶಿ ಅಜ್ಜೇನಹಳ್ಳಿ ತೋಂಟರಾಜು ಒತ್ತಾಯಿಸಿದ್ದಾರೆ.
ಪಟ್ಟಣದ ಬೆಸ್ಕಾಂ ಜೆಟಿಎ ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಬೆಸ್ಕಾಂ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇಲಾಖೆ ಇತ್ತೀಚೆಗೆ ನೀಡುತ್ತಿರುವ ಟ್ರಾನ್ಸ್ ಫಾರ್ಮರ್ ಗಳು ಪದೇ ಪದೇ ಸುಟ್ಟು ಹೋಗುತ್ತಿದ್ದು ಟ್ರಾನ್ಸ್ ಫಾರ್ಮರ್ ಗಳು ಕಳಪೆ ಗುಣಮಟ್ಟದಿಂದ ಕೂಡಿವೆ.
ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಬರಗಾಲದಿಂದ ರೈತರು ಮಳೆಯಿಲ್ಲದೆ ಕಂಗೆಟ್ಟಿದ್ದು ತೆಂಗು ಅಡಿಕೆ ಬೆಳೆ ಉಳಿಸಿಕೊಳ್ಳಲು ಶತಾಯ ಗತಾಯ ಹೋರಾಡುತ್ತಿದ್ದಾರೆ. ಆದರೆ ಬೆಸ್ಕಾಂ ಇಲಾಖೆ ನೀಡುತ್ತಿರುವ ಟ್ರಾನ್ಸ್ ಫಾರ್ಮರ್ ಗಳು ಪದೇ ಪದೇ ಸುಟ್ಟುಹೋಗುತ್ತಿವೆ.
ಟಿ.ಸಿ.ಸುಟ್ಟ 72 ಗಂಟೆಯೊಳಗೆ ಟ್ರಾನ್ಸ್ ಫಾರ್ಮರ್ಗಳನ್ನು ನೀಡಬೇಕೆಂಬ ನಿಯಮವಿದ್ದರೂ ತಿಂಗಳಾನುಗಟ್ಟಲೆ ರೈತರನ್ನು ಸತಾಯಿಸುತ್ತಾರೆ. ಮಾಚೇನಹಳ್ಳಿ ಗೊಲ್ಲರಹಟ್ಟಿಯಲ್ಲಿ 100ಕೆವಿ. ಟ್ರಾನ್ಸ್ ಫಾರ್ಮರ್ 3 ತಿಂಗಳಲ್ಲಿ 4ಬಾರಿ ಸುಟ್ಟುಹೋಗಿದೆ. ಕಳಪೆ ಗುಣಮಟ್ಟವೇ ಟ್ರಾನ್ಸ್ ಫಾರ್ಮರ್ ಸುಡಲು ಕಾರಣವಾಗಿದ್ದು ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಟ್ರಾನ್ಸ್ ಫಾರ್ಮರ್ ಬದಲಾಯಿಸಿಕೊಡಬೇಕು ಹಾಗೂ ಗುಣಮಟ್ಟದ ಟಿ.ಸಿ. ನೀಡಬೇಕು ಇಲ್ಲವಾದಲ್ಲಿ ಬೆಸ್ಕಾಂ ಕಚೇರಿ ಮುಂದೆ ತಾಲ್ಲೂಕಿನ ರೈತರರೊಂದಿಗೆ ಒಗ್ಗೂಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಚೇನಹಳ್ಳಿ ಸತೀಶ್, ಮಲ್ಲಿಕಾರ್ಜುನ್, ಶಿವಣ್ಣ, ಮಾವಿನಹಳ್ಳಿ ಕಂಚೀರಾಯಪ್ಪ, ಶಿವಶಂಕರಪ್ಪ, ರವೀಶ್, ನಟರಾಜು, ತೀರ್ಥಕುಮಾರ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?