ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನವೆಂಬರ್ 15ರಂದು ಬೆಳಗ್ಗೆ 10.30ಕ್ಕೆ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಪರ ಚಿಂತಕೆ ಕೆ.ದೊರೈರಾಜ್ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.ನುಡಿನಮನ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ದಿನೇಶ್, ಪ್ರೊ. ಜಿ.ಎಂ.ಶ್ರೀನಿವಾಸಯ್ಯ, ಕೋಟಗಾನಹಳ್ಳಿ ರಾಮಯ್ಯ, ಕೆ.ಟಿ.ಶಿವಪ್ರಸಾದ್, ನಟರಾಜ್ ಬೂದಾಳ್, ಜಿ.ವಿ.ಆನಂದಮೂರ್ತಿ, ಕೆ.ಪಿ.ನಟರಾಜ್, ಬಾ.ಹ.ರಮಾಕುಮಾರಿ, ಅನ್ನಪೂರ್ಣ ವೆಂಕಟನಂಜಪ್ಪ, ಕೆಂಚಮಾರಯ್ಯ, ಮಲ್ಲಿಕಾ ಬಸವರಾಜು ಮೊದಲಾದವರು ಭಾಗವಹಿಸುವರು ಎಂದು ಹೇಳಿದರು.
ಚರಕ ಆಸ್ಪತ್ರೆಯ ಡಾ. ಬಸವರಾಜು ಮಾತನಾಡಿ, ಕವಿ ಕೆ.ಬಿ. ಸಿದ್ದಯ್ಯ ಅವರದು ಬಹುಮುಖ ಪ್ರತಿಭೆ. ಜಂಗಮಶೀಲತೆಯ ವ್ಯಕ್ತತ್ವ, ಅವರು ಕೇವಲ ಕವಿ ಮಾತ್ರ ಆಗಿರಲಿಲ್ಲ. ಹೋರಾಟಗಾರ, ಚಿಂತಕ ಮತ್ತು ಚಲನಶೀಲ ವ್ಯಕ್ತಿತ್ವ ಹೊಂದಿದ್ದರು. ಸಮಾಜ ಸುಧಾನರಣೆಗೆ ಹಲವು ರೀತಿಯಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.ಕೆ.ಬಿ. ಸಮ ಸಮಾಜ ನಿರ್ಮಾಣಕ್ಕೆ ಬಹುಮುಖ್ಯವಾಗಿ ಶ್ರಮಿಸಿದರು. ಕಲೆ ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸದಾ ತುಡಿಯುತ್ತಿದ್ದರು. ಹೀಗಾಗಿ ಅವರ ತತ್ವ ಸಿದ್ಧಾಂತಗಳು ಯುವಜನತೆಗೆ ತಲುಪುವಂತಾಗಬೇಕು ಎಂದು ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ನರಸೀಯಪ್ಪ, ರಂಗಕರ್ಮಿ ಹೊನ್ನವಳ್ಳಿ ನಟರಾಜ್, ಯುವ ಮುಖಂಡ ವಿರೂಪಾಕ್ಷ ಡ್ಯಾಗೇರಹಳ್ಳಿ, ಉಪನ್ಯಾಸಕ ಕೊಟ್ಟ ಶಂಕರ್ ಉಪಸ್ಥಿತರಿದ್ದರು.