ಬೆಂಗಳೂರು: ಕೋವಿಡ್ ನೆಪದಲ್ಲಿ ಬಂಡವಾಳಗಾರರಿಗೆ ಕಾಮಿ೯ಕ ಕಾನೂನುಗಳಿಂದ ವಿನಾಯಿತಿ ನೀಡಲು ಸುಗ್ರೀವಾಜ್ಞೆ ತರುವ ಯತ್ನವನ್ನು ರಾಜ್ಯ ಸಕಾ೯ರವು ಕೂಡಲೇ ಕೈಬಿಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಆಗ್ರಹಿಸಿವೆ.
ಕೇಂದ್ರ ಸಕಾ೯ರವು ತರಲು ಉದ್ದೇಶಿಸಿರುವ ಕಾಪೊ೯ರೇಟ್ ಬಂಡವಾಳದ ಪರ ಕಾಮಿ೯ಕರ ಕಾನೂನುಗಳ ತಿದ್ದುಪಡಿ ಭಾಗವಾಗಿ ರಾಜಸ್ಥಾನ ಸಕಾ೯ರದಿಂದ ಆರಂಭಿಸಿ, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಉತ್ತರ ಪ್ರದೇಶದ ಸಕಾ೯ರಗಳು ಕೈಗೊಳ್ಳುತ್ತಿರುವ ಕ್ರಮಗಳ ಹಾದಿಯಲ್ಲಿ ಕನಾ೯ಟಕ ರಾಜ್ಯ ಸಕಾ೯ರವು ಮುಂದಾಗ ಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಕೈಗಾರಿಕಾ ರಂಗದಲ್ಲಿ ಮುಂದುವರೆದ ರಾಜ್ಯಗಳ ಸಾಲಿನಲ್ಲಿರುವ ಕನಾ೯ಟಕ ರಾಜ್ಯವನ್ನು ಇಂತಹ ಕ್ರಮಗಳು ಆಥಿ೯ಕವಾಗಿ ದುಬ೯ಲ ಗೊಳಿಸಲಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕೊಳ್ಳುವ ಶಕ್ತಿಯನ್ನು ಅದು ಕುಂದಿಸಲಿದೆ. ಕೋವಿಡ್ ಲಾಕ್ಡೌನ್ ನಿಂದಾಗಿ ಉಂಟಾಗಿರುವ ಆಥಿ೯ಕ ಸಂಕಷ್ಟವು ಮತ್ತಷ್ಟು ತೀವ್ರಗೊಳ್ಳಲಿದೆ. ಕಾಮಿ೯ಕರನ್ನು ಗುಲಾಮರನ್ನಾಗಿಸಲಿದೆ ಎಂದು ಸಿಪಿಐ(ಎಂ) ರಾಜ್ಯ ಸಕಾ೯ರವನ್ನು ಎಚ್ಚರಿಸಿದೆ.
ಇತರೆ ರಾಜ್ಯ ಸಕಾ೯ರಗಳ ಜೊತೆ ಬಂಡವಾಳಗಾರರನ್ನು ಓಲೈಸಲು ಕನಾ೯ಟಕ ರಾಜ್ಯ ಸಕಾ೯ರವು ಪೈಪೋಟಿಗೆ ಇಳಿದು ಕಾಮಿ೯ಕ ಕಾನೂನುಗಳನ್ನು ಅಮಾನತ್ತುಗೊಳಿಸಲು ಅಥವಾ ವಿನಾಯಿತಿ ನೀಡಲು, ಕೆಲಸದ ಅವಧಿ ಹೆಚ್ಚಳ ಮುಂತಾದ ಕ್ರಮಗಳಿಗೆ ಮುಂದಾದರೆ ಅದು ರಾಜ್ಯದ ದುಡಿಯುವ ಜನತೆಗೆ ಮಾಡುವ ದ್ರೋಹವಾಗತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ. ಉದ್ದೇಶಿತ ವಿನಾಯಿತಿಯಿಂದಾಗಿ ರಾಜ್ಯದ 91 ಶೇಕಡ ಕಾಖಾ೯ನೆಗಳು ಕಾಮಿ೯ಕ ಕಾನೂನುಗಳ ,ವ್ಯಾಪ್ತಿಯಿಂದ ಹೊರಗುಳಿಯಲಿವೆ. ಕಾಮಿ೯ಕರನ್ನು ಬಳಸಿ ಬಿಸಾಕಲು ಬಂಡವಾಳಿಗರಿಗೆ ಮುಕ್ತ ಅವಕಾಶ ಲಭಿಸಲಿದೆ. ಅಂತಹ ಅನಾಹುತಕಾರಿ ಕ್ರಮಕ್ಕೆ ರಾಜ್ಯ ಸಕಾ೯ರವು ಮುಂದಾಗಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಉದ್ದೇಶಿತ ತಿದ್ದುಪಡಿಗಳು ಅಥವಾ ಮಾಲೀಕರಿಗೆ ರಿಯಾಯಿತಿ / ವಿನಾಯಿತಿ ನೀಡಲು ಉದ್ದೇಶಿಸಿರುವ ಕ್ರಮಗಳು ಭಾರತದ ಸಂವಿಧಾನದ ವಿಧಿ 21ಮತ್ತು 24 ರ ಸ್ಪಷ್ಟ ಉಲ್ಲಂಘನೆಯಾಗಲಿದೆ. ವಿಧಿ 53 ರಲ್ಲಿನ ನಿದೇ೯ಶಕ ತತ್ವವನ್ನು ನಿರಾಕರಿಸುತ್ತದೆ.ವಿಧಿ 213, 232 A ಮತ್ತು B ಅಡಿಯ ಅಧಿಕಾರದ ದುರುಪಯೋಗವಾಗುತ್ತದೆ. ಭಾರತವು ಸಹಿ ಮಾಡಿರುವ ಅಂತರಾಷ್ಟ್ರೀಯ ಕಾಮಿ೯ಕ ಸಂಘಟನೆಯ ಕೆಲಸದ ಅವಧಿ, ಶಾಸನಬದ್ದ ನಿರೀಕ್ಷಣೆ, ಸುರಕ್ಷತೆ ಮುಂತಾದ ಒಡಂಬಡಿಕೆಗಳಿಗೆ ವ್ಯತಿರಿಕ್ತವಾಗಲಿದೆ ಎಂದು ಸಿಪಿಐ(ಎಂ) ಖಂಡಿಸಿದೆ.