ತುಮಕೂರು: ಕೊರೊನಾ ಸೋಂಕಿನಿಂದ ಶಿರಾ ಮೂಲದ ವ್ಯಕ್ತಿಯೊಬ್ಬರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ತುಮಕೂರಿನಲ್ಲಿ ಮೊದಲ ಸಾವಾಗಿದೆ.
,ಸೋಂಕು ತಗುಲಿದ 3ನೇ ದಿನಕ್ಕೆ ಮೃತಪಟ್ಟಿದ್ದಾರೆ.
ಈತ ತುಮಕೂರಿನಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ 13 ಜನರ ಜೊತೆಗೆ ಪ್ರಯಾಣ ಮಾಡಿದ್ದರು. ದೆಹಲಿಯ ಜಾಮೀಯಾ ಮಸೀದಿಯಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ಮಾರ್ಚ್ 11ರಂದು ದೆಹಲಿಯಿಂದ ಬೆಂಗಳೂರಿನ ಯಶವಂತಪುರಕ್ಕೆ ಬಂದಿದ್ದರು. ಮೃತ ವ್ಯಕ್ತಿ 33 ಮಂದಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.